
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾರತದ ತೇಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಸ್ವರ್ಣದ ಪದಕದ ಸಂಖ್ಯೆ 13 ಕ್ಕೇರಿದೆ.
ಈ ಪಂದ್ಯದಲ್ಲಿ ತೇಜಿಂದರ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಆ ಬಳಿಕ ಕಂಬ್ಯಾಕ್ ಮಾಡಿ ಚಿನ್ನದ ಪದಕ ಗೆದ್ದಿದ್ದು ವಿಶೇಷ. ಬರೋಬ್ಬರಿ 20.36 ಮೀಟರ್ ದೂರಕ್ಕೆ ಎಸೆಯುವ ಮೂಲಕ ತೇಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು.
13th Gold Medal for India 🇮🇳 in Asian Games.
– Tajinderpal Singh Toor is a hero.pic.twitter.com/dIfl9NN0DB
— Johns. (@CricCrazyJohns) October 1, 2023
ಮತ್ತೊಂದೆಡೆ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಅವಿನಾಶ್ ಸಬ್ಲೆ ಭಾರತಕ್ಕೆ ಚಿನ್ನದ ಪದಕ ಗೆದ್ದರು. ಈ ಪದಕವು ಐತಿಹಾಸಿಕ ಎಂಬುದು ವಿಶೇಷ. ಏಕೆಂದರೆ ಭಾರತವು ಈ ಹಿಂದೆ ಏಷ್ಯನ್ ಗೇಮ್ಸ್‌ನಲ್ಲಿ ಈ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಈ ಬಾರಿ ಅವಿನಾಶ್ 8:19:53 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದರು.
ಪ್ರಸ್ತುತ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಇದುವರೆಗೆ 13 ಚಿನ್ನದ ಪದಕಗಳನ್ನು ಹಾಗೂ 16 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಒಟ್ಟು 44 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ
ಇನ್ನು 120 ಚಿನ್ನ, 71 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಒಟ್ಟು 228 ಪದಕಗಳನ್ನು ಗೆದ್ದಿರುವ ಆತಿಥೇಯ ಚೀನಾ (ಗಣತಂತ್ರ) ದೇಶವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
Published On - 7:08 pm, Sun, 1 October 23