Tokyo Olympics: ಎಂಟು ಒಲಿಂಪಿಕ್ಸ್​ನಲ್ಲಿ ಮೂರು ರಾಷ್ಟ್ರಗಳನ್ನು ಪ್ರತಿನಿಧಿಸಿದ ಮಹಿಳಾ ಜಿಮ್ನಾಸ್ಟ್​ಗೆ ಭಾವಪೂರ್ವಕ ವಿದಾಯ

| Updated By: ಪೃಥ್ವಿಶಂಕರ

Updated on: Aug 08, 2021 | 7:10 PM

Oksana Chusovitina: ಚುಸೊವಿಟಿನಾ ಒಂದಲ್ಲ, ಎರಡಲ್ಲ ಎಂಟು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. 1992 ರ ಬಾರ್ಸಿಲೋನಾ ಒಲಿಂಪಿಕ್ಸ್‌ನಿಂದ ಆರಂಭವಾದ ಅವರ ಒಲಿಂಪಿಕ್ ಪ್ರಯಾಣವು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಗೊಂಡಿತು.

Tokyo Olympics: ಎಂಟು ಒಲಿಂಪಿಕ್ಸ್​ನಲ್ಲಿ ಮೂರು ರಾಷ್ಟ್ರಗಳನ್ನು ಪ್ರತಿನಿಧಿಸಿದ ಮಹಿಳಾ ಜಿಮ್ನಾಸ್ಟ್​ಗೆ ಭಾವಪೂರ್ವಕ ವಿದಾಯ
ಒಕ್ಸಾನಾ ಚುಸೊವಿಟಿನಾ
Follow us on

ಒಲಿಂಪಿಕ್ಸ್ ನಲ್ಲಿ ಒಮ್ಮೆಯಾದರೂ ಭಾಗವಹಿಸಬೇಕೆಂಬುದು ಜಗತ್ತಿನ ಪ್ರತಿಯೊಂದು ದೇಶದ ಕ್ರೀಡಾಪಟುಗಳು ಬಯಸುತ್ತಾರೆ. ಅಂತಹವರಲ್ಲಿ ಒಬ್ಬರೆಂದರೆ ಉಜ್ಬೇಕ್ ಮಹಿಳಾ ಜಿಮ್ನಾಸ್ಟ್, ಒಕ್ಸಾನಾ ಚುಸೊವಿಟಿನಾ. ಚುಸೊವಿಟಿನಾ ಒಂದಲ್ಲ, ಎರಡಲ್ಲ ಎಂಟು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. 1992 ರ ಬಾರ್ಸಿಲೋನಾ ಒಲಿಂಪಿಕ್ಸ್‌ನಿಂದ ಆರಂಭವಾದ ಅವರ ಒಲಿಂಪಿಕ್ ಪ್ರಯಾಣವು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಗೊಂಡಿತು. ಚುಸೊವಿಟಿನಾ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು, 8 ನೇ ಒಲಿಂಪಿಕ್ಸ್‌ನಲ್ಲಿ ಮೂರು ರಾಷ್ಟ್ರಗಳನ್ನು ಪ್ರತಿನಿಧಿಸಿದರು.

1992 ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚುಸೊವಿಟಿನಾ ಪಾದಾರ್ಪಣೆ ಮಾಡಿದರು. ಅಲ್ಲಿ ಅವರು ಸೋವಿಯತ್ ತಂಡಕ್ಕೆ ಚಿನ್ನದ ಪದಕ ಗೆದ್ದರು. ತನ್ನ ಚೊಚ್ಚಲ ಪಂದ್ಯದಿಂದ, ಚುಸೊವಿಟಿನಾ 17 ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ 11 ಪದಕಗಳನ್ನು ಗೆದ್ದಿದ್ದಾರೆ.

ಮಗನಿಗಾಗಿ ಮತ್ತೊಮ್ಮೆ ಆಟಕ್ಕೆ ಎಂಟ್ರಿ
ಸಿಡ್ನಿ 2000 ಕ್ರೀಡಾಕೂಟವು ಚುಸೊವಿಟಿನಾಗೆ ಕೊನೆಯ ಒಲಿಂಪಿಕ್ಸ್ ಆಗಿತ್ತು. ಆ ಸಮಯದಲ್ಲಿ, ಚುಸೊವಿಟಿನಾ ನಿವೃತ್ತಿಗೆ ಸೂಕ್ತವಾದ ವಯಸ್ಸು ಎಂದು ಪರಿಗಣಿಸಲಾಗಿತ್ತು. ಹೆರಿಗೆಯ ನಂತರ ಸಿಡ್ನಿಯಲ್ಲಿ ಸ್ಪರ್ಧಿಸುವ ಮೂಲಕ ಕ್ರೀಡಾಪಟು ಈಗಾಗಲೇ ಇತಿಹಾಸ ನಿರ್ಮಿಸಿದ್ದರು. ಚುಸೊವಿಟಿನಾ ಕ್ರೀಡೆಯಿಂದ ಹಿಂದೆ ಸರಿಯಲು ನಿರ್ಧರಿಸಿ ತನ್ನ ಕುಟುಂಬಕ್ಕೆ ಸಮಯವನ್ನು ವಿನಿಯೋಗಿಸಲು ಬಯಸಿದರು. ಆದರೆ 2002 ರಲ್ಲಿ ಅವರ ಮಗ ಕಾಯಿಲೆ ಬಿದ್ದಾಗ ಆತನ ವೈದ್ಯಕೀಯ ಶುಲ್ಕವನ್ನು ಭರಿಸಲು ಅವರು ಮತ್ತೆ ಕ್ರೀಡೆಗೆ ಮರಳಿದರು.

ಅವರು ಮತ್ತೊಮ್ಮೆ ತನ್ನ ಮಗನಿಗಾಗಿ ಹಣವನ್ನು ಸಂಗ್ರಹಿಸಲು ಅಂತರಾಷ್ಟ್ರೀಯ ಸ್ಪರ್ಧೆಗಳನ್ನು ಪ್ರವೇಶಿಸಿದರು. ಮತ್ತು 2008 ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಾಲ್ಟ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಬೀಜಿಂಗ್‌ನಲ್ಲಿ ಚೂಸೊವಿಟಿನಾ ತನ್ನ ಮೊದಲ ವೈಯಕ್ತಿಕ ಒಲಿಂಪಿಕ್ ಪದಕವನ್ನು ಗೆಲ್ಲುವ ಕೆಲವೇ ತಿಂಗಳುಗಳ ಮೊದಲು ಅವರ ಮಗ ರೋಗದಿಂದ ಮುಕ್ತನಾಗುತ್ತಾನೆ. ಅವರು 43 ನೇ ವಯಸ್ಸಿನಲ್ಲಿ 2018 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.

46 ವರ್ಷದ ಚುಸೊವಿಟಿನಾಗೆ ಹೆಚ್ಚಿನ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದು, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸ್ಟ್ಯಾಂಡಿಂಗ್ ಓವೇಶನ್ ಪಡೆದರು. ಕ್ರೀಡಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆದಾಗ್ಯೂ, ಒಕ್ಸಾನಾ ಚುಸೊವಿಟಿನಾ ಅವರು ಚಿನ್ನದ ಪದಕ ಗೆಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

Published On - 7:08 pm, Sun, 8 August 21