IPL 2021: ಚೇತೇಶ್ವರ್ ಪೂಜಾರಾ ಬ್ಯಾಟ್​ನಿಂದ ಸಿಡಿಯುತ್ತಿವೆ ಸಿಕ್ಸರ್​ ಮೇಲೆ ಸಿಕ್ಸರ್​ಗಳು!

|

Updated on: Mar 31, 2021 | 8:50 PM

2014 ಕ್ಕಿಂತ ಮುಂಚೆ ಆಡಿದ 30 ಐಪಿಎಲ್ ಪಂದ್ಯಗಳಲ್ಲಿ ಪೂಜಾರಾ 390 ರನ್ ಗಳಿಸಿದ್ದಾರೆ, 4 ಸಿಕ್ಸ್ ಬಾರಿಸಿದ್ದಾರೆ ಮತ್ತು ಒಂದು ಅರ್ಧ ಶತಕವನ್ನು ಅವರ ಹೆಸರಿಗಿದೆ.

IPL 2021: ಚೇತೇಶ್ವರ್ ಪೂಜಾರಾ ಬ್ಯಾಟ್​ನಿಂದ ಸಿಡಿಯುತ್ತಿವೆ ಸಿಕ್ಸರ್​ ಮೇಲೆ ಸಿಕ್ಸರ್​ಗಳು!
ಚೇತೇಶ್ವರ್ ಪೂಜಾರಾ
Follow us on

ಮುಂಬೈ: ಚೇತೇಶ್ವರ್ ಪೂಜಾರಾ ಸಿಕ್ಸರ್ ಮೆಲೆ ಸಿಕ್ಸರ್ ಬಾರಿಸಿದರು ಅಂತ ಯಾರಾದರೂ ಹೇಳಿದರೆ ಅವರೆಲ್ಲೋ ತಮಾಷೆ ಮಾಡುತ್ತಿರಬಹುದು ಅನ್ನೋದು ಜನರ ಪ್ರತಿಕ್ರಿಯೆ ಆಗಿರುತ್ತದೆ. ಆದರೆ ನಾವಿಲ್ಲಿ ಹೇಳುತ್ತಿರುವುದು ಖಂಡಿತವಾಗಿಯೂ ತಮಾಷೆಯಲ್ಲ. ಯಾಕಂದರೆ, ಭಾರತದ ಈ ಟೆಸ್ಟ್ ಸ್ಪೆಷಲಿಸ್ಟ್ ಕ್ರಮೇಣ ಕ್ರಿಕೆಟ್​ನ ಕಿರು ಆವೃತ್ತಿಗೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆ, ಪೂಜಾರಾ ಅವರನ್ನು ಈ ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್​ಗೆ ಚೆನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಖರೀದಿಸಿದೆ. ಸಿಎಸ್​ಕೆಯ ನೆಟ್ಸ್​ನಲ್ಲಿ ಪೂಜಾರಾ ಅವರು ಬಾಲ್​ಗಳನ್ನು ದೂರದೂರಕ್ಕೆ ಎತ್ತ್ತಿ ಬಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಮೊದಲಿಗೆ ಅವರು ದೀಪಕ್ ಚಹರ್ ಅವರ ಎಸೆತವನ್ನು ಮಿಡ್​ವಿಕೆಟ್ ಬೌಂಡರಿ ಕಡೆ ಎತ್ತಿ ಬಾರಿಸುತ್ತಾರೆ, ನಂತರ ಸ್ಪಿನರ್ ಕರ್ನ್ ಶರ್ಮ ಅವರ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡುತ್ತಾರೆ. ಹಾಗೆಯೇ ಅವರು ಮುನ್ನುಗ್ಗಿ ಬಾಲನ್ನು ಲಾಂಗಾನ್ ಮೇಲೆ ಎತ್ತಿ ಬಾರಿಸಿತ್ತಿರುವುದನ್ನು ಸಹ ವಿಡಿಯೊದಲ್ಲಿ ನೋಡಬಹುದಾಗಿದೆ. ವೇಗದ ಬೌಲರ್​ಗಳನ್ನು ಗಾಳಿಯಲ್ಲಿ ಫ್ಲಿಕ್ ಮಾಡುವ ಜೊತೆಗೆ ಆಫ್​ಸೈಡ್​ನಲ್ಲೂ ಬಾಲನ್ನು ಗಾಳಿಯಲ್ಲಿ ಬಾರಿಸಿದ್ದಾರೆ.

