AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆ ಭಾರತದ ಹೆಮ್ಮೆ, ಸಿಂಧುಗೆ ಹೃದಯ ತುಂಬಿದ ಅಭಿನಂದನೆ: ಒಲಿಂಪಿಕ್ ಪದಕ ವಿಜೇತೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

PV Sindhu: ಒಲಿಂಪಿಕ್ಸ್​ನ ಎರಡು ವೈಯಕ್ತಿಕ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯಕ್ಕೆ ಪಿ.ವಿ.ಸಿಂಧು ಪಾತ್ರರಾಗಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಹ ಸಿಂಧು ಅವರನ್ನು ಶ್ಲಾಘಿಸಿದ್ದಾರೆ.

ಆಕೆ ಭಾರತದ ಹೆಮ್ಮೆ, ಸಿಂಧುಗೆ ಹೃದಯ ತುಂಬಿದ ಅಭಿನಂದನೆ: ಒಲಿಂಪಿಕ್ ಪದಕ ವಿಜೇತೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ
ಬ್ಯಾಡ್ಮಿಂಟನ್ ಪದಕ ವಿಜೇತೆ ಪಿ.ವಿ.ಸಿಂಧು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 01, 2021 | 9:22 PM

Share

ಬೆಂಗಳೂರು: ಟೊಕಿಯೊ ಒಲಿಂಪಿಕ್ಸ್​ನ ಮಹಿಳಾ ಸಿಂಗಲ್ಸ್​ ಬ್ಯಾ ಚೀನಾದ ಹೆ ಬಿಂಗ್ ಜಿಯೊ ಅವರನ್ನು ಮಣಿಸಿ ಕಂಚಿನ ಪದಕ ಗೆದ್ದ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಒಲಿಂಪಿಕ್ಸ್​ನ ಎರಡು ವೈಯಕ್ತಿಕ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯಕ್ಕೆ ಪಿ.ವಿ.ಸಿಂಧು ಪಾತ್ರರಾಗಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಹ ಸಿಂಧು ಅವರನ್ನು ಶ್ಲಾಘಿಸಿದ್ದಾರೆ.

ಪಿ.ವಿ.ಸಿಂಧು ಸಾಧನೆಯನ್ನು ಶ್ಲಾಘಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದನೆಯ ಟ್ವೀಟ್​ ಮಾಡಿದ್ದಾರೆ. ‘ಎರಡು ಬಾರಿ ಒಲಿಂಪಿಕ್ಸ್​ ಪದಕ ಜಯಿಸಿದ ಮೊದಲ ಭಾರತೀಯ ಮಹಿಳಾ ಸಾಧಕಿ ಪಿ.ವಿ.ಸಿಂದು. ಸತತ ಸಾಧನೆ, ಬದ್ಧತೆ ಮತ್ತು ಉತ್ಕರ್ಷಕ್ಕೆ ಅವರು ಅತ್ಯುತ್ತಮ ಮಾದರಿಯಾಗಿದ್ದಾರೆ. ಭಾರತಕ್ಕೆ ಶ್ರೇಯಸ್ಸು ತಂದುಕೊಟ್ಟ ಸಿಂಧು ಅವರಿಗೆ ನಮ್ಮ ಹೃದಯ ತುಂಬಿದ ಅಭಿನಂದನೆಗಳು’ ಎಂದು ರಾಷ್ಟ್ರಪತಿಯ ಟ್ವಿಟರ್​ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಪಿ.ವಿ.ಸಿಂಧು ದೇಶದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ‘ಸಿಂಧು ಅವರು ಅತ್ಯುತ್ತಮ ಸಾಧನೆಯಿಂದ ನಮಗೆಲ್ಲರಿಗೂ ಸಂತಸವಾಗಿದೆ. ಟೊಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಅವರಿಗೆ ಅಭಿನಂದನೆಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಪಿ.ವಿ.ಸಿಂಧು ಅವರಿಗೆ ಕರೆ ಮಾಡಿ ಮಾತನಾಡಿದರು. ಸಾಧನೆಗಾಗಿ ಅಭಿನಂದಿಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಮಗಳ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ಪಿ.ವಿ.ಸಿಂಧು ಅವರ ತಂದೆ ಪಿ.ವಿ.ರಮಣ, ‘ಒಂದು ವೇಳೆ ಸಿಂಧು ಈ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ ಅವಳೊಡನೆ ಐಸ್​ಕ್ರೀಂ ತಿನ್ನುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ನನ್ನ ಮಗಳು ಪ್ರಧಾನಿಯೊಂದಿಗೆ ಐಸ್​ಕ್ರೀಂ ತಿನ್ನುತ್ತಾಳೆ’ ಎಂದು ರಮಣ ಹೇಳಿದರು.

(PV Sindhu is Pride of India Tweets PM Narendra Modi President Ramnath Kovind)

ಇದನ್ನೂ ಓದಿ: PV Sindhu: ಪಿವಿ ಸಿಂಧುಗೆ ಕಂಚಿನ ಪದಕ: ಹೊಸ ದಾಖಲೆ ಬರೆದ ಭಾರತೀಯ ಆಟಗಾರ್ತಿ

ಇದನ್ನೂ ಓದಿ: Tokyo Olympics: ಕಂಚಿಗಾಗಿ ಹೋರಾಡಲು ಸಿಂಧು ತಯಾರಿ

Published On - 8:56 pm, Sun, 1 August 21

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