India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್

|

Updated on: Jan 12, 2021 | 7:36 PM

ಸ್ಮಿತ್ ಸಿಡ್ನಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಗಾರ್ಡ್ ಅನ್ನು ಬದಲಾಯಿಸಲಿಲ್ಲ, ಹಾಗೇನಾದರೂ ಆಗಿದ್ದರೆ ಇಂಡಿಯಾದ ಆಟಗಾರರು ಸುಮ್ಮನಿರುತ್ತಿದ್ದರೆ? ಟೆಸ್ಟ್ ಪಂದ್ಯಗಳು ನಡೆಯುವಾಗ ಸ್ಮಿತ್ ಹಾಗೆ ಕ್ರೀಸಿಗೆ ಬಂದು ಹೋಗುವುದನ್ನು ಮಾಡುತ್ತಿರುತ್ತಾರೆ ಎಂದು ಟಿಮ್ ಪೈನ್ ಹೇಳಿದ್ದಾರೆ.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್
ಟಿಮ್ ಪೈನ್ ಮತ್ತು ಸ್ಟೀವ್ ಸ್ಮಿತ್
Follow us on

ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್ ಅಳಿಸುತ್ತಿರುವುದು ವಿಡಿಯೊವೊಂದರಲ್ಲಿ ಸೆರೆಯಾದ ನಂತರ ಜನರರಿಂದ ತೀವ್ರ ಟೀಕೆಗೊಳಗಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ರಕ್ಷಣೆಗೆ ಟೀಮಿನ ನಾಯಕ ಟಿಮ್ ಪೈನ್ ಸೋಮವಾರ ಧಾವಿಸಿದ್ದಾರೆ.

ಸಿಡ್ನಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಪೈನ್, ‘ನಾನು ಸ್ಟೀವ್​ ಜೊತೆ ಮಾತಾಡಿದೆ, ಅವರು ತುಂಬಾ ಬೇಸರಗೊಂಡಿದ್ದಾರೆ. ಸ್ಟೀವ್ ಟೆಸ್ಟ್​ ಕ್ರಿಕೆಟ್ ಅಡುವುದನ್ನು ನೀವು ನೋಡಿರುವಿರಾದರೆ, ಅವರು ಹಾಗೆ ದಿನದಲ್ಲಿ ಐದಾರು ಸಲ ಕ್ರೀಸಿಗೆ ಬಂದು ಹೋಗುವುದನ್ನು ಗಮನಿಸಿರುತ್ತೀರಿ’ ಎಂದು ಹೇಳಿದರು.

‘ಅವರು ಯಾವಾಗಲೂ ಬ್ಯಾಟಿಂಗ್ ಕ್ರೀಸಿನಲ್ಲಿ ನಿಂತಿರುತ್ತಾರೆ. ಶ್ಯಾಡೊ ಬ್ಯಾಟಿಂಗ್ ಅಂತ ಹೇಳುತ್ತೀವಲ್ಲ, ಅದನ್ನವರು ಮಾಡುತ್ತಿರುತ್ತಾರೆ. ಅಂಥ ಹಲವಾರು ಕ್ರಿಯೆಗಳನ್ನು ಅವರು ಪ್ರತಿನಿತ್ಯ ಮಾಡುತ್ತಿರುತ್ತಾರೆ, ಬ್ಯಾಟಿಂಗ್ ಗಾರ್ಡನ್ನು ಆಗಾಗ ಮಾರ್ಕ್ ಮಾಡುವುದು ಅವುಗಳಲ್ಲೊಂದು’ ಎಂದು ಪೈನ್ ಹೇಳಿದ್ದಾರೆ.

ಸ್ಮಿತ್ ಗಾರ್ಡ್​ ಮಾರ್ಕ್​ಗಳನ್ನು ಅಳಿಸುವುದಾಗಲೀ, ಬದಲಾಯಿಸುವುದಾಗಲೀ ಮಾಡಿದ್ದರೆ, ಇಂಡಿಯಾದ ಆಟಗಾರರು ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿರುತ್ತಿದ್ದರು ಎಂದು ಪೈನ್ ಹೇಳಿದ್ದಾರೆ.

ಬ್ಯಾಟಿಂಗ್ ಗಾರ್ಡ್​ ಅಳಿಸುತ್ತಿರುವ ಸ್ಮಿತ್

‘ಸ್ಮಿತ್ ಖಂಡಿತವಾಗಿಯೂ ಗಾರ್ಡ್​ಗಳನ್ನು ಬದಲಾಯಸಿಲಿಲ್ಲ. ಹಾಗೇನಾದರೂ ಆಗಿದ್ದರೆ, ಇಂಡಿಯಾದ ಆಟಗಾರರು ಸುಮ್ಮನಿರುತ್ತಿದ್ದರೆ? ಆದರೆ ಟೆಸ್ಟ್ ಮತ್ತು ಸ್ಮಿತ್​ರೊಂದಿಗೆ ನಾನು ಆಡಿರುವ ಶೀಲ್ಡ್​ ಪಂದ್ಯಗಳಲ್ಲಿ ಹಾಗೆ ಮಾಡುವದನ್ನು ಅನೇಕ ಸಲ ನೋಡಿದ್ದೇನೆ. ಮೈದಾನದಲ್ಲಿರುವಾಗ ಅವರು ಕ್ರೀಸಿನ ಬಳಿ ಹೋಗಿ, ತಾನು ಬ್ಯಾಟಿಂಗ್ ಮಾಡುತ್ತಿರುವಂತೆ ಕಲ್ಪಿಸಿಕೊಂಡು ಹೇಗೆ ಆಡಬಹುದು ಅನ್ನುವುದನ್ನು ಮಂಥನ ಮಾಡುತ್ತಿರುತ್ತಾರೆ’ ಎಂದು ಪೈನ್ ಕೇಳಿದ್ದಾರೆ.

‘ಅವರು ಪಂತ್ ಬ್ಯಾಟಿಂಗ್ ಗಾರ್ಡ್​ ಅನ್ನು ಬದಲಾಯಿಸಿರುವ ಅಥವಾ ಅಂಥ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯೇ ಇಲ್ಲ. ಅವರ ಹಲವಾರು ಮ್ಯಾನರಿಸಂಗಳಲ್ಲಿ ಅದೂ ಒಂದು. ನಾನು ಮತ್ತೊಮ್ಮೆ ಹೇಳುತ್ತೇನೆ, ಸ್ಮಿತ್ ಬ್ಯಾಟಿಂಗ್​ ಗಾರ್ಡ್​ ಅನ್ನು ಬದಲಾಯಿಸೇ ಇಲ್ಲ,’ ಎಂದು ಪೈನ್ ಹೇಳಿದ್ದಾರೆ.

ವಿಡಿಯೋದಲ್ಲಿ ಬಟಾಬಯಲು.. ಆಸ್ಟ್ರೇಲಿಯಾ ಆಟಗಾರ ಸ್ಮಿತ್​ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು

Published On - 6:42 pm, Tue, 12 January 21