ಪಿವಿ ಸಿಂಧು ವಿಜಯ ಸಂಭ್ರಮಿಸಿದ ದೀಪಿಕಾ, ಸಮಂತಾ, ಸಾರಾ: ತಾರೆಗಳಿಂದ ಅಭಿನಂದನೆಗಳ ಮಹಾಪೂರ

ಸಿಂಧು ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಸೆಲಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಸಂದೇಶಗಳನ್ನು ತೇಲಿಬಿಟ್ಟು ಸಂಭ್ರಮಿಸಿದರು.

ಪಿವಿ ಸಿಂಧು ವಿಜಯ ಸಂಭ್ರಮಿಸಿದ ದೀಪಿಕಾ, ಸಮಂತಾ, ಸಾರಾ: ತಾರೆಗಳಿಂದ ಅಭಿನಂದನೆಗಳ ಮಹಾಪೂರ
ಗೆಲುವಿನ ಸಂಭ್ರಮದಲ್ಲಿ ಪಿ.ವಿ.ಸಿಂಧು

ಭಾರತದ ಶಟ್ಲ್​ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಭಾನುವಾರ ಟೊಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು, ದೇಶದ ಪತಾಕೆ ಹಾರಿಸಿದ್ದಾರೆ. ಚೀನಾದ ಹೆ ಬಿನ್​ಜಿಯೊ ಅವರನ್ನು ಮಣಿಸಿ ಸತತ ಎರಡನೇ ಒಲಿಂಪಿಕ್ ಪದಕವನ್ನು ತಮ್ಮದಾಗಿಸಿಕೊಂಡರು. ಈ ಸಾಧನೆಯೊಂದಿಗೆ ಭಾರತದ ಸತತ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಒಲಿಂಪಿಯನ್ ಎನಿಸಿದರು. ಸಿಂಧು ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಸೆಲಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಸಂದೇಶಗಳನ್ನು ತೇಲಿಬಿಟ್ಟು ಸಂಭ್ರಮಿಸಿದರು.

ಸಮಂತಾ ಅಕ್ಕಿನೇನಿ, ಸಾರಾ ಅಲಿ ಖಾನ್, ದುಲ್ಕರ್ ಸಲ್ಮಾನ್, ತಾಪ್ಸಿ ಪನ್ನು, ಅಭಿಷೇಕ್ ಬಚನ್, ವರುಣ್ ಧವನ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಾಧಕಿಯನ್ನು ಅಭಿನಂದಿಸಿದ್ದಾರೆ.

‘ಪಿ.ವಿ.ಸಿಂಧು ಅವರ ಕಠಿಣ ಪರಿಶ್ರಮವನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿರುವ ಸಮಂತಾ ಅಕ್ಕಿನೇನಿ, ‘ಅವರು ಮತ್ತೊಮ್ಮೆ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಅದೆಷ್ಟು ಕಷ್ಟಪಟ್ಟಿರಬೇಕು ಎಂದು ನಾನು ಊಹಿಸಲಾರೆ. ನಾವು ನಿಮ್ಮನ್ನು ಸಂಪೂರ್ಣ ಪ್ರೀತಿಸುತ್ತೇವೆ, ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಗೌರವಿಸುತ್ತೇವೆ. ನೀವು ಅಷ್ಟು ವಿಶಿಷ್ಟ’ ಎಂದು ಸಮಂತಾ ಅಕ್ಕಿನೇನಿ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

‘ನೀವು ಸದಾ ಭಾರತದ ಗೌರವ ಹೆಚ್ಚಿಸುತ್ತಿದ್ದೀರಿ’ ಎಂದು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಬರೆದುಕೊಂಡಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಾಪ್ಸಿ ಪನ್ನು ಸಹ ಪಿ.ವಿ.ಸಿಂಧು ಅವರ ಗೆಲುವು ಸಂಭ್ರಮಿಸಿದ್ದಾರೆ. ‘ನಮ್ಮ ಹುಡುಗಿ ಮನೆಗೆ ಕಂಚು ತರುತ್ತಿದ್ದಾಳೆ! ಒಂದೊಂದು ಸಲ ಒಂದೊಂದು ಬಣ್ಣ. ಬಾ ಚಾಂಪಿಯನ್ ಸಿಂಧು. ನಿನಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್ ಸಹ ಪಿ.ವಿ.ಸಿಂಧು ಅವರನ್ನು ಅಭಿನಂದಿಸಿ ಮೆಸೇಜ್ ಮಾಡಿದ್ದಾರೆ. ಕಂಚು ಗೆದ್ದಿದ್ದಕ್ಕೆ, ಒಲಿಂಪಿಕ್​ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಕ್ಕೆ ಅಭಿನಂದನೆಗಳು. ನೀವು ಭಾರತದ ಗೌರವ ಹೆಚ್ಚಿಸಿದ್ದೀರಿ ಎಂದಿದ್ದಾರೆ.

‘ಭಾರತದ ಮಹಿಳೆಯರು ನಮಗೆ ದಾರಿ ತೋರುತ್ತಿದ್ದಾರೆ. ಖುಷಿಯಾಯ್ತು ಪಿವಿ ಸಿಂಧು. ಎರಡು ವೈಯಕ್ತಿಕ ಒಲಿಂಪಿಕ್ ಪದಕ ಗೆದ್ದ ನಿಮಗೆ ಅಭಿನಂದನೆಗಳು’ ಎಂದು ನಟ ರಣದೀಪ್ ಹೂಡಾ ಟ್ವೀಟ್ ಮಾಡಿದ್ದಾರೆ. ಪಿ.ವಿ.ಸಿಂಧು ಗೆಲುವಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ಆಯ್ದ ಕೆಲವು ಇಲ್ಲಿವೆ..

ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಮ್ ಪೋಸ್ಟ್​

ಸಮಂತಾ ಅಕ್ಕಿನೇನಿ ಇನ್​ಸ್ಟಾಗ್ರಾಮ್ ಪೋಸ್ಟ್

ತಾಪ್ಸಿ ಪನ್ನು ಇನ್​ಸ್ಟಾಗ್ರಾಮ್ ಸ್ಟೋರಿ

ದುಲ್ಕರ್ ಸಲ್ಮಾನ್ ಇನ್​ಸ್ಟಾಗ್ರಾಮ್ ಪೋಸ್ಟ್

(Cinema Stars Celebrate PV Sindhus Achievement winning Olympic bronze medal)

Click on your DTH Provider to Add TV9 Kannada