ಕಂಚಿನ ಪದಕ ವಂಚಿತ 24 ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಆಲ್ಟ್ರೋಜ್ ಕಾರನ್ನು ಉಡುಗೂರೆಯಾಗಿ ನೀಡಿದ ಟಾಟಾ ಮೋಟಾರ್ಸ್

ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಕ್ರೀಡಾಪಟುಗಳಿಗೆ ಹ್ಯಾಚ್‍ಬ್ಯಾಕ್‍ಗಳ ಅತ್ಯುತ್ತಮ ಗುಣಮಟ್ಟದ ಆಲ್ಟ್ರೋಜ್ ಕಾರಿನ ಕೀಲಿಗಳನ್ನು ಹಸ್ತಾಂತರಿಸಿತು.

ಕಂಚಿನ ಪದಕ ವಂಚಿತ 24 ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಆಲ್ಟ್ರೋಜ್ ಕಾರನ್ನು ಉಡುಗೂರೆಯಾಗಿ ನೀಡಿದ ಟಾಟಾ ಮೋಟಾರ್ಸ್
24 ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಆಲ್ಟ್ರೋಜ್ ಕಾರನ್ನು ಉಡುಗೂರೆಯಾಗಿ ನೀಡಿದ ಟಾಟಾ ಮೋಟಾರ್ಸ್
Updated By: ಪೃಥ್ವಿಶಂಕರ

Updated on: Aug 26, 2021 | 9:00 PM

ಬೆಂಗಳೂರು: ಭಾರತದ ಪ್ರಮುಖ ವಾಹನ ಬ್ರಾಂಡ್ ಆದ ಟಾಟಾ ಮೋಟಾರ್ಸ್, ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಕ್ರೀಡಾಪಟುಗಳಿಗೆ ಹ್ಯಾಚ್‍ಬ್ಯಾಕ್‍ಗಳ ಅತ್ಯುತ್ತಮ ಗುಣಮಟ್ಟದ ಆಲ್ಟ್ರೋಜ್ ಕಾರಿನ ಕೀಲಿಗಳನ್ನು ಹಸ್ತಾಂತರಿಸಿತು. ಅವರು ಪದಕ ಗೆಲ್ಲದೇ ಇರಬಹುದು ಆದರೆ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಮತ್ತು ಅವರ ಶ್ಲಾಘನೀಯ ಪ್ರದರ್ಶನಗಳ ಮೂಲಕ ಶತಕೋಟಿ ಜನರನ್ನು ಪ್ರೇರೇಪಿಸಿದ್ದಾರೆ. ಅವರನ್ನು ಗುರುತಿಸಲು ಮತ್ತು ಅಭಿನಂದಿಸಲು, ಟಾಟಾ ಮೋಟಾರ್ಸ್ ಹಾಕಿ, ಕುಸ್ತಿ, ಗಾಲ್ಫ್, ಬಾಕ್ಸಿಂಗ್ ಮತ್ತು ಡಿಸ್ಕಸ್ ಥ್ರೋನಂತಹ ವಿಭಾಗಗಳಲ್ಲಿ 24 ಒಲಿಂಪಿಯನ್‍ಗಳನ್ನು ಗೌರವಿಸಿತು.

ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ ವ್ಯವಹಾರಗಳ ಅಧ್ಯಕ್ಷರಾದ ಶ್ರೀ ಶೈಲೇಶ್ ಚಂದ್ರರ ಮಾತುಗಳು ಹೀಗಿವೆ, ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಅವರು ತೋರಿಸಿದ ಬದ್ಧತೆ ಮತ್ತು ಅದಮ್ಯ ಉತ್ಸಾಹಗಳಿಂದಾಗಿ ನಮ್ಮ ಕ್ರೀಡಾಪಟುಗಳ ಬಗ್ಗೆ ನಮಗೆ ಬಹಳಷ್ಟು ಹೆಮ್ಮೆ ಇದೆ ಮತ್ತು ಇಂದು ಅವರೊಂದಿಗೆ ಒಂದೇ ವೇದಿಕೆಯನ್ನು ಹಂಚಿಕೊಳ್ಳುವುದು ನನಗೆ ಬಹಳ ಗೌರವವೆನಿಸುತ್ತಿದೆ. ಅವರ ಉತ್ಸಾಹವನ್ನು ಪ್ರತಿಧ್ವನಿಸುವುದು ಮತ್ತು ಅವರ ಕಠಿಣ ಪರಿಶ್ರಮವನ್ನು ಗುರುತಿಸುವುದಕ್ಕಾಗಿ ನಾವು ಅವರಿಗೆ ಪ್ರೀಮಿಯಂ ಹ್ಯಾಚ್‍ಬ್ಯಾಕ್‍ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಟಾಟಾ ಆಲ್ಟ್ರೋಜ್ ಅನ್ನು ಉಡುಗೊರೆಯಾಗಿ ನೀಡಲು ಸಂತೋಷಪಡುತ್ತೇವೆ. ಅವರು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿ ಮುಂದುವರಿಯುತ್ತಿದ್ದಂತೆ, ಅವರ ಭವಿಷ್ಯಕ್ಕಾಗಿ ನಾವು ಅವರಿಗೆ ಶುಭ ಹಾರೈಸುತ್ತೇವೆ ಮತ್ತು ಮುಂದಿನ ವರ್ಷಗಳಲ್ಲಿ ಅವರು ನಮ್ಮ ದೇಶಕ್ಕೆ ಯಶಸ್ಸನ್ನು ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಗೌರವಾನ್ವಿತ ಆಟಗಾರರ ಹೆಸರುಗಳು

