AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ರುವ್ ಜುರೆಲ್ ನಾಯಕ: ಕಣಕ್ಕಿಳಿದ ಕೆಎಲ್ ರಾಹುಲ್, ಸಿರಾಜ್

India A vs Australia A: ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಣ 4 ದಿನಗಳ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಲಕ್ನೋನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು ಮೊದಲ ಇನಿಂಗ್ಸ್​ನಲ್ಲಿ 537 ರನ್ ಪೇರಿಸಿದ್ದರು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಎ 532 ರನ್​ ಕಲೆಹಾಕಿದ್ದರು. ಇದೀಗ ಉಭಯ ತಂಡಗಳ ನಡುವಣ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ.

ಧ್ರುವ್ ಜುರೆಲ್ ನಾಯಕ: ಕಣಕ್ಕಿಳಿದ ಕೆಎಲ್ ರಾಹುಲ್, ಸಿರಾಜ್
Team India
ಝಾಹಿರ್ ಯೂಸುಫ್
|

Updated on:Sep 23, 2025 | 10:08 AM

Share

ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಣ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಎ ತಂಡದ ನಾಯಕ ಧ್ರುವ್ ಜುರೆಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಮೊಹಮ್ಮದ್ ಸಿರಾಜ್ ಹಾಗೂ ಕೆಎಲ್ ರಾಹುಲ್ ಭಾರತ ಎ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ ಇದೀಗ ಇಬ್ಬರು ಸ್ಟಾರ್ ಆಟಗಾರರು ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಅಲಭ್ಯ:

ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಆದರೆ ದ್ವಿತೀಯ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಶ್ರೇಯಸ್ ಅಯ್ಯರ್ ದ್ವಿತೀಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ಧ್ರುವ್ ಜುರೆಲ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಇದೀಗ ಧ್ರುವ್ ಜುರೆಲ್ ನಾಯಕತ್ವದಡಿಯಲ್ಲಿ ಅನುಭವಿ ಆಟಗಾರರಾದ ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಕಣಕ್ಕಿಳಿದಿದ್ದಾರೆ. ಅದರಂತೆ ಭಾರತ ಎ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಭಾರತ ಎ ಪ್ಲೇಯಿಂಗ್ ಇಲೆವೆನ್: ಎನ್ ಜಗದೀಸನ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ನಿತೀಶ್ ಕುಮಾರ್ ರೆಡ್ಡಿ , ಧ್ರುವ್ ಜುರೆಲ್ (ನಾಯಕ) , ಆಯುಷ್ ಬದೋನಿ , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್ , ಗುರ್ನೂರ್ ಬ್ರಾರ್ , ಮಾನವ್ ಸುತಾರ್.

ಆಸ್ಟ್ರೇಲಿಯಾ ಎ ಪ್ಲೇಯಿಂಗ್ ಇಲೆವೆನ್: ಸ್ಯಾಮ್ ಕೊನ್​ಸ್ಟಾಸ್ , ಕ್ಯಾಂಪ್ಬೆಲ್ ಕೆಲ್ಲಾವೇ , ನಾಥನ್ ಮೆಕ್‌ಸ್ವೀನಿ (ನಾಯಕ) , ಆಲಿವರ್ ಪೀಕ್ , ಕೂಪರ್ ಕೊನೊಲಿ , ಜೋಶ್ ಫಿಲಿಪ್ (ವಿಕೆಟ್ ಕೀಪರ್) , ಜ್ಯಾಕ್ ಎಡ್ವರ್ಡ್ಸ್ , ವಿಲ್ ಸದರ್ಲ್ಯಾಂಡ್ , ಕೋರಿ ರೋಚಿಸಿಯೋಲಿ , ಟಾಡ್ ಮರ್ಫಿ , ಹೆನ್ರಿ ಥಾರ್ನ್‌ಟನ್.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಕರುಣ್ ನಾಯರ್​ಗೆ ಗೇಟ್ ಪಾಸ್?

ಭಾರತ ಎ ತಂಡ: ಧ್ರುವ್ ಜುರೆಲ್ (ನಾಯಕ), ಎನ್ ಜಗದೀಸನ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ನಿತೀಶ್ ಕುಮಾರ್ ರೆಡ್ಡಿ , , ಆಯುಷ್ ಬದೋನಿ , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್ , ಗುರ್ನೂರ್ ಬ್ರಾರ್ , ಮಾನವ್ ಸುತಾರ್, ಅಭಿಮನ್ಯು ಈಶ್ವರನ್, ತನುಷ್ ಕೋಟ್ಯಾನ್, ಹರ್ಷ್ ದುಬೆ, ಖಲೀಲ್ ಅಹ್ಮದ್, ಯಶ್ ಠಾಕೂರ್.

Published On - 10:05 am, Tue, 23 September 25