Tokyo Olympics: ಬೆಳ್ಳಿ ಹುಡುಗಿ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಫ್ರೀ ಪಿಜ್ಜಾ

| Updated By: Vinay Bhat

Updated on: Jul 25, 2021 | 1:28 PM

ಶನಿವಾರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದರು.

Tokyo Olympics: ಬೆಳ್ಳಿ ಹುಡುಗಿ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಫ್ರೀ ಪಿಜ್ಜಾ
Mirabai Chanu
Follow us on

ಟೋಕಿಯೋ ಒಲಿಂಪಿಕ್ಸ್​​ನಲ್ಲಿ (Tokyo Olympics) ಭಾರತ ಪರ ಚೊಚ್ಚಲ ಪದಕ ಮುಡಿಗೇರಿಸಿಕೊಂಡ ವೈಟ್​​ಲಿಫ್ಟರ್ ಮೀರಾಬಾಯಿ ಚಾನು (Mirabai Chanu) ಅವರಿಗೆ ಡೊಮಿನೊಸ್ ಪಿಜ್ಜಾವನ್ನು (Dominos Pizza) ಜೀವನ ಪೂರ್ತಿಯಾಗಿ ಉಚಿತವಾಗಿ ನೀಡುವುದಾಗಿ ಡೊಮಿನೊಸ್ ಇಂಡಿಯಾ ಟ್ವೀಟ್ ಮಾಡಿದೆ.

ಶನಿವಾರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದರು. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಭಾರತ ಪರ ವೇಟ್ಲಿಫ್ಟಿಂಗ್​ನಲ್ಲಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎಂಬ ವಿಶೇಷ ಸಾಧನೆ ಮಾಡಿದರು.

ಬಳಿಕ ನಡೆದ  ಸಂದರ್ಶನವೊಂದರಲ್ಲಿ ಮಾತನಾಡಿದ ಮೀರಾಬಾಯಿ ಇಷ್ಟದ ತಿನಿಸಿನ ಬಗ್ಗೆ ಮಾತನಾಡಿದ್ದಾರೆ. ಈ ಮೆಡಲ್ ಸಿಕ್ಕ ಬಳಿಕ ನಿಮ್ಮ ಮೊದಲ ಕೆಲಸ ಏನಾಗಿರುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೀರಾಬಾಯಿ, ಪಿಜ್ಜಾ ತಿನ್ನೋದೇ ನನ್ನ ಮೊದಲ ಅಸೆ ಎಂದು ಹೇಳಿದ್ದಾರೆ. ನನಗೆ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಆದರೆ ಕೆಲ ದಿನಗಳಿಂದ ಪಿಜ್ಜಾ ತಿನ್ನದೇ ಇರೋದ್ರಿಂದ ಕೊಂಚ ಜಾಸ್ತಿನೇ ತಿಂತೀನಿ ಎಂದು ಹೇಳಿದರು.

ಮೀರಾಬಾಯಿ ಹೀಗೊಂದು ಮಾತು ಹೇಳಿದ್ದೇ ತಡ, ಡೊಮಿನೊಸ್ ಬೆಳ್ಳಿ ಹುಡುಗಿಗೆ ಭರ್ಜರಿ ಆಫರ್ ಅನ್ನೇ ನೀಡಿದೆ. ಇನ್ನು ಮುಂದೆ ಮೀರಾಬಾಯಿ ಚಾನು ಪಿಜ್ಜಾಗಾಗಿ ಕಾಯುವುದು ಬೇಡ. ಅವರಿಗೆ ಜೀವನ ಪೂರ್ತಿ ಉಚಿತ ಪಿಜ್ಜಾವನ್ನು ನೀಡಲಿದ್ದೇವೆ ಎಂದು ಹೇಳಿದೆ.

 

ಅಲ್ಲದೇ ಇಂಫಾಲ್‍ನಲ್ಲಿರುವ ಅವರ ಮನೆಗೆ ಚಾನು ಅವರ ಗೆಲುವನ್ನು ಸಂಭ್ರಮಿಸಲು ಪಿಜ್ಜಾ ಕಳುಹಿಸಿಕೊಟ್ಟಿದೆ. ಡೊಮಿನೊಸ್ ಸಂಸ್ಥೆ ಮಾಡಿರೋ ಟ್ವೀಟ್‍ಗೆ ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು, ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರ ಆಸೆಯನ್ನ ಪೂರ್ತಿ ಮಾಡೋ ನಿಟ್ಟಿನ ಕೆಲಸ ಮಾಡುತ್ತಿರೋದಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ.

 

ಟೋಕಿಯೋ ಒಲಿಂಪಿಕ್​ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಮೀರಾಬಾಯಿ ಮೊದಲ ಪ್ರಯತ್ನದಲ್ಲೇ ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್‌ ಲಿಫ್ಟ್‌ ಮಾಡುವ ಸ್ಯಾಚ್‌ ಲಿಫ್ಟ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಒಲಿಂಪಿಕ್ಸ್‌ ದಾಖಲೆ ಬರೆದಿದ್ದಾರೆ.

 

ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ಭಾರತ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಪದಕವೊಂದನ್ನು ಗೆದ್ದ ಸಾಧನೆ ಮಾಡಿತು.

Tokyo Olympics 2020: ಭಾರತಕ್ಕೆ ಭಾರೀ ನಿರಾಸೆ: ಮಹಿಳಾ ಟೆನಿಸ್ ಡಬಲ್ಸ್​ನಲ್ಲಿ ಸೋಲುಂಡ ಸಾನಿಯಾ-ಅಂಕಿತಾ

The Hundred: 43 ಬಾಲ್​, ಅಜೇಯ 92 ರನ್: ಜೆಮಿಮಾ ರೊಡ್ರಿಗಸ್ ಏಕಾಂಗಿ ಹೋರಾಟ: ರೋಚಕ ಜಯ

(Tokyo Olympics Mirabai Chanu Wishes for Pizza, Domino’s India Offers Her Free Lifetime Supply)

Published On - 1:27 pm, Sun, 25 July 21