India vs England Test Series: ತಂಡಕ್ಕೆ ಮರಳಿದ ಉಮೇಶ ಯಾದವ್, ಶಾರ್ದುಲ್ ಠಾಕೂರ್​ಗೆ ಕೊಕ್

India vs England Test Series: ತಂಡಕ್ಕೆ ಮರಳಿದ ಉಮೇಶ ಯಾದವ್, ಶಾರ್ದುಲ್ ಠಾಕೂರ್​ಗೆ ಕೊಕ್
ಉಮೇಶ್ ಯಾದವ್

ವೇಗದ ಬೌಲರ್ ಶಾರ್ದುಲ್ ಠಾಕೂರ್ ಸ್ಥಾನದಲ್ಲಿ ಆಸ್ಟ್ರೇಲಿಯಾದಲ್ಲಿ ಗಾಯಗೊಂಡು ಸರಣಿ ಮಧ್ಯಭಾಗದಲ್ಲೇ ಸ್ವದೇಶಕ್ಕೆ ಮರಳಿದ್ದ ಉಮೇಶ ಯಾದವ್​ರನ್ನು ಬಿಸಿಸಿಐ ಭಾರತ ತಂಡಕ್ಕೆ ಆಯ್ಕೆ ಮಾಡಿದೆ.

Arun Belly

|

Feb 17, 2021 | 6:15 PM

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ನಲ್ಲಿ 317 ರನ್​ಗಳ ಆಧಿಕಾರಯುತ ಜಯ ಗಳಿಸಿದ ಭಾರತೀಯ ತಂಡದಲ್ಲಿ ಅಹಮದಾಬಾದ್​ನಲ್ಲಿ ನಡೆಯುವ ಮೂರನೇ ಮತ್ತು ನಾಲ್ಕನೇ ಟೆಸ್ಟ್​ ಪಂದ್ಯಗಳಿಗೆ ಕೇವಲ ಒಂದು ಬದಲಾವಣೆಯನ್ನು ಮಾಡಲಾಗಿದೆ. ಕೊನೆಯೆರಡು ಟೆಸ್ಟ್​ಗಳಿಗೆ ತಂಡವನ್ನು ಪ್ರಕಟಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿಯು ವೇಗದ ಬೌಲರ್ ಶಾರ್ದುಲ್ ಠಾಕೂರ್ ಸ್ಥಾನದಲ್ಲಿ ಆಸ್ಟ್ರೇಲಿಯಾದಲ್ಲಿ ಗಾಯಗೊಂಡು ಸರಣಿ ಮಧ್ಯಭಾಗದಲ್ಲೇ ಸ್ವದೇಶಕ್ಕೆ ಮರಳಿದ್ದ ಉಮೇಶ ಯಾದವ್​ರನ್ನು ಆಯ್ಕೆ ಮಾಡಿದೆ. ಮೂರು ಮತ್ತು ನಾಲ್ಕನೇ ಟೆಸ್ಟ್​ ಪಂದ್ಯಗಳೆರಡೂ ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಫೆಬ್ರುವರಿ 20 ರಿಂದ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿಯಲ್ಲಿ ಅಡಲು ಸಾಧ್ಯವಾಗುವಂತೆ ಠಾಕೂರ್​ ಅವರನ್ನು ಭಾರತೀಯ ಟೀಮಿನಿಂದ ಬಿಡುಗಡೆ ಮಾಡಲಾಗಿದೆ.

‘ಅಂತಿಮ ಫಿಟ್ನೆಸ್ ಟೆಸ್ಟ್ ಆದ ನಂತರ ಉಮೇಶ್ ಯಾದವ್ ಟೀಮನ್ನು ಅಹಮದಾಬಾದಿನಲ್ಲಿ ಸೇರಿಕೊಳ್ಳಲಿದ್ದಾರೆ. ಶಾರ್ದುಲ್ ಠಾಕೂರ್ ಅವರನ್ನು ಟೀಮಿನಿಂದ ಬಿಡುಗಡೆ ಮಾಡಲಾಗಿದೆ. ಅವರು ವಿಜಯ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಬಹುದಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Team India

ಎರಡನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ​

ಯಾದವ್​ರಂತೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂ.ಡು ಭಾರತಕ್ಕೆ ಹಿಂತಿರುಗಿದ ಮೊಹಮ್ಮದ್ ಶಮಿ ಅಥವಾ ನವದೀಪ್ ಸೈನಿಯನ್ನು ಭಾರತೀಯ ಟೀಮಿಗೆ ಆಯ್ಕೆ ಮಾಡಬಹುದೆಂದು ನಿರೀಕ್ಷಿಸಿಲಾಗಿತ್ತು. ಅದರೆ ಅವರಿಬ್ಬರೂ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂಬ ವದಂತಿಗಳಿವೆ. ಅವರಿಬ್ಬರಂತೆ ಮೂರು ಮತ್ತು ನಾಲ್ಕನೇ ಟೆಸ್ಟ್​ಗಳಿಗೆ ಅವಕಾಶ ಮಿಸ್ ಮಾಡಿಕೊಂಡಿರುವ ಮತ್ತೊಬ್ಬ ನತದೃಷ್ಟ ಆಟಗಾರನೆಂದರೆ ಆಲ್​ರೌಂಡರ್ ರವೀಂದ್ರ ಜಡೇಜಾ.

ಇದನ್ನೂ ಓದಿ: India vs England | ಟೀಂ ಇಂಡಿಯಾಕ್ಕೆ ಆಘಾತ, ಇಂಜುರಿಯಿಂದ ಚೇತರಿಸಿಕೊಳ್ಳದ ಜಡೇಜಾ ಇಂಗ್ಲೆಂಡ್ ಟೆಸ್ಟ್​ ಸರಣಿಯಿಂದ ಔಟ್..!

ಅಹಮದಾಬಾದ್​ ಟೆಸ್ಟ್​ಗಳಿಗೆ ಭಾರತದ ತಂಡ ಇಂತಿದೆ.

ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಮಾಯಾಂಕ್ ಅಗರ್​ವಾಲ್, ಶುಭ್ಮನ್​ ಗಿಲ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮಹಮ್ಮದ್​ ಸಿರಾಜ್.

ಬುಧವಾರದಂದು ಸಭೆ ಸೇರಿದ ಆಯ್ಕೆ ಸಮಿತಿಯು ಐವರು ನೆಟ್ ಬೌಲರ್​ಗಳನ್ನು ಹಾಗೂ ಇಬ್ಬರು ಸ್ಟ್ಯಾಂಡ್​ಬೈ ಅಟಗಾರರನ್ನೂ ಹೆಸರಿಸಿತು.

ನೆಟ್ ಬೌಲರ್​ಗಳು: ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್, ಕೃಷ್ಣಪ್ಪ ಗೌತಮ್, ಸೌರಭ್ ಕುಮಾರ್

ಸ್ಟ್ಯಾಂಡ್ ಬೈ ಆಟಗಾರರು: ಕೆಎಸ್ ಭರತ್, ರಾಹುಲ್ ಚಹರ್

Follow us on

Related Stories

Most Read Stories

Click on your DTH Provider to Add TV9 Kannada