ದೇವದತ್ ಪಡಿಕ್ಕಲ್ ಹೆಸರು ರೋಜರ್ ಫೆಡರರ್, 3 ಈಡಿಯಟ್ಸ್ ಚಿತ್ರದಲ್ಲಿ ನಟಿಸಿದ್ದು ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮತ್ತು ಕೈರನ್ ಪೊಲ್ಲಾರ್ಡ್!
ನಮ್ಮ ಕನ್ನಡದ ಹುಡುಗ ದೇವದತ್ ಪಡಿಕ್ಕಲ್ ನಿಮ್ಮ ಹೆಸರೇನು ಅಂತ ಕೇಳಿರುವ ಪ್ರಶ್ನೆಗೆ ಕೊಟ್ಟಿರುವ ಉತ್ತರ ಏನು ಗೊತ್ತಾ? ‘ರೋಜರ್ ಫೆಡರರ್!’. ತಮಿಳುನಾಡಿನ ಆಟಗಾರ ವರುಣ್ ಚಕ್ರವರ್ತಿ ತನ್ನ ಹೆಸರು ‘ರಜಿನಿಕಾಂತ್’ ಅಂತ ಹೇಳಿದ್ದಾರೆ!
ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಅವರಿಂದ ಎರಡನೇ ದರ್ಜೆ ಎಂದು ಕರೆಸಿಕೊಂಡ ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಭರ್ಜರಿಯಾಗಿ ಎಂಜಾಯ್ ಮಾಡುತ್ತಿದೆ. ಮೈದಾನಗಳಲ್ಲಿ ಅಧ್ಭುತ ಪ್ರದರ್ಶನಗಳನ್ನು ನೀಡಿ ಮೂರು ಒಂದು ದಿನದ ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಗೆದ್ದುಬಿಟ್ಟಿದೆ. ಟೀಮಿನ ಕೋಚ್ ರಾಹುಲ್ ದ್ರಾವಿಡ್ ಶಿಸ್ತಿನ ಸಿಪಾಯಿಯಾದರೂ ಟೀಮಿನ ಸದಸ್ಯರೊಂದಿಗೆ ಸ್ಕೂಲ್ ಹೆಡ್ ಮಾಸ್ಟರ್ ಥರ ವರ್ತಿಸುವುದಿಲ್ಲ. ಬಿಡುವಿನ ಸಮಯದಲ್ಲಿ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುತ್ತಾರೆ. ಗುರುವಾರದಂದು ಟೀಮಿನ ಕೆಲ ಸದಸ್ಯರು ತಾವಿರುವ ಕೊಲಂಬೋ ಹೋಟೆಲೊಂದರ ಸ್ವಿಮ್ಮಿಂಗ್ ಪೂಲ್ ಬಳಿ ‘ರಾಂಗ್ ಅನ್ಸರ್ಸ್ ಓನ್ಲೀ’ ಗೇಮ್ ಆಡಿದ್ದಾರೆ. ಈ ಗೇಮ್ ಹೇಗಿರುತ್ತದೆ ಅಂದರೆ ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರಗಳನ್ನು ನೀಡುವುದು. ಈ ಗೇಮ್ನಲ್ಲಿ ಭಾಗವಹಿಸಿದವರು-ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ, ದೇವದತ್ ಪಡಿಕ್ಕಲ್, ಸೂರ್ಯಕುಮಾರ ಯಾದವ್, ಇಶಾನ್ ಕಿಷನ್, ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್.
ಅಂದಹಾಗೆ, ಭಾರತದ ಯುವ ಆಟಗಾರರು ರಾಂಗ್ ಅನ್ಸರ್ಸ್ ಓನ್ಲೀ ಗೇಮ್ ಆಡಿದ್ದನ್ನು ರೆಕಾರ್ಡ್ ಮಾಡಿರುವ ಭಾರತೀಯ ಕ್ರಿಕೆಟ್ ನಿಂಯಂತ್ರಣ ಮಂಡಳಿಯು ಅದನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹರಿಬಿಟ್ಟಿದೆ. ಆಟಗಾರರಿಗೆ ನಿಮ್ಮ ಹೆಸರೇನು?, ಮೆಸ್ಸಿ ಮತ್ತು ರೊನಾಲ್ಡೋ ಯಾವ ಕ್ರೀಡೆಯನ್ನು ಪ್ರತಿನಿಧಿಸುತ್ತಾರೆ? ಭೂಮಿಯ ಆಕಾರ ಹೇಗಿದೆ? 3 ಈಡಿಯಟ್ಸ್ ಚಿತ್ರದಲ್ಲಿ ನಟಿಸಿರುವ ನಟರು ಯಾರು? ಎಂಬ ಪ್ರಶ್ನೆಗಳನ್ನು ಕೇಳಲಾಗಿದ್ದು ಆಟಗಾರರು ಮಜಮಜವಾಗಿ ಉತ್ತರಿಸಿದ್ದಾರೆ.
