ಮೀರಾಬಾಯಿ ಟ್ರಕ್ ಚಾಲಕರ ಸಹಾಯದಿಂದ ತನ್ನ ಗ್ರಾಮದಿಂದ 22 ಕಿಮೀ ದೂರದಲ್ಲಿರುವ ತರಬೇತಿ ಕೇಂದ್ರಕ್ಕೆ ಹೋಗುತ್ತಿದ್ದರು. ಮೀರಾಬಾಯಿಯ ಗ್ರಾಮ, ನಾಂಗ್‌ಪಾಕ್ ಕಾಕ್ಚಿಂಗ್, ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಕ್ರೀಡಾ ಸಂಕೀರ್ಣದಿಂದ 22 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿದೆ. ಅಲ್ಲಿಗೆ ಹೋಗಲು ಅವರು ಟ್ರಕ್ ಚಾಲಕರ ಸಹಾಯವನ್ನು ಪಡೆಯುತ್ತಿದ್ದರು. ಪದಕವನ್ನು ಗೆದ್ದ ನಂತರ ಅವರು ಇತ್ತೀಚೆಗೆ ಈ ಟ್ರಕ್ ಚಾಲಕರಿಗೆ ಧನ್ಯವಾದ ಅರ್ಪಿಸಿದರು.