ಜುಲೈ 23ರಂದು ಬಹುನಿರೀಕ್ಷಿತ ಟೋಕಿಯೊ ಒಲಿಂಪಿಕ್ಸ್ (Tokyo Olympics) ಆರಂಭವಾಗಲಿದೆ. ಆದರೆ ಈ ಹಿಂದೆ ಇದ್ದಷ್ಟು ಸೌಕರ್ಯಗಳೊಂದಿಗೆ ಈ ಬಾರಿಯ ಒಲಿಂಪಿಕ್ಸ್ ಇರುವುದಿಲ್ಲ. ಕೊರೋನಾದಿಂದ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ಅದರಲ್ಲಿ ಮುಖ್ಯವಾಗಿ ಕ್ರೀಡಾಪಟುಗಳಿಗೆ ಆ್ಯಂಟಿ ಸೆಕ್ಸ್ ಬೆಡ್ (Anti-sex beds) ನೀಡಿರುವುದೂ ಎಲ್ಲರ ಆಸಕ್ತಿ ಕೆರಳಿಸುತ್ತಿದೆ.
ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದೆ ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಟೋಕಿಯೊ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಆ್ಯಂಟಿ-ಸೆಕ್ಸ್ ಬೆಡ್ಗಳನ್ನು ಅಳವಡಿಸಲಾಗಿದೆ. ಕ್ರೀಡಾಪಟುಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೋನಾ ಹರಡುವಿಕೆಯ ಭೀತಿಯಿಂದ ದೂರವಿರಲಿ ಎಂಬುದು ಇದರ ಉದ್ದೇಶವಾಗಿದೆ.
ವಿಶೇಷವಾಗಿ ಈ ಆ್ಯಂಟಿ ಸೆಕ್ಸ್ ಬೆಡ್ಗಳನ್ನು ಕಾರ್ಡ್ಬೋರ್ಡ್ಗಳಿಂದ ಮಾಡಲ್ಪಟ್ಟಿದೆ. ಅಲ್ಲದೆ ಅದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಮಲಗಲು ಸಾಧ್ಯವಿದೆ ಮತ್ತು ಒಬ್ಬ ವ್ಯಕ್ತಿಯ ತೂಕವನ್ನು ತಡೆಯುವ ಸಾಮರ್ಥ್ಯವಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳಾದರೆ ಈ ಹಾಸಿಗೆಗಳು ಮುರಿಯುವ ನಿರೀಕ್ಷೆಯಿದೆ. ಹಾಗಾಗಿ ಈ ಬಾರಿ ಕ್ರೀಡಾಪಟುಗಳಿಗೆ ಪ್ರಣಯಕ್ಕೆ ಬ್ರೇಕ್ ಹಾಕಲಾಗಿದೆ.
ಇನ್ನೂ ಒಂದು ವೇಳೆ ಕೊರೊನಾ ನಿಯಮಗಳನ್ನು ಪಾಲಿಸದಿದ್ದರೆ ಅಥವಾ ದೈಹಿಕ ಅಂತರ ಅನುಸರಿಸದಿದ್ದರೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಅನರ್ಹಗೊಳಿಸಲಾಗುತ್ತದೆ ಅಥವಾ ಹೊರಹಾಕಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಎಚ್ಚರಿಸಿದೆ.
ಇತ್ತ ಕಾರ್ಡ್ಬೋರ್ಡ್ನಿಂದ ಮಾಡಿದ ಮಂಚವನ್ನು ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಾದ ಓಟಗಾರ ಪೌಲ್ ಕೆಲಿಮೋ ತನಗೆ ನೀಡಿರುವ ಕಾರ್ಡ್ಬೋರ್ಡ್ ಮಂಚದ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಇಂಥ ಬೆಡ್ಗಳ ಮೇಲೆ ಸೆಕ್ಸ್ ಮಾಡುವುದು ನಿಜಕ್ಕೂ ಅಪಾಯಕಾರಿ. ಇನ್ಮುಂದೆ ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ. ಇದರಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗಲ್ಲ ಎಂದು ಪೌಲ್ ದೂರಿದ್ದಾರೆ.
Beds to be installed in Tokyo Olympic Village will be made of cardboard, this is aimed at avoiding intimacy among athletes
Beds will be able to withstand the weight of a single person to avoid situations beyond sports.
I see no problem for distance runners,even 4 of us can do? pic.twitter.com/J45wlxgtSo
— Paul Chelimo???? (@Paulchelimo) July 17, 2021
ಅಲ್ಲದೆ ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಸುಮಾರು 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್‌ಗಳನ್ನು ಸಂಘಟಕರು ವಿತರಿಸಲಿದ್ದಾರೆ. ಆದರೆ ಕ್ರೀಡಾಪಟುಗಳು ಅದನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಬಳಸಬಾರದು. ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದು ಐಒಸಿ ಸೂಚಿಸಿದೆ.
ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸ್: ಲಿವಿಂಗ್ಸ್ಟನ್ ಚೆಂಡನ್ನ ಸಿಕ್ಸ್ಗೆ ಅಟ್ಟಿದ ವಿಡಿಯೋ ಇಲ್ಲಿದೆ ನೋಡಿ
ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್ಕಿನ್ಸ್ ಆಸ್ಟ್ರೇಲಿಯಾದಿಂದ ಗಡಿಪಾರು
(Tokyo Olympics Anti-sex beds in Tokyo Olympics American sprinter shares images)
Published On - 12:16 pm, Mon, 19 July 21