ನಮ್ಮ ಕನ್ನಡದ ಹುಡುಗ ದೇವದತ್ ಪಡಿಕ್ಕಲ್ ನಿಮ್ಮ ಹೆಸರೇನು ಅಂತ ಕೇಳಿರುವ ಪ್ರಶ್ನೆಗೆ ಕೊಟ್ಟಿರುವ ಉತ್ತರ ಏನು ಗೊತ್ತಾ? ‘ರೋಜರ್ ಫೆಡರರ್!’. ತಮಿಳುನಾಡಿನ ಆಟಗಾರ ವರುಣ್ ಚಕ್ರವರ್ತಿ ತನ್ನ ಹೆಸರು ‘ರಜಿನಿಕಾಂತ್’ ಅಂತ ಹೇಳಿದ್ದಾರೆ!
ಹಾರ್ದಿಕ್ ಪಾಂಡ್ಯ ಅವರ ಪ್ರಕಾರ 3 ಈಡಿಯಟ್ಸ್ ಚಿತ್ರದಲ್ಲಿ ನಟಿಸಿರುವ ನಟರು ಯಾರು ಗೊತ್ತಾ? ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮತ್ತು ಕೈರನ್ ಪೊಲ್ಲಾರ್ಡ್!!!
??????? ⚠️
ᴀɴꜱᴡᴇʀꜱ ᴛᴏ ᴀʟʟ Qᴜᴇꜱᴛɪᴏɴꜱ ɪɴ ᴛʜɪꜱ ᴠɪᴅᴇᴏ ᴀʀᴇ ᴡʀᴏɴɢ ?
We played "WRONG ANSWERS" only with #TeamIndia & the results were hilarious ? – by @ameyatilak & @28anand
Full video ? ? #SLvINDhttps://t.co/WSskGucOpB pic.twitter.com/zFbFDXEcDw
— BCCI (@BCCI) July 22, 2021
ಓಕೆ ಕ್ರಿಕೆಟ್ ವಿಷಯಕ್ಕೆ ಬಂದರೆ, ಈಗಾಗಲೇ ಸರಣಿ ಗೆದ್ದಿರುವ ಧವನ್ ನಾಯಕತ್ವದ ಭಾರತದ ಟೀಮ್ ನಾಳಿನ ಪಂದ್ಯಕ್ಕೆ ಕೆಲ ಬದಲಾವಣೆಗಳನ್ನು ಮಾಡಬಹುದು. ಪೃಥ್ವಿ ಶಾ ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಇಲ್ಲವೇ ಋತುರಾಜ್ ಗಾಯಕ್ವಾಡ್ ಅವಕಾಶ ಗಿಟ್ಟಿಸಬಹುದು. ಮನೀಷ್ ಪಾಂಡೆ ಜಾಗದಲ್ಲಿ ಎಡಗೈ ಆಟಗಾರ ನಿತಿಷ್ ರಾಣಾ ಅವಕಾಶ ಪಡೆಯಬಹುದು.
ಟಿ20 ಕ್ರಿಕೆಟ್ನಲ್ಲಿ ಪಡಿಕ್ಕಲ್, ರಾಣಾ, ಗಾಯಕ್ವಾಡ್ ಮತ್ತು ಚಕ್ರವರ್ತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಈ ಎಲ್ಲರನ್ನು ಒಡಿಐಗಳ ನಂತರ ನಡೆಯಲಿರುವ ಮೂರು ಟಿ20ಐ ಸರಣಿಯಲ್ಲಿ ಆಡಿಸಬಹುದೆಂದು ಮೂಲಗಳು ತಿಳಿಸಿವೆ.
ಎರಡನೇ ಒಡಿಐ ಪಂದ್ಯದಲ್ಲಿ ವೇಗದ ಬೌಲರ್ ದೀಪಕ್ ಚಹರ್ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚಿ ಅಜೇಯ 69 ರನ್ ಬಾರಿಸಿ ಭಾರತಕ್ಕೆ 3 ವಿಕೆಟ್ಗಳ ಗೆಲುವನ್ನು ದೊರಕಿಸಿದರು. ಮೊದಲ ಪಂದ್ಯವನ್ನು ಭಾರತ 7 ವಿಕೆಟ್ಗಳ ಜಯ ಗಳಿಸಿತ್ತು. ಶಿಖರ್, ಶಾ ಮತ್ತು ಕಿಷನ್ ಬ್ಯಾಟಿಂಗ್ನಲ್ಲಿ ಮಿಂಚಿದ್ದರು.
ಭಾರತ ಮತ್ತು ಅತಿಥೇಯರ ನಡುವೆ ಮೂರನೇ ಹಾಗೂ ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ನಾಳೆ (ಶುಕ್ರವಾರ) ಕೊಲಂಬೋದಲ್ಲಿ ನಡೆಯಲಿದೆ.
ಇದನ್ನೂ ಓದಿ: IND vs SL: ಭಾರತದ ಕೃಪೆಯಿಂದ ಆದಾಯ ಹೆಚ್ಚಾಯ್ತು! ಟೀಂ ಇಂಡಿಯಾ ವಿರುದ್ಧದ ಸರಣಿಯಿಂದ ಶ್ರೀಲಂಕಾ ಗಳಿಸುವ ಆದಾಯ ಎಷ್ಟು ಗೊತ್ತಾ?