ಟೊಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಪದಕ ಗೆಲ್ಲಲು ಬಹಳ ಶ್ರಮಪಟ್ಟಿದ್ದೇನೆ. ತ್ಯಾಗ ಮಾಡಿದ್ದೇನೆ. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಮೀರಾಬಾಯಿ ಚಾನು ಟೋಕಿಯೋದಿಂದ ದೂರವಾಣಿ ಮೂಲಕ ತಿಳಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ 2 ದಶಕದ ಬಳಿಕ ಪದಕದ ಭಾಗ್ಯ ಸಿಕ್ಕಿದೆ. 2 ದಶಕದ ಹಿಂದೆ ಭಾರತದ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದ್ದರು. ಇಂದು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಅಪರೂಪದ ಸಾಧನೆ ಮಾಡಿದ್ದಾರೆ. ಭಾರತೀಯರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಖುಷಿ ಅನುಭವಿಸುವಂತೆ ಮತ್ತು ಹೆಮ್ಮೆಪಡುವಂತೆ ಮಾಡಿದ್ದಾರೆ.
‘ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಬಹಳ ಹೆಮ್ಮೆಯಾಗುತ್ತಿದೆ. ವೇಟ್ ಲಿಫ್ಟಿಂಗ್ನಲ್ಲಿ ಇದು ನಮ್ಮ ದೇಶದ 2ನೇ ಪದಕ. ಬಾಕ್ಸಿಂಗ್ ಫೆಡರೇಷನ್ನ ಕೋಚ್, ನನ್ನ ಕುಟುಂಬ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪದಕ ಗೆಲ್ಲಲು ಬಹಳ ಶ್ರಮಪಟ್ಟಿದ್ದೇನೆ. ಬಹಳಷ್ಟು ತ್ಯಾಗ ಮಾಡಿದ್ದೇನೆ. ಟೊಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಗುರಿಯಾಗಿತ್ತು’ ಎಂದು ಅವರು ತಿಳಿಸಿದ್ದಾರೆ.
ಶಿಷ್ಯೆಯ ಸಾಧನೆಯಿಂದ ಮೀರಾಬಾಯಿ ಚಾನು ಕೋಚ್ ವಿಜಯಕುಮಾರ್ ಕೂಡ ಸಖತ್ ಖುಷಿಯಾಗಿದ್ದಾರೆ. ಭಾರತದಲ್ಲಿ ಇನ್ನಷ್ಟು ಯುವಜನರು ವೇಟ್ ಲಿಫ್ಟಿಂಗ್ನಲ್ಲಿ ತೊಡಗಿಸಿಕೊಳ್ಳಲು ಈ ಪದಕವು ಸ್ಪೂರ್ತಿ ನೀಡಲಿದೆ. ಭವಿಷ್ಯದಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಒಲಿಂಪಿಕ್ಸ್ ಪದಕಗಳು ಸಿಗಲಿವೆ. ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಕೋಚಿಂಗ್ ಪಡೆಯಲು ನಮ್ಮನ್ನು ಆಮೆರಿಕಾಕ್ಕೆ ಕಳಿಸಿತ್ತು. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಭಾರತದಲ್ಲಿ ತರಬೇತಿ ಪಡೆಯಲು ಸೂಕ್ತ ವಾತಾವರಣ ಇರಲಿಲ್ಲ. ಅಲ್ಲಿ ಸಿಕ್ಕ ತರಬೇತಿಯಿಂದ ಬಹಳ ಅನುಕೂಲವಾಯಿತು’ ಹೇಳಿದ್ದಾರೆ.
‘ನಾವು ಚಿನ್ನದ ಪದಕ ಗೆಲ್ಲಲು ಹೋರಾಡಿದೆವು. ಆದರೆ ಬೆಳ್ಳಿ ಪದಕ ಸಿಕ್ಕಿದೆ. ಸಾಧನೆ ಬಗ್ಗೆ ಖುಷಿ, ತೃಪ್ತಿ ಇದೆ. ಭಾರತದ ಮೊದಲ ಪದಕ ವೇಟ್ ಲಿಫ್ಟಿಂಗ್ ಮೂಲಕ ಬಂದಿರುವುದಕ್ಕೆ ನಮಗೆಲ್ಲರಿಗೂ ಖುಷಿಯಾಗಿದೆ. 2000ನೇ ಇಸವಿಯ ಬಳಿಕ ಇದೇ ಮೊದಲ ಬಾರಿಗೆ ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಪದಕ ಬಂದಿದೆ. ಇದು ಬಹಳ ಸಂತೋಷದ ಕ್ಷಣ’ ಎಂದು ಕೋಚ್ ವಿಜಯ ಕುಮಾರ್ ಟೊಕಿಯೊದಿಂದ ಪೋನ್ ಮೂಲಕ ಭಾರತದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
What a super start by India ?? ?
Weightlifter #MirabaiChanu won Silver Medal ? in women’s 49 kg category.She lifted 87kg in snatch & 115kg in the clean & jerk.@mirabai_chanu Congrats Mira? Nation is proud of you ??️♀️?#Tokyo2020 pic.twitter.com/CvahVlYiti— Major Surendra Poonia (@MajorPoonia) July 24, 2021
(Mirabai Chanu reacts to Indian Media after winning silver medal in Tokyo Olympics)
ಇದನ್ನೂ ಓದಿ: ಟೊಕಿಯೋ ಒಲಂಪಿಕ್ಸ್ 2020: ಒಟ್ಟು 202 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು
ಇದನ್ನೂ ಓದಿ: Tokyo 2020: ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಒಲಿಂಪಿಕ್ ಟಿಕೆಟ್ ಪಡೆದ ಭಾರತದ ಏಕೈಕ ವೇಟ್‌ಲಿಫ್ಟರ್ ಮೀರಾಬಾಯಿ ಚಾನು