ನಾನು ಗೆದ್ದಿರುವ ಚಿನ್ನದ ಪದಕ ಕೇವಲ ನನಗೆ ಮಾತ್ರ ಅಲ್ಲ ಸಮಸ್ತ ಭಾರತೀಯರಿಗೆ ಸೇರಿದ್ದು: ನೀರಜ್ ಚೋಪ್ರಾ
ಎರಡನೇ ಎಸೆತದಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದಾಗಲೇ ತಾನೊಂದು ವಿಶಿಷ್ಟ ಸಾಧನೆ ಮಾಡಿದ ಭಾವನೆ ಮೂಡಿತ್ತು ಎಂದು ಹೇಳಿದರು. ಅದು ತನಗೆ ಚಿನ್ನದ ಪದಕ ಗೆದ್ದು ಕೊಡುವ ಭಾವನೆ ಮನಸ್ಸಿನಲ್ಲಿ ಮೂಡಿಸಿತ್ತು ಎಂದು ಚೋಪ್ರಾ ಹೇಳಿದರು.
ಅಭೂತಪೂರ್ವ ಸಾಧನೆಯೊಂದಿಗೆ ಸ್ವದೇಶಕ್ಕೆ ಮರಳಿದ ನೀರಜ್ ಚೋಪ್ರಾ ಅವರು ತಾನು ಗೆದ್ದ ಬಂಗಾರದ ಪದಕ ತನಗೆ ಮಾತ್ರ ಅಲ್ಲ ಇಡೀ ದೇಶಕ್ಕೆ ಸೇರಿದ್ದು ಅಂತ ಹೇಳಿದರು. ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್ಗಳಲ್ಲಿ ಭಾರತಕ್ಕೆ ಮೊದಲ ಪದಕ ದೊರಕಿಸಿ ಕೊಟ್ಟು ಇತಿಹಾಸ ನಿರ್ಮಿಸಿದ ಚೋಪ್ರಾ ಸೋಮವಾರದಂದು ದೆಹಲಿಯಲ್ಲಿ ಒಲಂಪಿಕ್ಸ್ನಲ್ಲಿ ದೇಶಕ್ಕೆ ಪದಕ ಗೆದ್ದುಕೊಟ್ಟ ಅಥ್ಲೀಟ್ಗಳಿಗೆ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತಾಡಿ, ಅಂತಮ ಸುತ್ತಿನಲ್ಲಿ ಪದಕಕ್ಕಾಗಿ ಸೆಣಸು ಮುಗಿದ ನಂತರ ತಾನು ನೋವಿನಲ್ಲಿದ್ದೆ ಎಂದರು. ಆದರೆ ಜಾವೆಲಿನ್ ಎಸೆತದಲ್ಲಿ ಮಾಡಿದ ಅವಿಸ್ಮರಣೀಯ ಸಾಧನೆ ಎಲ್ಲ ನೋವುಗಳನ್ನು ಮರೆಸಿತು ಎಂದು ಚೋಪ್ರಾ ಹೇಳಿದರು.
ತನ್ನ ಎರಡನೇ ಎಸೆತದಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದಾಗಲೇ ತಾನೊಂದು ವಿಶಿಷ್ಟ ಸಾಧನೆ ಮಾಡಿದ ಭಾವನೆ ಮೂಡಿತ್ತು ಎಂದು ಹೇಳಿದರು. ಅದು ತನಗೆ ಚಿನ್ನದ ಪದಕ ಗೆದ್ದು ಕೊಡುವ ಭಾವನೆ ಮನಸ್ಸಿನಲ್ಲಿ ಮೂಡಿಸಿತ್ತು ಎಂದು ಚೋಪ್ರಾ ಹೇಳಿದರು.
‘ಒಂದು ವಿಶಿಷ್ಟವಾದ ಸಾಧನೆ ಮಾಡಿದ್ದೇನೆ ಅಂತ ನಾನು ಅಂದುಕೊಳ್ಳಲಾರಂಭಿಸಿದ್ದೆ. ನನ್ನ ಅತ್ತುತ್ತಮ ಅಂದರೆ ಗರಿಷ್ಠ ಎಸೆತವನ್ನು ದಾಖಲಿಸಿದ್ದೇನೆ ಎಂಬ ಭಾವನೆ ಮೂಡಿತ್ತು. ಆ ಎಸೆತವನ್ನು ನಿಜಕ್ಕೂ ಒಂದು ಅಧ್ಭುತ ಲಯದೊಂದಿಗೆ ಎಸೆದಿದ್ದೆ,’ ಎಂದು ಚೋಪ್ರಾ ಹೇಳಿದರು.
ಮರುದಿನ ಆ ಎಸೆತ ಎಷ್ಟು ಮಹತ್ವದ್ದು ಅಂತ ನನ್ನ ದೇಹಕ್ಕೂ ಗೊತ್ತಾಯಿತು. ಎಲ್ಲ ನೋವುಗಳನ್ನು ನೀಗಿಸುವ ಎಸೆತ ಅದಾಗಿತ್ತು. ಈ ಪದಕ ಸಮಸ್ತ ದೇಶದ್ದು,’ ಎಂದು ಚೋಪ್ರಾ ಹೇಳಿದರು.
ಯಾವುದಕ್ಕೂ ಹೆದರಬಾರದು ಎಂಬ ಸಂದೇಶವನ್ನು ಪ್ರತಿಯೊಬ್ಬ ಭಾರತೀಯನಿಗೆ ತಾನು ನೀಡಬಯಸುವುದಾಗಿ ಸೇನೆಯಲ್ಲಿ ಕೆಲಸ ಮಾಡುವ 23 ವರ್ಷ ವಯಸ್ಸಿನ ಚೋಪ್ರಾ ಹೇಳಿದರು.
‘ನಿಮ್ಮ ಪ್ರತಿಸ್ಫರ್ಧಿಯ ಸಾಮರ್ಥ್ಯದ ಬಗ್ಗೆ ನೀವು ಯೋಚಿಸಲೇ ಬೇಡಿ. ನಿಮ್ಮ ಗರಿಷ್ಟ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪ್ರಯತ್ನಿಸಿರಿ. ನೀವು ಮಾಡಬೇಕಿರುವುದು ಅಷ್ಟು ಮಾತ್ರ ಮತ್ತು ಆ ಧೋರಣೆಯೇ ಬಂಗಾರದ ಪದಕಗಳನ್ನು ಗೆಲ್ಲಿಸುತ್ತದೆ. ಪ್ರತಿಸ್ಪರ್ಧಿಯ ಬಗ್ಗೆ ಕಿಂಚಿತ್ತೂ ಭಯ, ಆತಂಕ ಬೇಡ,’ ಎಂದು ಅವರು ಹೇಳಿದರು.
ನೀರಜ್ ಚೋಪ್ರಾ ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನ ಗೆಲ್ಲುವುದರೊಂದಿಗೆ 13 ವರ್ಷಗಳ ನಂತರ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದು ಕೊಟ್ಟರು.
ಟೋಕಿಯೋನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿ ಒಟ್ಟು 7 ಪದಕ ಗಳಿಸಿದ ಭಾರತ ಒಲಂಪಿಕ್ಸ್ ಇತಿಹಾಸದಲ್ಲೇ ತನ್ನ ಅತ್ಯುತ್ತಮ ಸಾಧನೆ ತೋರಿತು.
ಇದನ್ನೂ ಓದಿ: Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