ರಷ್ಯಾ- ಉಕ್ರೇನ್ ಯುದ್ಧ; ಶಿಕ್ಷಣ ವಂಚಿತ ಉಕ್ರೇನ್ ಮಕ್ಕಳ ನೆರವಿಗೆ ಬಂದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್

Roger Federer : ರೋಜರ್ ಫೆಡರರ್ ಫೌಂಡೇಶನ್ ಮೂಲಕ ಯುದ್ಧ ಪೀಡಿತ ಮಕ್ಕಳಿಗೆ 3.8 ಕೋಟಿ ರೂ.ಗಳನ್ನು ನೀಡುತ್ತೇವೆ. ಇದರಿಂದ ಉಕ್ರೇನ್ ಮಕ್ಕಳು ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಫೆಡರರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಷ್ಯಾ- ಉಕ್ರೇನ್ ಯುದ್ಧ; ಶಿಕ್ಷಣ ವಂಚಿತ ಉಕ್ರೇನ್ ಮಕ್ಕಳ ನೆರವಿಗೆ ಬಂದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್
ರೋಜರ್ ಫೆಡರರ್
Follow us
TV9 Web
| Updated By: ಪೃಥ್ವಿಶಂಕರ

Updated on:Mar 20, 2022 | 9:14 AM

ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ಇನ್ನೂ ಮುಂದುವರೆದಿದೆ. UN ನಿರಾಶ್ರಿತರ ಏಜೆನ್ಸಿ ಪ್ರಕಾರ, ಸುಮಾರು 3 ಮಿಲಿಯನ್ ಅಥವಾ 7% ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ. ಅದೇ ಸಮಯದಲ್ಲಿ, ಒಂದು ಅಂದಾಜಿನ ಪ್ರಕಾರ, ಉಕ್ರೇನ್‌ನಲ್ಲಿ ವಾಸಿಸುವ ಮತ್ತು ಸ್ಥಳಾಂತರಗೊಂಡ ಜನರಲ್ಲಿ, ಶಾಲೆಯಿಂದ ದೂರವಿರುವ 6 ಮಿಲಿಯನ್ ಮಕ್ಕಳಿದ್ದಾರೆ ಎಂದು ವರದಿಯಾಗಿದೆ. ಇದೀಗ ಟೆನಿಸ್ ಲೋಕದ ತಾರೆ ರೋಜರ್ ಫೆಡರರ್ (Roger Federer) ಅಂತಹ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಮಕ್ಕಳಿಗೆ ಸಹಾಯ ಮಾಡಲು ಫೆಡರರ್ ಪ್ರತಿಷ್ಠಾನವು 3.8 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ಈ ವಿಚಾರವನ್ನು ಸ್ವತಃ ರೋಜರ್ ಫೆಡರರ್ ಟ್ವೀಟ್ ಮೂಲಕ ನೀಡಿದ್ದಾರೆ.

ಫೆಡರರ್ ಹೇಳಿದ್ದಿಷ್ಟು ಉಕ್ರೇನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ ನನ್ನ ಕುಟುಂಬ ಮತ್ತು ನಾನು ಆಘಾತಕ್ಕೊಳಗಾಗಿದ್ದೇನೆ. ಅಮಾಯಕರನ್ನು ಈ ರೀತಿ ಬಾಧಿಸುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ. ಹೀಗಾಗಿ ನಾವು ಆರೈಕೆಯ ಅಗತ್ಯವಿರುವ ಉಕ್ರೇನ್‌ನ ಮಕ್ಕಳಿಗೆ ಸಹಾಯ ಮಾಡುತ್ತೇವೆ. ಈ ಯುದ್ಧದಿಂದ ಸುಮಾರು 6 ಮಿಲಿಯನ್ ಉಕ್ರೇನಿಯನ್ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಿಲ್ಲ. ಅಲ್ಲದೆ ಈ ಮಕ್ಕಳಿಗೆ ಶಿಕ್ಷಣ ದೊರಕುವ ಸಾಧ್ಯತೆಗಳು ತೀರ ಕೆಟ್ಟದಾಗಿದೆ ಎಂದು ನಮಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ರೋಜರ್ ಫೆಡರರ್ ಫೌಂಡೇಶನ್ ಮೂಲಕ ಯುದ್ಧ ಪೀಡಿತ ಮಕ್ಕಳಿಗೆ 3.8 ಕೋಟಿ ರೂ.ಗಳನ್ನು ನೀಡುತ್ತೇವೆ. ಇದರಿಂದ ಉಕ್ರೇನ್ ಮಕ್ಕಳು ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಫೆಡರರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗಮನಾರ್ಹವಾಗಿ, ರೋಜರ್ ಫೆಡರರ್‌ಗೂ ಮೊದಲು ಬ್ರಿಟಿಷ್ ಟೆನಿಸ್ ಆಟಗಾರ ಆಂಡಿ ಮುರ್ರೆ ಕಳೆದ ವಾರ ಉಕ್ರೇನಿಯನ್ ಮಕ್ಕಳಿಗೆ ಸಹಾಯ ಹಸ್ತ ಚಾಚಿದ್ದರು. ಆಂಡಿ ಮುರ್ರೆ ಅವರು 2022 ರಲ್ಲಿ ಗೆದ್ದ ಎಲ್ಲಾ ಹಣವನ್ನು ಉಕ್ರೇನ್ ಮಕ್ಕಳ ಕಲ್ಯಾಣಕ್ಕಾಗಿ ಅರ್ಪಿಸಿದ್ದರು. ಆಂಡಿ ಮುರ್ರೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ UNICEF ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ತಮ್ಮ ನಿಲುವಿಗೆ ತಕ್ಕಂತೆ ಸಹಾಯಕ್ಕೆ ಮುಂದಾಗಿದ್ದರು.

