P.R. Sreejesh: ಭಾರತದ ಹಾಕಿ ತಾರೆ ಶ್ರೀಜೇಶ್‌ಗೆ ಭರ್ಜರಿ ಬಹುಮಾನ ಘೋಷಿಸಿದ ಕೇರಳ ಸರ್ಕಾರ
Indian Hockey Team: ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಇದಾಗ್ಯೂ ಅಂತಿಮ ಸುತ್ತಿಗೇರುವಲ್ಲಿ ಎಡವಿತ್ತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ (P.R. Sreejesh) ಅವರಿಗೆ 2 ಕೋಟಿ ರೂ. ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ಕ್ರೀಡಾ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಟಗಾರನಿಗೆ ಕೇರಳ ಸರ್ಕಾರ ಯಾವುದೇ ಪ್ರೋತ್ಸಾಹ ಧನ ಘೋಷಿಸಿಲ್ಲ ಎಂದು ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಶ್ರೀಜೇಶ್ (Indian Hockey Team Goalkeeper) ಅವರಿಗೆ ತಮ್ಮ ಹುದ್ದೆಯಲ್ಲಿ ಬಡ್ತಿಯೊಂದಿಗೆ ಬಹುಮಾನ ಮೊತ್ತ ಘೋಷಿಸಲಾಗಿದೆ.
ಈ ಹಿಂದೆ ಪಿ.ಆರ್ ಶ್ರೀಜೇಶ್ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕ (ಕ್ರೀಡೆ) ಹುದ್ದೆಯನ್ನು ಹೊಂದಿದ್ದರು. ಇದೀಗ ಅವರನ್ನು ಜಂಟಿ ನಿರ್ದೇಶಕರಾಗಿ (ಕ್ರೀಡೆ) ಬಡ್ತಿ ನೀಡಲಾಗುವುದು ಎಂದು ಕೇರಳ ರಾಜ್ಯ ಸರ್ಕಾರ ಪ್ರಕಟಿಸಿದೆ. ಇದರ ಜೊತೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕೇರಳದ 8 ಕ್ರೀಡಾಪಟುಗಳಿಗೂ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ನೀಡುವುದಾಗಿ ಕೇರಳದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ 41 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಗೋಲಿ ಶ್ರೀಜೇಶ್ ಅವರಿಗೆ ದುಬೈ ಮೂಲದ ಉದ್ಯಮಿ ವಿಪಿಎಸ್ ಹೆಲ್ತ್‌ಕೇರ್ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕ ಡಾ. ಶಂಸೀರ್ ವಯಲಿಲ್ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದರು. ಇದೀಗ ಕೇರಳ ಸರ್ಕಾರ ಕೂಡ ರಾಜ್ಯದ ಆಟಗಾರರಿಗೆ ಬಹುಮಾನ ಮೊತ್ತವನ್ನು ಘೋಷಿಸಿದೆ.
ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಇದಾಗ್ಯೂ ಅಂತಿಮ ಸುತ್ತಿಗೇರುವಲ್ಲಿ ಎಡವಿತ್ತು. ಅದಾಗ್ಯೂ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಕಂಚಿನ ಪದಕಕ್ಕೆ ಕೊರೊಳ್ಳೊಡ್ಡಿತು.
ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ
ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ
ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ
(Kerala Government Announces Rs 2 Crore Cash Reward Men’s Hockey Team Goalkeeper P.R. Sreejesh)