ಟೊಕಿಯೊ ಒಲಂಪಿಕ್ಸ್: ಭಾರತಕ್ಕೆ ಆರ್ಚರ್ ಸ್ಪರ್ಧೆಯಲ್ಲಿ ಪದಕದ ಭರವಸೆ ಹುಟ್ಟಿಸಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಅನ್ ಸಾನ್ ಅವರಿಗೆ 6-0 ಅಂತರದಿಂದ ದೀಪಿಕಾ ಕುಮಾರಿ ಶರಣಾಗಿದ್ಧಾರೆ. ಉತ್ತಮವಾಗಿ ಅಭಿಯಾನ ಆರಂಭಿಸಿ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ದೀಪಿಕಾ ಅವರಿಗೆ ಕ್ವಾರ್ಟರ್ ಫೈನಲ್ನಲ್ಲಿ ಅನ್ ಸಾನ್ ಅವರು ಬ್ರೇಕ್ ಹಾಕಿದ್ದಾರೆ. ಈ ಗೆಲುವಿನೊಂದಿಗೆ ಅನ್ ಸಾನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ದೀಪಿಕಾ ಕುಮಾರಿ ಅವರಿಗೆ ಪದಕ ಗೆಲ್ಲಲು ಕೇವಲ ಮೂರು ಹೆಜ್ಜೆಗಳಿದ್ದವು. ಈ ಸೋಲಿನೊಂದಿಗೆ ಅವರ ಟೊಕಿಯೊ ಒಲಂಪಿಕ್ಸ್ ಅಭಿಯಾನ ಅಂತ್ಯವಾಗಿದೆ.
ದಕ್ಷಿಣ ಕೊರಿಯಾದ ಅನ್ ಸಾನ್ ಅವರು ಈಗಾಗಲೇ ಟೂರ್ನಿಯಲ್ಲಿ ಎರಡು ಪದಕಗಳಿಗೆ ಕೊರಳೊಡ್ಡಿದ್ದಾರೆ. ಮಹಿಳೆಯರ ಗುಂಪು ಸ್ಪರ್ಧೆಯಲ್ಲಿ ಹಾಗೂ ಮಿಶ್ರ ಗುಂಪು ಸ್ಪರ್ಧೆಯಲ್ಲಿ ಈಗಾಗಲೇ ಗೆಲುವು ಸಾಧಿಸಿ ಹ್ಯಾಟ್ರಿಕ್ ಪದಕ ಜಯಿಸುವ ಹಂಬಲದಲ್ಲಿರುವ ಅನ್ ಸಾನ್ ಅವರು ದೀಪಿಕಾ ವಿರುದ್ಧದ ಜಯದೊಂದಿಗೆ ಪ್ರಶಸ್ತಿಗೆ ಮತ್ತಷ್ಟು ಸನಿಹವಾಗಿದ್ದಾರೆ.
ಈ ಕುರಿತು ಭಾರತದ ಅಧಿಕೃತ ಒಲಂಪಿಕ್ಸ್ ಟ್ವಿಟರ್ ಖಾತೆ ಹಂಚಿಕೊಂಡ ಟ್ವೀಟ್:
? for #IND‘s Deepika Kumari in the women’s individual recurve #archery event.
She lost to #KOR‘s San An 0-6, ending her #Tokyo2020 run ?#StrongerTogether | #UnitedByEmotion
— #Tokyo2020 for India (@Tokyo2020hi) July 30, 2021
ಭಾರತಕ್ಕೆ ಆರ್ಚರಿ ಸ್ಪರ್ಧೆಯಲ್ಲಿ ಮೊದಲ ಪದಕ ತಂದುಕೊಡುವ ಹುಮ್ಮಸ್ಸಿನಲ್ಲಿದ್ದ ದೀಪಿಕಾ ಅವರಿಗೆ ಈ ಪಂದ್ಯದಿಂದ ನಿರಾಸೆಯಾಗಿದೆ.
ಇದನ್ನೂ ಓದಿ: Tokyo Olympics: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!
ಇದನ್ನೂ ಓದಿ: Tokyo Olympics: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ
(Indian Archer Deepika Kumari eliminated in quarter finals of Tokyo Olympics )
Published On - 12:21 pm, Fri, 30 July 21