ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸ್: ಲಿವಿಂಗ್​ಸ್ಟನ್ ಚೆಂಡನ್ನ ಸಿಕ್ಸ್​ಗೆ ಅಟ್ಟಿದ ವಿಡಿಯೋ ಇಲ್ಲಿದೆ ನೋಡಿ

16ನೇ ಓವರ್​ ಹ್ಯಾರಿಸ್ ರೌಫ್ ಬೌಲಿಂಗ್​ನ ಮೊದಲ ಎಸೆತದಲ್ಲೇ ಲಿವಿಂಗ್​ಸ್ಟನ್ ಲಾಂಗ್​ಆನ್​ನಲ್ಲಿ ಚೆಂಡನ್ನು ಜೋರಾಗಿ ಹೊಡೆದರು. ಸಿಕ್ಸ್ ಹೋಗಿದೆ ಎಂಬುದು ಖಚಿತವಾಯಿತು. ಆದರೆ,

ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸ್: ಲಿವಿಂಗ್​ಸ್ಟನ್ ಚೆಂಡನ್ನ ಸಿಕ್ಸ್​ಗೆ ಅಟ್ಟಿದ ವಿಡಿಯೋ ಇಲ್ಲಿದೆ ನೋಡಿ
Liam Livingstone
TV9kannada Web Team

| Edited By: Vinay Bhat

Jul 19, 2021 | 11:51 AM


ಲೀಡ್ಸ್​ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ (England vs Pakistan) ತಂಡಗಳ ನಡುವಣ ಎರಡನೇ ಟಿ-20 ಪಂದ್ಯ (T20I Cricket) ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಮೊದಲ ಪಂದ್ಯದಲ್ಲಿ ಪಾಕ್ ಭರ್ಜರಿ ಜಯ ಸಾಧಿಸಿದ್ದರೆ, ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಟ್ರ್ಯಾಕ್​ಗೆ ಮರಳಿತು. 201 ರನ್​ಗಳ ಕಠಿಣ ಸವಾಲು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ ತಂಡ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸುವಂತಾಗಿದೆ.

ಈ ಪಂದ್ಯದಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಲ್ಯಾಮ್ ಲಿವಿಂಗ್​ಸ್ಟನ್ ಅವರ ಆ ಒಂದು ಸಿಕ್ಸ್. ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಲಿವಿಂಗ್​ಸ್ಟನ್ ನಿನ್ನೆಯ ಪಂದ್ಯದಲ್ಲೂ 23 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಿಡಿಸಿ 38 ರನ್ ಚಚ್ಚಿದರು. ಈ 3 ಸಿಕ್ಸ್​ಗಳ ಪೈಕಿ ಇಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು.

16ನೇ ಓವರ್​ ಹ್ಯಾರಿಸ್ ರೌಫ್ ಬೌಲಿಂಗ್​ನ ಮೊದಲ ಎಸೆತದಲ್ಲೇ ಲಿವಿಂಗ್​ಸ್ಟನ್ ಲಾಂಗ್​ಆನ್​ನಲ್ಲಿ ಚೆಂಡನ್ನು ಜೋರಾಗಿ ಹೊಡೆದರು. ಸಿಕ್ಸ್ ಹೋಗಿದೆ ಎಂಬುದು ಖಚಿತವಾಯಿತು. ಆದರೆ, ಎಷ್ಟು ಎತ್ತರಕ್ಕೆ ಬಾಲ್ ಹೋಯಿತು, ಎಲ್ಲಿ ಹೋಯಿತು ಎಂಬುದು ಗೋಚರಿಸಲೇ ಇಲ್ಲ. ಇದು ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಸಿಕ್ಸ್ ಎಂದು ಹೇಳಲಾಗುತ್ತಿದೆ.

ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 19.5 ಓವರ್​ನಲ್ಲಿ 200 ರನ್​ಗೆ ಆಲೌಟ್ ಆಯಿತು. ಜಾಸ್ ಬಟ್ಲರ್ 39 ಎಸೆತಗಳಲ್ಲಿ 59 ರನ್ ಬಾರಿಸಿದರೆ, ಮೊಯೀನ್ ಅಲಿ ಕೇವಲ 16 ಎಸೆತಗಳಲ್ಲಿ 36 ರನ್ ಚಚ್ಚಿದರು. ಪಾಕ್ ಪರ ಮೊಯಿನುದ್ದೀನ್ ಹಸ್ನೈನ್ 3 ವಿಕೆಟ್ ಕಿತ್ತರು.

201 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕ್ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಮೊಹಮ್ಮದ್ ರಿಜ್ವಾನ್ 37, ಬಾಬರ್ ಅಜಂ 22 ಹಾಗೂ ಶಹ್ಬಾಜ್ ಖಾನ್ ಅಜೇಯ 36 ರನ್ ಬಾರಿಸಿದರು. ಪಾಕ್ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತಷ್ಟೆ.

ಇಂಗ್ಲೆಂಡ್ 45 ರನ್​ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಅಂತಿಮ ನಿರ್ಣಾಯಕ ಪಂದ್ಯ ಜುಲೈ 20 ರಂದು ನಡೆಯಲಿದೆ.

ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರಿಟಿಷ್ ವೀಕ್ಷಕ ವಿವರಣೆಗಾರ್ತಿ ಕ್ಯಾಟಿ ಹಾಪ್​ಕಿನ್ಸ್ ಆಸ್ಟ್ರೇಲಿಯಾದಿಂದ ಗಡಿಪಾರು

ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಿಂದ ಇಬ್ಬರು ಪ್ಲೇಯರ್ಸ್ ಔಟ್: ಯಾರು ಗೊತ್ತಾ?

(England vs Pakistan Liam Livingstone hits a huge maximum in 2nd T20I vs Pakistan its Biggest six ever)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada