ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸ್: ಲಿವಿಂಗ್ಸ್ಟನ್ ಚೆಂಡನ್ನ ಸಿಕ್ಸ್ಗೆ ಅಟ್ಟಿದ ವಿಡಿಯೋ ಇಲ್ಲಿದೆ ನೋಡಿ
16ನೇ ಓವರ್ ಹ್ಯಾರಿಸ್ ರೌಫ್ ಬೌಲಿಂಗ್ನ ಮೊದಲ ಎಸೆತದಲ್ಲೇ ಲಿವಿಂಗ್ಸ್ಟನ್ ಲಾಂಗ್ಆನ್ನಲ್ಲಿ ಚೆಂಡನ್ನು ಜೋರಾಗಿ ಹೊಡೆದರು. ಸಿಕ್ಸ್ ಹೋಗಿದೆ ಎಂಬುದು ಖಚಿತವಾಯಿತು. ಆದರೆ,
ಲೀಡ್ಸ್ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ (England vs Pakistan) ತಂಡಗಳ ನಡುವಣ ಎರಡನೇ ಟಿ-20 ಪಂದ್ಯ (T20I Cricket) ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಮೊದಲ ಪಂದ್ಯದಲ್ಲಿ ಪಾಕ್ ಭರ್ಜರಿ ಜಯ ಸಾಧಿಸಿದ್ದರೆ, ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಟ್ರ್ಯಾಕ್ಗೆ ಮರಳಿತು. 201 ರನ್ಗಳ ಕಠಿಣ ಸವಾಲು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ ತಂಡ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸುವಂತಾಗಿದೆ.
ಈ ಪಂದ್ಯದಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಲ್ಯಾಮ್ ಲಿವಿಂಗ್ಸ್ಟನ್ ಅವರ ಆ ಒಂದು ಸಿಕ್ಸ್. ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಲಿವಿಂಗ್ಸ್ಟನ್ ನಿನ್ನೆಯ ಪಂದ್ಯದಲ್ಲೂ 23 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಿಡಿಸಿ 38 ರನ್ ಚಚ್ಚಿದರು. ಈ 3 ಸಿಕ್ಸ್ಗಳ ಪೈಕಿ ಇಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು.
16ನೇ ಓವರ್ ಹ್ಯಾರಿಸ್ ರೌಫ್ ಬೌಲಿಂಗ್ನ ಮೊದಲ ಎಸೆತದಲ್ಲೇ ಲಿವಿಂಗ್ಸ್ಟನ್ ಲಾಂಗ್ಆನ್ನಲ್ಲಿ ಚೆಂಡನ್ನು ಜೋರಾಗಿ ಹೊಡೆದರು. ಸಿಕ್ಸ್ ಹೋಗಿದೆ ಎಂಬುದು ಖಚಿತವಾಯಿತು. ಆದರೆ, ಎಷ್ಟು ಎತ್ತರಕ್ಕೆ ಬಾಲ್ ಹೋಯಿತು, ಎಲ್ಲಿ ಹೋಯಿತು ಎಂಬುದು ಗೋಚರಿಸಲೇ ಇಲ್ಲ. ಇದು ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಸಿಕ್ಸ್ ಎಂದು ಹೇಳಲಾಗುತ್ತಿದೆ.
ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 19.5 ಓವರ್ನಲ್ಲಿ 200 ರನ್ಗೆ ಆಲೌಟ್ ಆಯಿತು. ಜಾಸ್ ಬಟ್ಲರ್ 39 ಎಸೆತಗಳಲ್ಲಿ 59 ರನ್ ಬಾರಿಸಿದರೆ, ಮೊಯೀನ್ ಅಲಿ ಕೇವಲ 16 ಎಸೆತಗಳಲ್ಲಿ 36 ರನ್ ಚಚ್ಚಿದರು. ಪಾಕ್ ಪರ ಮೊಯಿನುದ್ದೀನ್ ಹಸ್ನೈನ್ 3 ವಿಕೆಟ್ ಕಿತ್ತರು.
201 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕ್ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಮೊಹಮ್ಮದ್ ರಿಜ್ವಾನ್ 37, ಬಾಬರ್ ಅಜಂ 22 ಹಾಗೂ ಶಹ್ಬಾಜ್ ಖಾನ್ ಅಜೇಯ 36 ರನ್ ಬಾರಿಸಿದರು. ಪಾಕ್ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತಷ್ಟೆ.
ಇಂಗ್ಲೆಂಡ್ 45 ರನ್ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಅಂತಿಮ ನಿರ್ಣಾಯಕ ಪಂದ್ಯ ಜುಲೈ 20 ರಂದು ನಡೆಯಲಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್ಕಿನ್ಸ್ ಆಸ್ಟ್ರೇಲಿಯಾದಿಂದ ಗಡಿಪಾರು
ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಿಂದ ಇಬ್ಬರು ಪ್ಲೇಯರ್ಸ್ ಔಟ್: ಯಾರು ಗೊತ್ತಾ?
(England vs Pakistan Liam Livingstone hits a huge maximum in 2nd T20I vs Pakistan its Biggest six ever)