ಭಾರತದ ಸುಮಾರು 22,500 ನಾಗರಿಕರು ಸ್ಥಳಾಂತರ ಲಕ್ಷಾಂತರ ಜೀವಗಳ ಮೇಲೆ ಪರಿಣಾಮ ಬೀರಿರುವ ಉಕ್ರೇನ್ ಯುದ್ಧದ ಮಧ್ಯೆ, ಭಾರತವು ಸುಮಾರು 22,500 ನಾಗರಿಕರನ್ನುಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂದು ವಿಶ್ವಸಂಸ್ಥೆಯ ದೇಶದ ಖಾಯಂ ಪ್ರತಿನಿಧಿ ಹೇಳಿದ್ದಾರೆ. ಸ್ಥಳಾಂತರಿಸುವ ಕಾರ್ಯಾಚರಣೆಗಳ ಮಧ್ಯೆ ಇತರ 18 ದೇಶಗಳಿಗೂ ಇದು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಉಕ್ರೇನ್‌ನಲ್ಲಿನ ಮಾನವೀಯ ಕ್ರಮಗಳು, ತಟಸ್ಥತೆ, ನಿಷ್ಪಕ್ಷಪಾತ ಮತ್ತು ಸ್ವಾತಂತ್ರ್ಯದ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ. ಇದನ್ನು “ರಾಜಕೀಯಗೊಳಿಸಬಾರದು” ಎಂದು ಟಿಎಸ್ ತಿರುಮೂರ್ತಿ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಿಳಿಸಿದರು. ಯುದ್ಧದ ಆರಂಭದಿಂದಲೂ ಹಂತಹಂತವಾಗಿ ಹದಗೆಟ್ಟಿರುವ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತವು ಆಳವಾದ ಕಳವಳವನ್ನು ಮುಂದುವರೆಸಿದೆ. ರಷ್ಯಾ- ಉಕ್ರೇನ್ ಸಂಘರ್ಷವು ನಾಗರಿಕರ ಸಾವಿಗೆ ಕಾರಣವಾಗಿದೆ. ಆಂತರಿಕವಾಗಿ ಸಾವಿರಾರು ಜನರ ಸ್ಥಳಾಂತರ ಮತ್ತು ನೆರೆಯ ದೇಶಗಳಿಗೆ ಮೂರು ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರಾಗಿದ್ದಾರೆ.ವಿಶೇಷವಾಗಿ ಸಂಘರ್ಷ ವಲಯಗಳಲ್ಲಿ ಮಾನವೀಯ ಪರಿಸ್ಥಿತಿಯು ಹದಗೆಟ್ಟಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ದೇವದತ್ ಪಡಿಕ್ಕಲ್ ಹೆಸರು ರೋಜರ್ ಫೆಡರರ್, 3 ಈಡಿಯಟ್ಸ್ ಚಿತ್ರದಲ್ಲಿ ನಟಿಸಿದ್ದು ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮತ್ತು ಕೈರನ್ ಪೊಲ್ಲಾರ್ಡ್!

Published On - 9:13 am, Sun, 20 March 22