ಕ್ರ. ಸಂ ಕ್ರೀಡಾಪಟುವಿನ ಹೆಸರು ಕ್ರೀಡೆ
1 ನೇಹಾ ಗೋಯಲ್ ಹಾಕಿ
2 ರಾಣಿ ರಾಂಪಾಲ್ ಹಾಕಿ
3 ನವನೀತ್ ಕೌರ್ ಹಾಕಿ
4 ಉದಿತಾ ಹಾಕಿ
5 ವಂದನಾ ಕಟಾರಿಯಾ ಹಾಕಿ
6 ನಿಶಾ ವಾರ್ಸಿ ಹಾಕಿ
7 ಸವಿತಾ ಪುನಿಯಾ ಹಾಕಿ
8 ಮೋನಿಕಾ ಮಲಿಕ್ ಹಾಕಿ
9 ದೀಪ್ ಗ್ರೇಸ್ ಎಕ್ಕಾ ಹಾಕಿ
10 ಗುರ್‍ಜಿತ್ ಕೌರ್ ಹಾಕಿ
11 ನವಜೋತ್ ಕೌರ್ ಹಾಕಿ
12 ಶರ್ಮಿಳಾ ದೇವಿ ಹಾಕಿ
13 ಲಾಲ್ರೆಮ್ಸಿಯಾಮಿ ಹಾಕಿ
14 ಸುಶೀಲಾ ಚಾನು ಹಾಕಿ
15 ಸಲೀಮಾ ಟೆಟೆ ಹಾಕಿ
16 ನಿಕ್ಕಿ ಪ್ರಧಾನ್ ಹಾಕಿ
17 ರಜನಿ ಎತಿಮರ್ಪು ಹಾಕಿ
18 ರೀನಾ ಖೋಕರ್ ಹಾಕಿ
19 ನಮಿತಾ ತೋಪ್ಪೋ ಹಾಕಿ
20 ಅದಿತಿ ಅಶೋಕ್ ಗಾಲ್ಫ್
21 ದೀಪಕ್ ಪುನಿಯಾ ಕುಸ್ತಿ 86 ಕೆಜಿ
22 ಕಮಲ್‍ಪ್ರೀತ್ ಕೌರ್ ಡಿಸ್ಕಸ್ ಥ್ರೋ
23 ಸತೀಶ್ ಕುಮಾರ್ ಬಾಕ್ಸಿಂಗ್ 91 ಕೆಜಿ
24 ಪೂಜಾ ರಾಣಿ ಬಾಕ್ಸಿಂಗ್ 75 ಕೆಜಿ

ಆಲ್ಟ್ರೋಜ್ ಪ್ರೇಕ್ಷಕರಿಂದ ಎಣೆಯಿಲ್ಲದಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿದೆ ಮತ್ತು ಯಶಸ್ಸಿನ ಹೊಸ ಎತ್ತರವನ್ನು ತಲುಪುತ್ತಿದೆ. ಆಲ್ಟ್ರೋಜ್ ಆಧುನಿಕ ವಿನ್ಯಾಸ, 5 ಸ್ಟಾರ್ ಗ್ಲೋಬಲ್ NCAP ಸುರಕ್ಷತೆ ಮತ್ತು ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್, ಲೆದರ್ ಸೀಟ್‍ಗಳು, iRA ಸಂಪರ್ಕಿತ ಕಾರ್ ತಂತ್ರಜ್ಞಾನ, ಸ್ವಯಂಚಾಲಿತ ಹೆಡ್‍ಲ್ಯಾಂಪ್‍ಗಳು, ಹಿಂಭಾಗದ ಎಸಿ ವೆಂಟ್‍ಗಳು ಮತ್ತು ಇನ್ನೂ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.