PV Sindhu: ಪಿವಿ ಸಿಂಧುಗೆ ಕಂಚಿನ ಪದಕ: ಹೊಸ ದಾಖಲೆ ಬರೆದ ಭಾರತೀಯ ಆಟಗಾರ್ತಿ

PV Sindhu: ಪಿವಿ ಸಿಂಧುಗೆ ಕಂಚಿನ ಪದಕ: ಹೊಸ ದಾಖಲೆ ಬರೆದ ಭಾರತೀಯ ಆಟಗಾರ್ತಿ
PV Sindhu

Tokyo Olympic 2020: ಈ ಮೂಲಕ ಸಿಂಧು ( PV Sindhu ) ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2016ರಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು.

TV9kannada Web Team

| Edited By: Zahir PY

Aug 01, 2021 | 9:26 PM

ಟೋಕಿಯೋ ಒಲಿಂಪಿಕ್ಸ್​​ನ (Tokyo Olympic) ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ( PV Sindhu ) ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಹೀ ಬಿಂಗ್ಜಿಯಾವೊ ( He Bingjiao ) ಅವರನ್ನು 21-13, 21-15 ನೇರ ಸೆಟ್​ಗಳಿಂದ ಮಣಿಸುವ ಮೂಲಕ ಪದಕಕ್ಕೆ ಕೊರೊಳೊಡ್ಡಿದ್ದರು.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನ ಆರಂಭದಲ್ಲೇ ಸಿಂಧು ಮೇಲುಗೈ ಸಾಧಿಸಿದ್ದರು . ಸಿಂಧು ಅವರ ಭರ್ಜರಿ ಟೈಮಿಂಗ್ ಹಾಗೂ ನಿಖರತೆ ಮುಂದೆ ಮೊದಲ ಸುತ್ತಿನಲ್ಲಿ ಚೀನಾ ಆಟಗಾರ್ತಿ  21-13 ರಿಂದ ಸೋಲೊಪ್ಪಿಕೊಂಡರು. ಇನ್ನು ಮೊದಲ ಸುತ್ತನ್ನು ಗೆದ್ದ ಆತ್ಮ ವಿಶ್ವಾಸದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು.

ಕ್ರಾಸ್ ಕೋರ್ಟ್ ಆಟದ ಮೂಲಕ ಗಮನ ಸೆಳೆದ ಸಿಂಧು ಒಂದು ಹಂತದಲ್ಲಿ ಹೀ ಬಿಂಗ್ಜಿಯಾವೊ ವಿರುದ್ದ ಮೇಲುಗೈ ಸಾಧಿಸಿದ್ದರು. ಆದರೆ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದ  ಹೀ ಬಿಂಗ್ಜಿಯಾವೊ ಭರ್ಜರಿ ಪೈಪೋಟಿ ನೀಡಿದರು. ಇದಾಗ್ಯೂ ಅಂತಿಮವಾಗಿ 21-15 ಅಂತರದಿಂದ ಸೋಲುಣಿಸಿದ ಸಿಂಧು ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದರೊಂದಿಗೆ ಒಲಿಂಪಿಕ್ಸ್​ನಲ್ಲಿ ಬಾಡ್ಮಿಂಟನ್​ನಲ್ಲಿ ಭಾರತಕ್ಕಾಗಿ 2 ಪದಕ ಗೆದ್ದುಕೊಟ್ಟ ದಾಖಲೆಯನ್ನು ಸಿಂಧು ಬರೆದರು.

ಈ ಮೂಲಕ ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2016ರಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಇದೀಗ ಕಂಚಿನ ಪದಕದೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ.

ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸಿಂಧು ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಅದರಂತೆ ಸೆಮಿ ಫೈನಲ್ ಪ್ರವೇಶಿಸಿದ್ದ ಅವರು ತೈ ಜು ಯಿಂಗ್​ ವಿರುದ್ಧ 18-21, 12-21 ಸೆಟ್​ಗಳಿಂದ ಪರಾಜಯಗೊಂಡಿದ್ದರಿಂದ ಚಿನ್ನದ ಕನಸು ಭಗ್ನಗೊಂಡಿತು. ಇದೀಗ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಸದ್ಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಒಂದು ಬೆಳ್ಳಿ (ಮೀರಾಬಾಯಿ ಚಾನು) ಹಾಗೂ ಒಂದು ಕಂಚಿನ ಪದಕ ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

Follow us on

Related Stories

Most Read Stories

Click on your DTH Provider to Add TV9 Kannada