AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roger Binny Birthday: ಕ್ರಿಕೆಟ್​ ಲೋಕದಲ್ಲಿ ಹೊಸತನವನ್ನು ಸೃಷ್ಟಿಸಿದ ಆಲ್ ​ರೌಂಡರ್ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿಗೆ ಹುಟ್ಟುಹಬ್ಬದ ಸಂಭ್ರಮ

Roger Binny Birthday: 1983 ರಲ್ಲಿ ಪಾಕಿಸ್ತಾನ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ ಅಜೇಯ 83 ರನ್ ಗಳಿಸಿದರು ಮತ್ತು ಮದನ್ ಲಾಲ್ ಅವರೊಂದಿಗೆ 155 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದರು. ಆ ಮೂಲಕ ಮೂರು ವರ್ಷಗಳ ನಂತರ, ರೋಜರ್ ಬಿನ್ನಿ ಇಂಗ್ಲೆಂಡ್‌ನಲ್ಲಿ ಭಾರತದ ಟೆಸ್ಟ್ ಗೆಲುವಿನ ಮೇಲುಗೈ ಸಾಧಿಸಿದರು.

Roger Binny Birthday: ಕ್ರಿಕೆಟ್​ ಲೋಕದಲ್ಲಿ ಹೊಸತನವನ್ನು ಸೃಷ್ಟಿಸಿದ ಆಲ್ ​ರೌಂಡರ್ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿಗೆ ಹುಟ್ಟುಹಬ್ಬದ ಸಂಭ್ರಮ
TV9 Web
| Edited By: |

Updated on:Jul 19, 2021 | 10:49 AM

Share

ಭಾರತದ 1983 ರ ವಿಶ್ವಕಪ್ ಗೆಲುವಿನಲ್ಲಿ ಇಡೀ ತಂಡದ ಪಾತ್ರ ಮಹತ್ವದಾಗಿತ್ತು. ರೋಜರ್ ಬಿನ್ನಿ ಕೂಡ ಈ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತದ ಪರ ಆಡಿದ ಮೊದಲ ಆಂಗ್ಲೊ-ಇಂಡಿಯನ್​ ಎಂಬ ಹೆಗ್ಗಳಿಕೆಯನ್ನು ರೋಜರ್​ ಬಿನ್ನಿ ( Roger Binny Birthday) ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು 18 ವಿಕೆಟ್​ ಪಡೆದಿದ್ದ, ರೋಜರ್​ ಬಿನ್ನಿ ಅತ್ಯುತ್ತಮ ಬೌಲರ್​ ಎನಿಸಿಕೊಂಡರು ಮತ್ತು ಭಾರತದ ತಂಡವನ್ನು ಮೊದಲ ಬಾರಿಗೆ ವಿಶ್ವ ಚಾಂಪಿಯನ್ (World Cup) ಮಾಡುವಲ್ಲಿ ಬಲವಾದ ಪಾತ್ರ ವಹಿಸಿದರು. ಇಂದು ಅದೇ ರೋಜರ್ ಬಿನ್ನಿಯವರ ಜನ್ಮದಿನ.

ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಬ್ರಿಟನ್‌ಗೆ ಸೇರಿದವರಾಗಿದ್ದರೂ, ಭಾರತದಲ್ಲಿ ಜುಲೈ 19, 1955ರಲ್ಲಿ ಜನಿಸಿದರು. ಇಲ್ಲಿಯೇ ಬಾಲ್ಯವನ್ನು ಕಳೆದಿದ್ದ ಇವರು, ಕೊನೆಗೊಂದು ದಿನ ಭಾರತೀಯ ಕ್ರಿಕೆಟ್​ ತಂಡದ ಸದಸ್ಯರಾಗಿ ಆಯ್ಕೆಯಾದರು. ಮಧ್ಯಮ ವೇಗದ ಮತ್ತು ಲೋವರ್ ಆರ್ಡರ್ ಬೌಲರ್ ಆಗಿದ್ದ ರೋಜರ್ ಬಿನ್ನಿ, 1979 ರಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಅವರ ಆಟದ ಮೇಲೆ ಅವರಿಗೆ ಹಿಡಿತ ಸಾಧಿಸಲು ನಾಲ್ಕು ವರ್ಷಗಳು ಬೇಕಾಯಿತು. ಈ ಬದಲಾವಣೆ ಬಂದಿದ್ದು, 1983 ರ ವಿಶ್ವಕಪ್‌ನಿಂದ ಮಾತ್ರ. ಈ ಸಮಯದಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ಅವರು 8 ಓವರ್‌ಗಳಲ್ಲಿ ಕೇವಲ 29 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ತೆಗೆದುಕೊಂಡು ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್​ ಪಂದ್ಯದಲ್ಲಿ, ಬಿನ್ನಿ 10 ಓವರ್​ಗ​ಳಲ್ಲಿ ಕೇವಲ 23 ರನ್​ಗಳನ್ನು ನೀಡಿದರು. ಈ ರೀತಿಯಾಗಿ, ಅವರು ಭಾರತದ ಗೆಲುವಿನಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಇಂಗ್ಲೆಂಡ್‌ನಲ್ಲಿ ನಡೆದ  ಟೆಸ್ಟ್ ಮ್ಯಾಚ್​ನ​ ಗೆಲುವಿನ ನಾಯಕ ಬಿನ್ನಿ 1983 ರಲ್ಲಿ ಪಾಕಿಸ್ತಾನ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ  83 ರನ್ ಗಳಿಸಿದರು ಮತ್ತು ಮದನ್ ಲಾಲ್ ಅವರೊಂದಿಗೆ 155 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದರು. ಆ ಮೂಲಕ ಮೂರು ವರ್ಷಗಳ ನಂತರ, ರೋಜರ್ ಬಿನ್ನಿ ಇಂಗ್ಲೆಂಡ್‌ನಲ್ಲಿ ಭಾರತದ ಟೆಸ್ಟ್ ಗೆಲುವಿನ ಮೇಲುಗೈ ಸಾಧಿಸಿದರು. ಈ ಪಂದ್ಯದಲ್ಲಿ ಅವರು 40 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಅದೇ ರೀತಿ, 1987 ರಲ್ಲಿ, ಕಲ್ಕತ್ತಾ ಟೆಸ್ಟ್​ನಲ್ಲಿ, 56 ರನ್​ಗಳನ್ನು ನೀಡುವ ಮೂಲಕ, ಪಾಕಿಸ್ತಾನವನ್ನು ಸೋಲಿಸಿದರು. ಈ ಸಮಯದಲ್ಲಿ ರೋಜರ್ ಬಿನ್ನಿ 30 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ನಾಲ್ಕು ವಿಕೆಟ್ ಪಡೆದರು. ಬಿನ್ನಿ 27 ಟೆಸ್ಟ್ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದು, 23.05 ಸರಾಸರಿಯಲ್ಲಿ 830 ರನ್ ಗಳಿಸಿದರು. ಆ ಮೂಲಕ 72 ಏಕದಿನ ಪಂದ್ಯಗಳಲ್ಲಿ 629 ರನ್ ಗಳಿಸುವುದರ ಜತೆಗೆ 77 ವಿಕೆಟ್ ಪಡೆದರು.

ರೋಜರ್ ಬಿನ್ನಿ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ಆಡುತ್ತಿದ್ದರು. 1977-78 ರಂಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ 211 ರನ್ ಗಳಿಸಿದ ಮತ್ತು ಮೊದಲ ವಿಕೆಟ್‌ಗೆ 451 ರನ್ ಹಂಚಿಕೊಂಡಿದ ಹೆಗ್ಗಳಿಕೆಗೆ ಇವರು ಪಾತ್ರರಾದರು. ಕ್ರಿಕೆಟ್ ತೊರೆದ ನಂತರ ರೋಜರ್ ಬಿನ್ನಿ ತರಬೇತುದಾರರಾದರು. 2000 ರಲ್ಲಿ ಅಂಡರ್ -19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ನಂತರ 2012 ರ ಸೆಪ್ಟೆಂಬರ್‌ನಲ್ಲಿ ಅವರು ಭಾರತೀಯ ತಂಡದ ಸೆಲೆಕ್ಟರ್ ಆದರು.

ಇದನ್ನೂ ಓದಿ: IND vs SL: ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಇಶಾನ್ ಕಿಶನ್; ಜನ್ಮದಿನದಂದು ಈ ಅವಕಾಶ ಪಡೆದ 2ನೇ ಭಾರತೀಯ

IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

Published On - 10:37 am, Mon, 19 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