ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ; 2 ವರ್ಷ ನಿಷೇಧಕ್ಕೊಳಗಾದ ಕುಸ್ತಿಪಟು ಸುಮಿತ್ ಮಲಿಕ್! ಒಲಿಂಪಿಕ್ಸ್‌ನಿಂದಲೂ ಔಟ್
ಬಿ ಸ್ಯಾಂಪಲ್‌ನಲ್ಲಿ ನಿಷೇಧಿತ ವಸ್ತುವಿನ ಕುರುಹುಗಳು ಇರುವುದು ಕಂಡುಬಂದ ನಂತರ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಥವಾ ಸ್ವೀಕರಿಸಲು ಮಲಿಕ್ ಅವರಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ ಅವರ ಭರವಸೆ ಜುಲೈ 2 ರಂದು ಕೊನೆಗೊಂಡಿದೆ. ಅವರ ಬಿ ಸ್ಯಾಂಪಲ್‌ನಲ್ಲಿ ನಿಷೇಧಿತ ವಸ್ತುವಿನ ಕುರುಹುಗಳು ಇರುವುದು ಕಂಡುಬಂದ ನಂತರ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಥವಾ ಸ್ವೀಕರಿಸಲು ಮಲಿಕ್ ಅವರಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಸೋಫಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅದೇ ಪಂದ್ಯಾವಳಿಯಲ್ಲಿ ಅವರು 125 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಜೂನ್ 30 ರಂದು ನಡೆಸಿದ ಅವರ ಬಿ ಮಾದರಿ ಪರೀಕ್ಷೆಯಲ್ಲಿ, ಅದೇ ನಿಷೇಧಿತ ವಸ್ತುವಿನ ಕುರುಹುಗಳು ಕಂಡುಬಂದಿವೆ.
ಕಾಮನ್ವೆಲ್ತ್ ಗೇಮ್ಸ್ 2018 ಚಿನ್ನದ ಪದಕ ವಿಜೇತ ಮಲಿಕ್ ತನ್ನ ಬಲ ಮೊಣಕಾಲಿನ ನೋವಿನಿಂದಾಗಿ ನೋವು ನಿವಾರಕಗಳನ್ನು ತೆಗೆದುಕೊಂಡಿದ್ದೇನೆ ಎಂದು ಪಿಟಿಐಗೆ ತಿಳಿಸಿದ್ದಾರೆ. ಭಾರತದ ವ್ರೆಸ್ಲಿಂಗ್ ಫೆಡರೇಶನ್‌ನ ಅಧಿಕಾರಿಯೊಬ್ಬರು, ಸುಮಿತ್ ಮಲಿಕ್ ಅವರ ಬಿ ಸ್ಯಾಂಪಲ್ ಕೂಡ ಸಕಾರಾತ್ಮಕವಾಗಿದೆ. ಯುಡಬ್ಲ್ಯೂಡಬ್ಲ್ಯೂಎ ಜೂನ್ 3 ರಿಂದ ಜಾರಿಗೆ ಬರುವಂತೆ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ. ಅವರಿಗೆ ಉತ್ತರಿಸಲು ಒಂದು ವಾರವ ಕಾಲವಕಾಶವಿದೆ. ಅವರು ವಿಚಾರಣೆಯನ್ನು ಎದುರಿಸಬಹುದು ಅಥವಾ ಶಿಕ್ಷೆಯನ್ನು ಸ್ವೀಕರಿಸಬಹುದು. ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಮತ್ತು ಅವರ ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಲಿಕ್ ಅವರ ಆಪ್ತ ಮೂಲಗಳು ತಿಳಿಸಿವೆ.
ನಿರ್ಧಾರ ಬರುವವರೆಗೂ ಒಲಿಂಪಿಕ್ಸ್ ಆಡುವಂವತಿಲ್ಲ ಒಲಿಂಪಿಕ್ ಅರ್ಹತಾ ಪಂದ್ಯಗಳಿಗಿಂತ ಮುಂಚಿತವಾಗಿ ರಾಷ್ಟ್ರೀಯ ಶಿಬಿರದಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಅದಕ್ಕೆ ಸಂಬಂಧಿಸದಂತೆ ಅವರು ಔಷದಿ ತೆಗೆದುಕೊಂಡಿದ್ದಾರೆ. ಆದರೆ ಈ ವಿಷಯ ವಿಚಾರಣೆಗೆ ಬರಲು ಮತ್ತು ತೀರ್ಪು ಬರಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅವರು ಒಲಿಂಪಿಕ್ಸ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಸುಮಿತ್ ಮಲಿಕ್ ಅವರು ಏಪ್ರಿಲ್‌ನಲ್ಲಿ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಭಾಗವಹಿಸಿದ್ದರು ಆದರೆ ಅಲ್ಲಿ ಕೋಟಾ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಅವರು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಆಡಿದ್ದರು ಆದರೆ ಅಲ್ಲಿಯೂ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ. ಆದಾಗ್ಯೂ, ಮೇನಲ್ಲಿ ಸೋಫಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಅವರು ಫೈನಲ್ ತಲುಪಿದರು ಮತ್ತು ಕೋಟಾವನ್ನು ಪಡೆದರು. ಆದರೆ, ಗಾಯದಿಂದಾಗಿ ಅವರು ಫೈನಲ್‌ನಲ್ಲಿ ಆಡಲಿಲ್ಲ.