T20 World Cup 2024: ಇಂದಿನಿಂದ ಸೂಪರ್-8 ಸುತ್ತಿನ ಕಾದಾಟ ಶುರು
T20 World Cup 2024: ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
T20 World Cup 2024: ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿನ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿಯಲಿದೆ. ಇನ್ನು ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಕಾದಾಟ ನಡೆಸಲಿದೆ.
ಸೂಪರ್-8 ಎಂದು ಕರೆಯಲಾಗುವ ಈ ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್-1 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡರೆ, ಗ್ರೂಪ್-2 ರಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್ ತಂಡಗಳಿವೆ.
ಎರಡು ಗುಂಪುಗಳಲ್ಲಿರುವ ತಂಡಗಳು:
- ಗ್ರೂಪ್-1
- ಭಾರತ
- ಆಸ್ಟ್ರೇಲಿಯಾ
- ಅಫ್ಘಾನಿಸ್ತಾನ್
- ಬಾಂಗ್ಲಾದೇಶ್
ಇದನ್ನೂ ಓದಿ: T20 World Cup 2024: ವಿಶ್ವ ದಾಖಲೆಯ ವಿಜಯ ಸಾಧಿಸಿದ ಇಂಗ್ಲೆಂಡ್
- ಗ್ರೂಪ್-2
- ಯುಎಸ್ಎ
- ವೆಸ್ಟ್ ಇಂಡೀಸ್
- ಸೌತ್ ಆಫ್ರಿಕಾ
- ಇಂಗ್ಲೆಂಡ್
ಗ್ರೂಪ್ನಲ್ಲೇ ಮುಖಾಮುಖಿ:
ಇಲ್ಲಿ 8 ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದ್ದರೂ ಗುಂಪುಗಳ ನಡುವೆ ಮುಖಾಮುಖಿಯಾಗುವುದಿಲ್ಲ. ಬದಲಾಗಿ ಒಂದೇ ಗ್ರೂಪ್ನಲ್ಲಿರುವ ತಂಡಗಳು ಪರಸ್ಪರ ಸೆಣಸಲಿದೆ. ಅದರಂತೆ ಒಂದು ತಂಡಕ್ಕೆ 3 ಪಂದ್ಯಗಳಿರಲಿವೆ.
ಉದಾಹರಣೆ: ಭಾರತ ತಂಡವು ಗ್ರೂಪ್-1 ರಲ್ಲಿದ್ದು, ಅದರಂತೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ.
ಪಾಯಿಂಟ್ಸ್ ಟೇಬಲ್ ಲೆಕ್ಕಚಾರ:
ಮೊದಲ ಸುತ್ತಿನಂತೆ ದ್ವಿತೀಯ ಸುತ್ತಿನಲ್ಲೂ ಪಾಯಿಂಟ್ಸ್ ಟೇಬಲ್ ಲೆಕ್ಕಚಾರ ಇರಲಿದೆ. ಅಂದರೆ ಇಲ್ಲಿ ಎರಡು ಗ್ರೂಪ್ಗಳಿಗೂ ಪತ್ಯೇಕ ಅಂಕ ಪಟ್ಟಿ ಇರಲಿದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಗ್ರೂಪ್-1 ರಿಂದ 2 ತಂಡಗಳು, ಗ್ರೂಪ್-2 ರಿಂದ 2 ತಂಡಗಳು ನಾಕೌಟ್ ಹಂತಕ್ಕೇರಲಿದೆ.
ಸೆಮಿಫೈನಲ್ ಕಾದಾಟ:
ಮೇಲೆ ಹೇಳಿದಂತೆ, ಎರಡು ಗಂಪುಗಳಿಂದ ಒಟ್ಟು 4 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಇದಾದ ಬಳಿಕ ಎರಡು ಗುಂಪುಗಳ ತಂಡಗಳು ವಿರುದ್ಧವಾಗಿ ಸೆಣಸಲಿದೆ. ಅಂದರೆ ಗ್ರೂಪ್-1 ನಲ್ಲಿನ ತಂಡಗಳು ಗ್ರೂಪ್-2 ನಲ್ಲಿನ ತಂಡಗಳ ವಿರುದ್ಧ ನಾಕೌಟ್ ಪಂದ್ಯಗಳನ್ನಾಡಲಿದೆ.
ಫೈನಲ್ ಫೈಟ್:
ಸೆಮಿಫೈನಲ್ಗಳಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಲಿದ್ದು, ಅದರಂತೆ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಟೀಮ್ ಇಂಡಿಯಾ ಪಂದ್ಯ ಯಾವಾಗ?
ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಜೂನ್ 22 ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಹಾಗೆಯೇ ಜೂನ್ 24 ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
‘
Published On - 7:22 am, Wed, 19 June 24