ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್​ಕಿನ್ಸ್ ಆಸ್ಟ್ರೇಲಿಯಾದಿಂದ ಗಡಿಪಾರು

ಕ್ಯಾಟಿ ಹಾಪ್​ಕಿನ್ಸ್ ಆಸ್ಟ್ರೇಲಿಯಾದ ಸೆವೆನ್ ನೆಟ್​ವರ್ಕ್ ಲಿಮಿಟೆಡ್ ನಲ್ಲಿ ಪ್ರಸಾರವಾಗುವ ಬಿಗ್ ಬ್ರದರ್ ವಿಐಪಿ ಎಂಬ ಕಾರ್ಯಕ್ರಮಕ್ಕೆಂದು ಬಂದಿದ್ದರು.

ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್​ಕಿನ್ಸ್ ಆಸ್ಟ್ರೇಲಿಯಾದಿಂದ ಗಡಿಪಾರು
Katie Hopkins

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣ ಖ್ಯಾತ ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್​ಕಿನ್ಸ್ (Katie Hopkins) ಅವರನ್ನು ಆಸ್ಟ್ರೇಲಿಯಾದಿಂದ ಗಡಿಪಾರು ಮಾಡಲಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಕ್ಯಾಟಿ ಹಾಪ್​ಕಿನ್ಸ್ ಆಸ್ಟ್ರೇಲಿಯಾದ ಸೆವೆನ್ ನೆಟ್​ವರ್ಕ್ ಲಿಮಿಟೆಡ್ ನಲ್ಲಿ ಪ್ರಸಾರವಾಗುವ ಬಿಗ್ ಬ್ರದರ್ ವಿಐಪಿ ಎಂಬ ಕಾರ್ಯಕ್ರಮಕ್ಕೆಂದು ಬಂದಿದ್ದರು. ಆಸ್ಟ್ರೇಲಿಯಾದ ನಿಯಮದ ಪ್ರಕಾರ ಬೇರೆ ದೇಶದಿಂದ ಬಂದವರು ಎರಡು ವಾರಗಳ ಕ್ವಾರಂಟೈನ್ ನಿಯಮವನ್ನು ಪಾಲಿಸಬೇಕು.

ಆದರೆ, ಹಾಪ್​ಕಿನ್ಸ್ ಹೊಟೇಲ್​ನಲ್ಲಿ ಕ್ವಾರಂಟೈನ್​ನಲ್ಲಿ ಇರುವಾಗಲೇ ಊಟ ತಂದಿದ್ದ ಡೆಲಿವರಿ ಬಾಯ್ ಜೊತೆ ಬಾಗಿಲ ಬಳಿ ಮಾಸ್ಕ್ ಇಲ್ಲದೆ ಬೆತ್ತಲೆಯಾಗಿ ನಿಂತು ಮಾತನಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದೆ. ಬಳಿಕ ಡಿಲೀಟ್ ಮಾಡಿದ್ದಾರೆ.

ಈ ವಿಚಾರ ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ತಿಳಿದಿದ್ದು ಖಚಿತ ಮಾಹಿತಿ ಪಡೆದು ಹಾಪ್​ಕಿನ್ಸ್ ಅವರನ್ನು ಗಡಿಪಾರು ಮಾಡಿದೆ.

IND vs SL: ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಿಂದ ಇಬ್ಬರು ಪ್ಲೇಯರ್ಸ್ ಔಟ್: ಯಾರು ಗೊತ್ತಾ?

Prithvi Shaw: ಧವನ್ 86, ಕಿಶನ್ 59 ರನ್: ಆದ್ರೂ ಪಂದ್ಯಶ್ರೇಷ್ಠ 43 ರನ್ ಗಳಿಸಿದ ಪೃಥ್ವಿ ಶಾ: ಯಾಕೆ ಗೊತ್ತಾ?

(British Commentator Katie Hopkins To Be Deported From Australia Over Quarantine Breach)