Tokyo Olympics 2020: ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿ : ಭಾರತಕ್ಕೆ ಎಷ್ಟನೇ ಸ್ಥಾನ?

| Updated By: ಝಾಹಿರ್ ಯೂಸುಫ್

Updated on: Jul 28, 2021 | 5:42 PM

tokyo olympics 2021 medal table: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಆರ್ಚರ್ ದೀಪಿಕಾ ಕುಮಾರಿ ಅವರು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತಲುಪಿರುವುದು ಪದಕದ ಆಸೆಯನ್ನು ಜೀವಂತವಾಗಿರಿಸಿದೆ.

Tokyo Olympics 2020: ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿ : ಭಾರತಕ್ಕೆ ಎಷ್ಟನೇ ಸ್ಥಾನ?
tokyo olympics 2021
Follow us on

ಟೋಕಿಯೋ ಒಲಿಂಪಿಕ್ಸ್ ಶುರುವಾಗಿ 5 ದಿನಗಳು ಕಳೆದಿವೆ. ಆರಂಭದಿಂದಲೂ ಜಪಾನ್ ಮತ್ತು ಚೀನಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ನಡೆಸುತ್ತಿದೆ. ಇನ್ನು ಮೊದಲ ಐದು ದಿನಗಳಲ್ಲಿ ಹಲವು ವಿಭಾಗದಲ್ಲಿ ಸ್ಪರ್ಧಿಸಿದರೂ ಭಾರತಕ್ಕೆ ಕೇವಲ ಒಂದು ಪದಕ ಮಾತ್ರ ಲಭಿಸಿದೆ. 49 ಕೆಜಿ ವೇಟ್-ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್​ನಲ್ಲಿ 115 ಕೆಜಿ) ಮೂಲಕ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

ಇದರ ಹೊರತಾಗಿ ಪದಕ ನಿರೀಕ್ಷೆ ಹೊಂದಿದ್ದ ಬಿಲ್ಲುಗಾರಿಕೆ ವಿಭಾಗದಲ್ಲಿ ತರುಣ್ ದೀಪ್ ರೈ ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಹಾಗೆಯೇ ಹಾಯಿ ದೋಣಿ ( ರೋಯಿಂಗ್) ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿದ್ದ ಅರ್ಜುನ್ ಲಾಲ್ ಹಾಗೂ ಅರವಿಂದ್ ಸಿಂಗ್ ಅವರು ಸೆಮಿಫೈನಲ್‍ನಲ್ಲಿ ಮುಗ್ಗರಿಸಿ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ.

ಮಹಿಳೆಯರ ಹಾಕಿ, ಆರ್ಚರಿ, ಹಾಯಿದೋಣಿ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಎಡವಿದ್ದು, ಪ್ರಶಸ್ತಿ ಸುತ್ತಿನಿಂದ ಹೊರಬೀಳುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಆರ್ಚರ್ ದೀಪಿಕಾ ಕುಮಾರಿ ಅವರು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತಲುಪಿರುವುದು ಪದಕದ ಆಸೆಯನ್ನು ಜೀವಂತವಾಗಿರಿಸಿದೆ.

ಮೊದಲ ಐದು ದಿನಗಳಲ್ಲಿ 12 ಚಿನ್ನ, 4 ಬೆಳ್ಳಿ, 5 ಕಂಚು ಸೇರಿ 21 ಪದಕಗಳೊಂದಿಗೆ ಜಪಾನ್ ಅಗ್ರಸ್ಥಾನದಲ್ಲಿದೆ. ಚೀನಾದ ಅಥ್ಲೀಟ್‍ಗಳು ಒಟ್ಟು 11 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳೊದಿಗೆ ಒಟ್ಟು 24 ಪದಕಗಳನ್ನು ಗೆಲ್ಲುವ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿದೆ. ಹಾಗೆಯೇ ಇನ್ನು ಅಮೆರಿಕಾದ ಕ್ರೀಡಾಪಟುಗಳು ಇದುವರೆಗೂ 10 ಚಿನ್ನ, 11 ರಜತ, 9 ಕಂಚಿನ ಪದಕಗಳೊಂದಿಗೆ ಒಟ್ಟು 30 ಪದಕಗಳನ್ನು ತಮ್ಮದಾಗಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ROC (ರಷ್ಯಾ) ದೇಶವಿದ್ದು, 7 ಚಿನ್ನ, 8 ಬೆಳ್ಳಿ ಹಾಗೂ 4 ಕಂಚು ಪದಕಗಳೊಂದಿಗೆ ಒಟ್ಟು 19 ಪದಕ ತಮ್ಮದಾಗಿಸಿಕೊಂಡಿದ್ದಾರೆ. 6 ಚಿನ್ನ, 1 ಬೆಳ್ಳಿ, 9 ಕಂಚು ಪಡೆದಿರುವ ಆಸ್ಟ್ರೇಲಿಯಾ (16 ಪದಕ) 5ನೇ ಸ್ಥಾನದಲ್ಲಿದೆ. 6ನೇ ಸ್ಥಾನದಲ್ಲಿ ಗ್ರೇಟ್ ಬ್ರಿಟನ್ (ಇಂಗ್ಲೆಂಡ್) 15 ಪದಕ ( ಚಿನ್ನ5, ಬೆಳ್ಳಿ 6, ಕಂಚು 4) , 7ನೇ ಸ್ಥಾನದಲ್ಲಿ ಕೊರಿಯಾ 11 ಪದಕ ( 4 ಚಿನ್ನ, 2 ಬೆಳ್ಳಿ, 5 ಕಂಚು) , 8ನೇ ಸ್ಥಾನದಲ್ಲಿ ಫ್ರಾನ್ಸ್ 8 ಪದಕ ( 3 ಚಿನ್ನ, 2 ಬೆಳ್ಳಿ, 3 ಕಂಚು) , 9ನೇ ಸ್ಥಾನದಲ್ಲಿ ನೆದರ್​ಲ್ಯಾಂಡ್​ 9 ಪದಕ (2 ಚಿನ್ನ, 5 ಬೆಳ್ಳಿ, 2 ಕಂಚು) ಹಾಗೂ 10ನೇ ಸ್ಥಾನದಲ್ಲಿ ಕೆನಡಾ 9 ಪದಕ ( 2 ಸ್ವರ್ಣ, 3 ಬೆಳ್ಳಿ, 4 ಕಂಚು) ಗಳೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಏಕೈಕ ಬೆಳ್ಳಿ ಪದಕ ಪಡೆದಿರುವ ಭಾರತ ಪದಕ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

(tokyo olympics 2021 medal table)