ಟೋಕಿಯೋ ಒಲಿಂಪಿಕ್ಸ್ 2020 (Tokyo Olympic) ಆರಂಭವಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾರತಕ್ಕೆ ಲಭಿಸಿರುವುದು ಕೇವಲಒಂದು ಪದಕ ಮಾತ್ರ. ಇಂದು ನಾಲ್ಕನೇ ದಿನವಾದ ಸೋಮವಾರ ಭಾರತ ಉತ್ತಮ ಆಟ ಪ್ರಾರಂಭಿಸಿದೆ.
ಚೊಚ್ಚಲ ಬಾರಿಯ ಒಲಿಂಪಿಕ್ನಲ್ಲಿ ಭವಾನಿದೇವಿ ಸೇಬರ್ ಫೆನ್ಸಿಂಗ್‍ನಲ್ಲಿ ತುನಿಶಿಯಾ ದೇಶದ ನಡಿಯ ಅಝೀಝಿ ಅವರನ್ನು 15-3 ಅಂತರದಿಂದ ಸೋಲಿಸುವುದರ ಮೂಲಕ ಶುಭಾರಂಭ ಮಾಡಿದರು.
ಇದರ ಬೆನ್ನಲ್ಲೆ ಭಾರತದ ತ್ರಿಮೂರ್ತಿಗಳಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕಜಕಿಸ್ತಾನದ ವಿರುದ್ಧ 6-2 ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
Indian men’s recurve archery team of Atanu Das, Pravin Jadhav, and Tarundeep Rai advance to quarterfinals after 6-2 win over Kazakhstan. They will play South Korea at 10:15 AM#Cheer4India #Tokyo2020 pic.twitter.com/RjwsM6smaK
— SAIMedia (@Media_SAI) July 26, 2021
ಈ ಮೂಲಕ ಬಿಲ್ಲುಗಾರರಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇವರು ಇದು ಬೆಳಗ್ಗೆ 10:15ಕ್ಕೆ ಕೊರಿಯಾ ಸ್ಪರ್ಧಿಗಳ ವಿರುದ್ಧ ಸೆಣಸಾಡಲಿದ್ದಾರೆ.
ವಿಶೇಷ ಎಂದರೆ ಭವಾನಿದೇವಿ ಅವರು ಇದೇ ಮೊದಲ ಬಾರಿಗೆ ಭಾರತದ ಪರ ಸೈಬರ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಪಟು ಆಗಿದ್ದಾರೆ. ಆಡಿದ ಮೊದಲನೇ ಪಂದ್ಯದಲ್ಲಿಯೇ ಭವಾನಿ ದೇವಿ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದಾರೆ.
ಸದ್ಯ ಎರಡನೇ ಸುತ್ತಿಗೆ ಆಯ್ಕೆಯಾಗಿರುವ ಇವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ರಿಯೋ ಒಲಿಂಪಿಕ್ಸ್ನ ಸೆಮಿ ಫೈನಲಿಸ್ಟ್ ಫ್ರೆಂಚ್ನ ಮನೊನ್ ಬ್ರೂನೆಟ್ ವಿರುದ್ಧ ಸೆಣೆಸಾಡಲಿದ್ದಾರೆ.
Tokyo Olympic: ಚೊಚ್ಚಲ ಪಂದ್ಯದಲ್ಲೇ ಗೆದ್ದು ಬೀಗಿದ ಭವಾನಿ ದೇವಿ: ಮುಂದಿನ ಸುತ್ತು ಮತ್ತಷ್ಟು ಕಠಿಣ
(Tokyo Olympics Indian archery team reaches quarter-finals after 6-2 win over Kazakhstan)