ಹಾಂಗ್ ಕಾಂಗ್ ಕ್ರಿಕೆಟ್ ತಂಡದ ನಾಯಕ ಅರೆಸ್ಟ್..!
2018 ರಲ್ಲಿ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತದ ವಿರುದ್ಧ ಐಝಾಝ್ ಖಾನ್ ಆಡಿದ್ದರು. ಈ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಅವರ ವಿಕೆಟ್ ಪಡೆದಿದ್ದರು.
ಹಾಂಗ್ ಕಾಂಗ್ ಕ್ರಿಕೆಟ್ ತಂಡದ ನಾಯಕ ಐಝಾಝ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾ ವಂಚನೆ ಆರೋಪ ಮೇಲೆ ಐಝಾಝ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಹಾಂಗ್ ಕಾಂಗ್ ತಂಡದ ಕ್ಯಾಪ್ಟನ್ 3 ಮಿಲಿಯನ್ ಹಾಂಗ್ ಕಾಂಗ್ ಡಾಲರ್ (2.87 ಕೋಟಿ ರೂ) ವಿಮಾ ಹಗರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು 28 ವರ್ಷದ ಕ್ರಿಕೆಟಿಗನನ್ನು ಚಾಯ್ ವಾನ್‌ನಲ್ಲಿರುವ ಅವರ ಫ್ಲ್ಯಾಟ್‌ನಿಂದ ಬಂಧಿಸಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಪಂದ್ಯ ಆಡಿದ್ದರು..! 2018 ರಲ್ಲಿ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತದ ವಿರುದ್ಧ ಐಝಾಝ್ ಖಾನ್ ಆಡಿದ್ದರು. ಈ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಅವರ ವಿಕೆಟ್ ಪಡೆದಿದ್ದರು. 2019 ರಲ್ಲಿ ಹಾಂಗ್ ಕಾಂಗ್ ತಂಡದ ನಾಯಕರಾದ ಐಝಾಝ್ಒಟ್ಟು 58 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 62 ವಿಕೆಟ್ ಪಡೆದಿದ್ದಾರೆ. ಹಾಗೆಯೇ 19 ಏಕದಿನ ಪಂದ್ಯಗಳಲ್ಲಿ 16 ವಿಕೆಟ್ ಮತ್ತು 39 ಟಿ20 ಪಂದ್ಯಗಳಿಂದ 46 ವಿಕೆಟ್ ಪಡೆದಿದ್ದಾರೆ.
2014 ರಲ್ಲಿ ನೇಪಾಳ ವಿರುದ್ಧದ ಟಿ20 ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 4 ರನ್‌ಗಳನ್ನು ನೀಡಿ 2 ವಿಕೆಟ್ ಕಬಳಿಸುವ ಮೂಲಕ ಐಝಾಝ್ ಎಲ್ಲರ ಗಮನ ಸೆಳೆದಿದ್ದರು. ಮಾರ್ಚ್ 2020 ರಲ್ಲಿ ಅವರು ತಮ್ಮ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದೀಗ ವಂಚನೆ ಪ್ರಕರಣದಲ್ಲಿ ಹಾಂಗ್ ಕಾಂಗ್ ತಂಡದ ನಾಯಕ ಬಂಧಿತನಾಗಿರುವುದರಿಂದ ಹಾಂಗ್ ಕಾಂಗ್ ಕ್ರಿಕೆಟ್ ಬೋರ್ಡ್ ಮುಜುಗರಕ್ಕೆ ಒಳಗಾಗಿದೆ. ಅಲ್ಲದೆ ಅವರನ್ನು ತಂಡದಿಂದ ಕೈ ಬಿಟ್ಟು ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್
(Hong Kong cricket team Captain Aizaz Khan Arrested)