Team India: ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅನುಮಾನ..!

| Updated By: ಝಾಹಿರ್ ಯೂಸುಫ್

Updated on: Oct 25, 2022 | 8:32 PM

T20 World Cup 2022: ಹಾರ್ದಿಕ್ ಪಾಂಡ್ಯ ಬ್ಯಾಟ್​ನಿಂದ 2 ಸಿಕ್ಸ್ ಹಾಗೂ 1 ಫೋರ್ ಮಾತ್ರ ಮೂಡಿಬಂದಿತ್ತು. ಅಂದರೆ 24 ರನ್​ಗಳನ್ನು ಹಾರ್ದಿಕ್ ಪಾಂಡ್ಯ ಓಡಿ ಕಲೆಹಾಕಿದ್ದರು.

Team India: ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅನುಮಾನ..!
Hardik pandya
Follow us on

T20 World Cup 2022: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದ ಟೀಮ್ ಇಂಡಿಯಾಗೆ (Team India) ಇದೀಗ ಆತಂಕ ಎದುರಾಗಿದೆ. ಅದು ಕೂಡ ಸ್ಟಾರ್ ಆಟಗಾರನ ಗಾಯದ ಸಮಸ್ಯೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಉತ್ತಮವಾಗಿ ಬ್ಯಾಟ್ ಬೀಸಿದರೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಅಂತಿಮ ಓವರ್​ವರೆಗೂ ಕ್ರೀಸ್​ನಲ್ಲಿದ್ದ ಪಾಂಡ್ಯ ಕಲೆಹಾಕಿದ್ದು 37 ಎಸೆತಗಳಲ್ಲಿ ಕೇವಲ 40 ರನ್​ ಮಾತ್ರ.

ಇತ್ತ ಪಾಂಡ್ಯ ಬ್ಯಾಟ್​ನಿಂದ 2 ಸಿಕ್ಸ್ ಹಾಗೂ 1 ಫೋರ್ ಮಾತ್ರ ಮೂಡಿಬಂದಿತ್ತು. ಅಂದರೆ 24 ರನ್​ಗಳನ್ನು ಹಾರ್ದಿಕ್ ಪಾಂಡ್ಯ ಓಡಿ ಕಲೆಹಾಕಿದ್ದರು. ಇದೀಗ ಅದುವೇ ಹೊಸ ಸಮಸ್ಯೆಯ ಭೀತಿಯನ್ನುಂಟು ಮಾಡಿದೆ. ಅಂದರೆ ಪಾಕ್ ವಿರುದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಬಳಲಿದ್ದ ಪಾಂಡ್ಯ ಬ್ಯಾಟಿಂಗ್​ ವೇಳೆಯೂ ಓಡುವ ಮೂಲಕ ರನ್​ ಕಲೆಹಾಕಿದ್ದರು. ಇದರಿಂದ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

ಹೀಗಾಗಿ ಸಿಡ್ನಿಯಲ್ಲಿ ನಡೆದ ಅಭ್ಯಾಸದ ವೇಳೆ ಹಾರ್ದಿಕ್ ಪಾಂಡ್ಯಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಏಕೆಂದರೆ ಟೀಮ್ ಇಂಡಿಯಾ ಮುಂದಿನ ಪಂದ್ಯವನ್ನು ನೆದರ್​ಲ್ಯಾಂಡ್ಸ್ ವಿರುದ್ಧ ಆಡಲಿದೆ. ಈ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯಗೆ ಪೂರ್ಣ ವಿಶ್ರಾಂತಿ ನೀಡಿದರೆ ಉಳಿದ ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಅಲ್ಲದೆ ಪಾಂಡ್ಯರನ್ನು ಗಾಯದ ಸಮಸ್ಯೆಯಿಂದ ಕೂಡ ಪಾರು ಮಾಡಬಹುದು. ಹೀಗಾಗಿ ನೆದರ್​ಲ್ಯಾಂಡ್ಸ್​ ವಿರುದ್ಧ ಹಾರ್ದಿಕ್ ಪಾಂಡ್ಯರನ್ನು ಕಣಕ್ಕಿಳಿಸುವುದು ಅನುಮಾನ ಎನ್ನಲಾಗಿದೆ. ಹೀಗಾಗಿಯೇ ಅವರು ಮಂಗಳವಾರ ನಡೆದ ಅಭ್ಯಾಸದಲ್ಲಿ ಕಾಣಿಸಿಕೊಂಡಿರಲಿಲ್ಲ.

ಇತ್ತ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ಪರಿಪೂರ್ಣ ಆಲ್​ರೌಂಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಂಡದಲ್ಲಿ ಹೆಚ್ಚುವರಿ ಬೌಲರ್ ಆಗಿದ್ದರೂ ಅವರಿಂದ 4 ಓವರ್​ಗಳನ್ನು ಬೌಲಿಂಗ್ ಮಾಡಿಸಲಾಗುತ್ತಿದೆ. ಹಾಗೆಯೇ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುವ ಮೂಲಕ ರನ್​ ತಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಇದನ್ನೂ ಓದಿ: India vs Pakistan: ಕ್ಲೀನ್ ಬೌಲ್ಡ್, 3 ರನ್​: ಐಸಿಸಿ ನಿಯಮ ಮತ್ತು ವಿವಾದ

ಇದಲ್ಲದೆ ಬ್ಯಾಟಿಂಗ್​ನಲ್ಲೂ ಪಾಂಡ್ಯ ಅವರ ಇನಿಂಗ್ಸ್ ನಿರ್ಣಾಯಕ. ಹೀಗಾಗಿ ನೆದರ್​ಲ್ಯಾಂಡ್ಸ್​ ವಿರುದ್ಧ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಸೌತ್ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾಂಡ್ಯರನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಕುಂಗ್​ಫು ಪಾಂಡ್ಯ ಕಾಣಿಸಿಕೊಳ್ಳುವುದು ಅನುಮಾನ ಎಂದೇ ಹೇಳಬಹುದು.

ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

 

 

Published On - 8:31 pm, Tue, 25 October 22