ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್. ಕ್ರಿಕೆಟ್ ಜಗತ್ತು ಕಂಡ ಒನ್ ಆಫ್ ದಿ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಕಂಪ್ಲೀಟ್ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಅನ್ನೋ ಹೆಗ್ಗಳಿಕೆ ಗವಾಸ್ಕರ್ರದ್ದು. ಅದ್ರಲ್ಲೂ ಸಚಿನ್ ತೆಂಡುಲ್ಕರ್ರಂತ ಮಹಾನ್ ಕ್ರಿಕೆಟಿಗ ದಾಖಲೆ ವೀರನಾಗೋದಕ್ಕೆ ಗವಾಸ್ಕರ್ ಸಾಧನೆಯ ಸ್ಫೂರ್ತಿಯೇ ಕಾರಣ.
ಇಂತಹ ಸುನಿಲ್ ಗವಾಸ್ಕರ್ರನ್ನ ಯಾರಾದ್ರೂ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ ಅಂದ್ರೆ ನಂಬೋದಕ್ಕೆ ಸಾಧ್ಯನಾ? ನೋ ಚಾನ್ಸ್ ಅಂತ ನೀವು ಹೇಳೆ ಹೇಳ್ತೀರಾ? ಆದ್ರೀಗ ಗವಾಸ್ಕರ್ ಜೊತೆಯಲ್ಲೇ ಭಾರತ ತಂಡವನ್ನ ಪ್ರತಿನಿಧಿಸಿದ್ದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ, ಸುನಿಲ್ ಗವಾಸ್ಕರ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ ಎಂದಿದ್ದಾರೆ.
ಅರೇ ಇದೇನಿದು ಭಾರತೀಯ ಕ್ರಿಕೆಟ್ನ ಬ್ಯಾಟಿಂಗ್ ಮಾಣಿಕ್ಯ ಎನಿಸಿಕೊಂಡಿರೋ ಗವಾಸ್ಕರ್ರನ್ನ ಮೋರೆ, ಯಾವ ಅರ್ಥದಲ್ಲಿ ಹೀಗೆಂದು ಅಂದ್ಕೋಂತಿದ್ದಾರೆ ಎಂದ್ರಾ. ಅಲ್ಲೇ ಇರೋದು ಇಂಟ್ರಸ್ಟಿಂಗ್ ಸ್ಟೋರಿ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಣ್ ಮೋರೆ, ಈ ಮಾತನ್ನ ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದಾರೆ.
ನೆಟ್ಸ್ನಲ್ಲಿ ಗವಾಸ್ಕರ್ ಕೆಟ್ಟ ಬ್ಯಾಟ್ಸ್ಮನ್
– ಕಿರಣ್ ಮೋರೆ, ಭಾರತ ತಂಡದ ಮಾಜಿ ವಿಕೆಟ್ ಕೀಪರ್
ಹೀಗೆ ನೆಟ್ಸ್ನಲ್ಲಿ ಗವಾಸ್ಕರ್ ಆಟವನ್ನ ಅತ್ಯಂತ ಕಳಪೆ ಎಂದಿರೋ ಮೋರೆ, ಗವಾಸ್ಕರ್ ಅಂತರಾಷ್ಟ್ರೀಯ ಪಂದ್ಯದಲ್ಲಿ ಕ್ರೀಸ್ಗೆ ಎಂಟ್ರಿ ಕೊಟ್ರೆ ಕಿಂಗ್ ಆಗುತ್ತಿದ್ರು ಅಂತಾ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ಗವಾಸ್ಕರ್ ಏಕಾಗ್ರತೆ ಹೇಗಿತ್ತು ಅನ್ನೋದನ್ನು ಮೋರೆ, ಅದ್ಭುತವಾಗಿ ವರ್ಣಿಸಿದ್ದಾರೆ.
ದೇವರು ಸನ್ನಿಗೆ ಏಕಾಗ್ರತೆ ಕರುಣಿಸಿದ್ದಾನೆ.
‘ದೇವರು ಸನ್ನಿಗೆ ಶಿಸ್ತು ಮತ್ತು ಏಕಾಗ್ರತೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾನೆ. ಅವರದ್ದು ನಂಬಲಸಾಧ್ಯವಾದ ಏಕಾಗ್ರತೆ. ಅವರು ಆಡುತ್ತಿದ್ದಾಗ, ಅವರೆದುರು ಯಾರೇ ಹೋಗಿ ನಿಂತರೂ, ಕುಣಿದರೂ, ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅತ್ತ ಕಡೆ ಗಮನವನ್ನೂ ಕೊಡುತ್ತಿರಲಿಲ್ಲ. ಆಡೋದರ ಮೇಲೆ ಮಾತ್ರ ಅವರ ನಿಗಾ ಇರುತ್ತಿತ್ತು.’
– ಕಿರಣ್ ಮೋರೆ, ಭಾರತ ತಂಡದ ಮಾಜಿ ವಿಕೆಟ್ ಕೀಪರ್
ಹೀಗೆ ಕಿರಣ್ ಮೋರೆ, ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕ್ವಾಲಿಟಿಯನ್ನ ಅದ್ಭುತವಾಗಿ ವರ್ಣಿಸಿದ್ದಾರೆ. ನಿಜಕ್ಕೂ ಮೋರೆ ಹೇಳೋ ಪ್ರಕಾರ ತಮ್ಮ ಶಿಸ್ತು ಮತ್ತು ಏಕಾಗ್ರತೆಯಿಂದಲೇ ಗವಾಸ್ಕರ್, ಸಚಿನ್ಗಿಂತ ಮೊದಲೇ ಭಾರತದ ಕ್ರಿಕೆಟ್ ವೈಭವ ಶುರುವಾಗುವಂತೆ ಮಾಡಿರೋದು.
Published On - 12:18 pm, Mon, 6 July 20