Tokyo Olympic: ಚೊಚ್ಚಲ ಪಂದ್ಯದಲ್ಲೇ ಗೆದ್ದು ಬೀಗಿದ ಭವಾನಿ ದೇವಿ: ಮುಂದಿನ ಸುತ್ತು ಮತ್ತಷ್ಟು ಕಠಿಣ

| Updated By: Vinay Bhat

Updated on: Jul 26, 2021 | 7:29 AM

ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುವೊಬ್ಬರು ಈ ಸೈಬರ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಮೊದಲನೇ ಪಂದ್ಯದಲ್ಲಿಯೇ ಭವಾನಿ ದೇವಿ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದಾರೆ.

Tokyo Olympic: ಚೊಚ್ಚಲ ಪಂದ್ಯದಲ್ಲೇ ಗೆದ್ದು ಬೀಗಿದ ಭವಾನಿ ದೇವಿ: ಮುಂದಿನ ಸುತ್ತು ಮತ್ತಷ್ಟು ಕಠಿಣ
Bhavani Devi
Follow us on

ಟೋಕಿಯೋ ಒಲಿಂಪಿಕ್ಸ್ 2020 (Tokyo Olympic) ಆರಂಭವಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಭಾರತಕ್ಕೆ ಲಭಿಸಿರುವುದು ಕೇವಲ ಒಂದು ಪದಕ ಮಾತ್ರ. ನಿನ್ನೆ ಮೂರನೇ ದಿನ ಭಾರತದ ಕ್ರೀಡಾಪಟುಗಳು ಉತ್ತಮ ಕಮ್​ಬ್ಯಾಕ್ ಮಾಡಿ ಪ್ರದರ್ಶನ ನೀಡಿದರು. ಆದರೆ, ಯಾವುದೇ ಪದಕದ ಬೇಟೆ ಆಡಲಿಲ್ಲ.

ಇನ್ನು ನಾಲ್ಕನೇ ದಿನವಾದ ಸೋಮವಾರ, ಇಂದು ಮುಂಜಾನೆಯೆ ಭಾರತ ಉತ್ತಮ ಆಟ ಪ್ರಾರಂಭಿಸಿದೆ. ಭಾರತದ ಕ್ರೀಡಾಪಟು ಭವಾನಿದೇವಿ ಸೇಬರ್ ಫೆನ್ಸಿಂಗ್‍ನಲ್ಲಿ ತುನಿಶಿಯಾ ದೇಶದ ನಡಿಯ ಅಝೀಝಿ ಅವರನ್ನು 15-3 ಅಂತರದಿಂದ ಸೋಲಿಸುವುದರ ಮೂಲಕ ಶುಭಾರಂಭ ಮಾಡಿದ್ದಾರೆ.

 

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುವೊಬ್ಬರು ಈ ಸೈಬರ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಮೊದಲನೇ ಪಂದ್ಯದಲ್ಲಿಯೇ ಭವಾನಿ ದೇವಿ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಸುತ್ತಿಗೆ ಆಯ್ಕೆಯಾಗಿರುವ ಇವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ರಿಯೋ ಒಲಿಂಪಿಕ್ಸ್​ನ ಸೆಮಿ ಫೈನಲಿಸ್ಟ್ ಫ್ರೆಂಚ್​ನ ಮನೊನ್ ಬ್ರೂನೆಟ್ ವಿರುದ್ಧ ಭವಾನಿ ಮುಂದಿನ ಹಂತದಲ್ಲಿ ಸೆಣೆಸಾಡಲಿದ್ದಾರೆ.

ನಿನ್ನೆ ರೋಯಿಂಗ್ ವಿಭಾಗದಲ್ಲಿ ಅರ್ಜುನ್ ಮತ್ತು ಅರವಿಂದ್ ಸೆಮಿಫೈನಲ್​ಗೆ ಲಗ್ಗೆಯಿಟ್ಟರೆ, ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ತಮ್ಮ ಮೊದಲನೇ ಪಂದ್ಯವನ್ನು ಲೀಲಾಜಾಲವಾಗಿ ಗೆದ್ದುಕೊಂಡರು. ಬಾಕ್ಸರ್ ಮೇರಿ ಕೋಮ್ ಕೂಡ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.

ಟೇಬಲ್‌ ಟೆನಿಸ್‌ನಲ್ಲಿ ಭಾರತದ ಸ್ಟಾರ್‌ ಆಟಗಾರ್ತಿ ಮಣಿಕಾ ಬಾತ್ರಾ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದರು. ದ್ವಿತೀಯ ಸುತ್ತಿನಲ್ಲಿ 32ನೇ ರ್‍ಯಾಂಕಿಂಗ್‌ನ ಉಕ್ರೇನಿಯನ್‌ ಮಾರ್ಗರಿಟಾ ಪೆಸೋಟ್ಸ್‌ಕಾ ವಿರುದ್ಧ ಸೆಣಸುತ್ತಿದ್ದ 62ನೇ ರ್ಯಾಕಿಂಗ್‌ನ ಮಣಿಕಾ ಬಾತ್ರಾ ಮೊದಲೆರಡು ಗೇಮ್‌ ಕಳೆದುಕೊಂಡ ಬಳಿಕವೂ ನೀಡಿದ ಹೋರಾಟ ಪ್ರಶಂಸೆಗೆ ಪಾತ್ರವಾಯಿತು.

2-2 ಸಮಬಲ ಸಾಧಿಸಿದ ಬಳಿಕ 5ನೇ ಗೇಮ್‌ ಕೂಡ ಕಳಕೊಂಡರು. ಕೊನೆಯ 2 ಗೇಮ್‌ಗಳಲ್ಲಿ ಮತ್ತೆ ತಿರುಗೇಟು ನೀಡಿ 4-3 ಅಂತರದ ರೋಚಕ ಗೆಲುವು ಸಾಧಿಸಿದರು (4-11, 4-11, 11-7, 12-10, 8-11, 11-5, 11-7). 3ನೇ ಸುತ್ತಿನಲ್ಲಿ ಮಣಿಕಾ ಬಾತ್ರಾ ಆಸ್ಟ್ರಿಯಾದ ಸೋಫಿಯಾ ಪೊಲ್ಕನೋವಾ ಅವರನ್ನು ಎದುರಿಸಲಿದ್ದಾರೆ.

Tokyo Olympics: ಭಾರತಕ್ಕೆ ಹಾಕಿ ಆಟದ ಪಾಠ ಹೇಳಿಕೊಟ್ಟ ಕಾಂಗರೂಗಳು; 7-1 ಅಂತರದಿಂದ ಸೋತ ಪುರುಷರ ಹಾಕಿ ತಂಡ

(Tokyo Olympic 2020 Bhavani Devi shines on Games debut wins 15-3 against Nadia Azizi)

Published On - 7:12 am, Mon, 26 July 21