IND vs SL: ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಿಂದ ಇಬ್ಬರು ಪ್ಲೇಯರ್ಸ್ ಔಟ್: ಯಾರು ಗೊತ್ತಾ?

ಭಾರತ ತಂಡ 2ನೇ ಏಕದಿನಕ್ಕೆ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲೂ ಭಾರತ ಒಂದು ಬದಲಾವಣೆ ಮಾಡಬಹುದು.

IND vs SL: ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಿಂದ ಇಬ್ಬರು ಪ್ಲೇಯರ್ಸ್ ಔಟ್: ಯಾರು ಗೊತ್ತಾ?
Team India
Follow us
TV9 Web
| Updated By: Vinay Bhat

Updated on: Jul 19, 2021 | 10:20 AM

ಭಾನುವಾರ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿರುವ ಶಿಖರ್ ಧವನ್ (Shikhar Dhawan) ನೇತೃತ್ವದ ಟೀಮ್ ಇಂಡಿಯಾ (Indian Cricket Team) ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೆ ಸದ್ಯ ಎರಡನೇ ಏಕದಿನಕ್ಕೆ ಭಾರತ ಸಜ್ಜಾಗುತ್ತಿದೆ. ಸರಣಿ ವಶಪಡಿಸಕೊಳ್ಳಲು ತಯಾರಾಗಿರುವ ಟೀಮ್ ಇಂಡಿಯಾಕ್ಕೆ ಇದು ಪ್ರಮುಖ ಪಂದ್ಯವಾಗಿದೆ. ಇತ್ತ ಸರಣಿಯನ್ನು ಜೀವಂತವಾಗಿರಿಸಲು ಶ್ರೀಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಭಾರತ ತಂಡ 2ನೇ ಏಕದಿನಕ್ಕೆ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಮೊದಲ ಪಂದ್ಯದಲ್ಲಿ ಮನೀಶ್ ಪಾಂಡೆ ಅಷ್ಟೊಂದು ಪರಿಣಮಕಾರಿಯಾಗಿ ಗೋಚರಿಸಲಿಲ್ಲ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡೆ 40 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಹಿತಿ 26 ರನ್ ಗಳಿಸಿದರಷ್ಟೆ. ಹೀಗಾಗಿ ಇವರನ್ನು ಆಡುವ ಬಳಗದಿಂದ ಕೈಬಿಟ್ಟು, ಇಂಜುರಿಯಿಂದಾಗಿ ಮೊದಲ ಪಂದ್ಯವನ್ನು ಮಿಸ್ ಮಾಡಿದ್ದ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಇನ್ನೂ ಬೌಲಿಂಗ್ ವಿಭಾಗದಲ್ಲೂ ಭಾರತ ಒಂದು ಬದಲಾವಣೆ ಮಾಡಬಹುದು. ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್​ಗಳು, ಇಬ್ಬರು ವೇಗಿಗಳು, ಓರ್ವ ಆಲ್ರೌಂಡರ್ (ವೇಗಿ) ಕಣಕ್ಕಿಳಿದಿದ್ದರು. ಹೀಗಾಗಿ ಓರ್ವ ಸ್ಪಿನ್ನರ್ ಅನ್ನು ಕೈಬಿಟ್ಟು ನವ್​ದೀಪ್ ಸೈನಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಇತ್ತ ಶ್ರೀಲಂಕಾ ತಂಡದಲ್ಲೂ ದೊಡ್ಡ ಬದಲಾವಣೆ ಆಗುವ ನಿರೀಕ್ಷೆಯಿದೆ. ಒಟ್ಟಾರೆ ಎರಡನೇ ಏಕದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದ್ದು, ಗೆಲುವು ಯಾರಿಗೆಂದು ನೋಡಬೇಕಿದೆ.

ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿತು. ಆವಿಶ್ಕಾ ಫೆರ್ನಾಂಡೊ 33 ರನ್ ಗಳಿಸಿದರೆ, ಭನುಕಾ 27 ರಬ್​ಗ ಔಟ್ ಆದರು. ರಾಜಪಕ್ಷ 24, ಧನಂಜಯ ಡಿ ಸಿಲ್ವಾ 14, ಅಸಲಂಕಾ 38 ಮತ್ತು ನಾಯಕ ದಸನ್ ಶನಕ 39 ರನ್ ಬಾರಿಸಿ ದೊಡ್ಡ ಮೊತ್ತ ಕಲೆಹಾಕದೆ ನಿರ್ಗಮಿಸಿದರು. ಕೊನೆಯಲ್ಲಿ ಕರುಣರತ್ನೆ 35 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದ ಪರಿಣಾಮ ತಂಡದ ಮೊತ್ತ 250ರ ಗಡಿ ದಾಟಿತು.

263 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದರು. ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 43 ರನ್ ಚಚ್ಚಿದರು. ನಂತರ ಇಶಾನ್ ಕಿಶನ್ ಹಾಗೂ ನಾಯಕ ಧವನ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವನ್ನು ಹತ್ತಿರ ಮಾಡಿತು.

ಕಿಶನ್ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ 59 ರನ್ ಸಿಡಿಸಿದರೆ, ಧವನ್ 95 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು. ಮನೀಶ್ ಪಾಂಡೆ 26 ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 31 ರನ್ ಬಾರಿಸಿದರು. ಭಾರತ 36.4 ಓವರ್​​ನಲ್ಲೇ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ 7 ವಿಕೆಟ್​ಗಳ ಜಯ ಸಾಧಿಸಿತು.

Prithvi Shaw: ಧವನ್ 86, ಕಿಶನ್ 59 ರನ್: ಆದ್ರೂ ಪಂದ್ಯಶ್ರೇಷ್ಠ 43 ರನ್ ಗಳಿಸಿದ ಪೃಥ್ವಿ ಶಾ: ಯಾಕೆ ಗೊತ್ತಾ?

IND vs SL: ಇವರಿಬ್ಬರು ಕ್ರೀಸ್​ನಲ್ಲಿ ಇದ್ದಿದ್ದರೆ ಈ ಪಂದ್ಯ 15 ಓವರ್​ನಲ್ಲೇ ಮುಗಿಯುತ್ತಿತ್ತು ಎಂದು ಧವನ್

(India vs Sri lanka 2nd ODI playing 11 maybe Manish Pandey out Sanju samson in Team India playing 11)