ಟೆಸ್ಟ್​ಗಳಲ್ಲಿ ಬ್ಯಾಟ್​ ಮಾಡುವ ಪೂಜಾರಾ ಅವರ ಶೈಲಿ ಮತ್ತು ಈ ವಿಡಿಯೊದಲ್ಲಿ ಕಾಣುತ್ತಿರುವ ಅವರ ಬ್ಯಾಟಿಂಗ್ ವೈಖರಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಟೆಸ್ಟ್​ಗಳಲ್ಲಿ ಅವರು ತಮ್ಮ ತಾಳ್ಮೆಯ ಆಟದ ಮೂಲಕ ಎದುರಾಳಿ ಬೌಲರ್​ಗಳು ಬಸವಳಿಯುವಂತೆ ಮಾಡುತ್ತಾರೆ. ದುರ್ಬಲ ಎಸೆತಕ್ಕಾಗಿ ತಾಸುಗಟ್ಟಲೆ ಕಾಯುತ್ತಾರೆ. ಸಾಂಪ್ರದಾಯಿಕ ಕ್ರಿಕೆಟ್​ನಲ್ಲಿ ಅವರು ಕಡಿಮೆ ಬ್ಯಾಕ್​ಲಿಫ್ಟ್​ನೊಂದಿಗೆ ಆಡುತ್ತಾರೆ. ಆದರೆ ಈ ವಿಡಿಯೋನಲ್ಲಿ ಅವರು ಹೈ ಬ್ಯಾಕ್​ಲಿಫ್ಟ್​ನೊಂದಿಗೆ ಆಡುತ್ತಿುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಪೂಜಾರಾ ದೇಹದ ಹತ್ತಿರದಿಂದ ಬಾಲನ್ನು ಆಡುತ್ತಾರೆ.

ಅವರ ಬ್ಯಾಟಿಂಗ್ ವೈಖರಿ ನೋಡಿದವರಿಗೆ ಅವರು ಯಾವತ್ತು ಸಿಕ್ಸ್​ ಬಾರಿಸಿರಲಾರರು ಎಂದು ಭಾಸವಾಗಬಹುದು. ಆದರೆ, ಟೆಸ್ಟ್​ಗಳಲ್ಲಿ ಅವರು 14 ಸಿಕ್ಸರ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿ ಅವರು ಕೊನೆಯ ಬಾರಿಗೆ ಆಡಿದ್ದು 2014ರಲ್ಲಿ. ಆದಾದ ನಂತರ ನಡೆದ ಹರಾಜು ಪ್ರಕ್ರಿಯೆಗಳಲ್ಲಿ ಅವರು ಅನ್​ಸೋಲ್ಡ್ ಆಗಿ ಉಳಿಯುತ್ತಿದರು! ಆದರೆ 2021 ರ ಸೀಸನ್​ಗೆ ಸಿಎಸ್​ಕೆ ಅವರನ್ನು ರೂ. 50ಲಕ್ಷಗಳಿಗೆ ಖರೀದಿಸಿದೆ.

2014 ಕ್ಕಿಂತ ಮುಂಚೆ ಆಡಿದ 30 ಐಪಿಎಲ್ ಪಂದ್ಯಗಳಲ್ಲಿ ಪೂಜಾರಾ 390 ರನ್ ಗಳಿಸಿದ್ದಾರೆ, 4 ಸಿಕ್ಸ್ ಬಾರಿಸಿದ್ದಾರೆ ಮತ್ತು ಒಂದು ಅರ್ಧ ಶತಕವನ್ನು ಅವರ ಹೆಸರಿಗಿದೆ.

ಚೆನೈ-ನೆಲೆಯ ಸಿಎಸ್​ಕೆ ತಂಡ ಮಾರ್ಚ್ 8 ರಿಂದ ಅದೇ ನಗರದಲ್ಲಿ ಅಭ್ಯಾಸನಿರತವಾಗಿತ್ತು. ಒಂದೆರಡು ದಿನಗಳ ಹಿಂದೆ ಮುಂಬೈಗೆ ಬಂದಿಳಿದಿದ್ದು ತಂಡದ ಸದಸ್ಯರು ಏಳು-ದಿನ ಅವಧಿಯ ಕಡ್ಡಾಯ ಕ್ವಾರಂಟೈನ್​ಗೊಳಗಾಗಿದ್ದಾರೆ. ಪ್ರಸಕ್ತ ಸೀಸನ್​ನ ತನ್ನ ಮೊದಲ 5 ಪಂದ್ಯಗಳನ್ನು ಅದು ಮುಂಬೈಯಲ್ಲಿ ಆಡಲಿದೆ.

ಇದನ್ನೂ ಓದಿ: IPL 2021: ಮಾರ್ಚ್​ 29ರಿಂದ ಆರ್​ಸಿಬಿ ಸಮರಾಭ್ಯಾಸ! ಇಷ್ಟರಲ್ಲೇ ತಂಡ ಸೇರ್ತಿದ್ದಾರೆ ಆರ್​ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್

ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್ ಟೀಮಿನ ಆರಂಭಿಕ ಜೋಡಿ ವಿಧ್ವಂಸಕವಾಗಿದೆ: ಆಕಾಶ್ ಚೋಪ್ರಾ