Tokyo Olympics: ಇಂದು ಟೋಕಿಯೊಗೆ ಹಾರಲಿದೆ ಭಾರತದ ಮೊದಲ ಬ್ಯಾಚ್​; ಬೀಳ್ಕೊಡಲಿದ್ದಾರೆ ಕ್ರೀಡಾ ಸಚಿವ ಅನುರಾಗ್ ಠಾಕೂರ್

| Updated By: ಪೃಥ್ವಿಶಂಕರ

Updated on: Jul 17, 2021 | 2:55 PM

Tokyo Olympics: ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಪ್ರತಿನಿಧಿಗಳನ್ನು ಒಳಗೊಂಡ 88 ರ ತಂಡಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ರಾಜ್ಯ ಸಚಿವ ನಿಸಿತ್ ಪ್ರಮಣಿಕ್ ಅವರು ಔಪಚಾರಿಕವಾಗಿ ಬೀಳ್ಕೊಡುಗೆ ನೀಡಲಿದ್ದಾರೆ.

Tokyo Olympics: ಇಂದು ಟೋಕಿಯೊಗೆ ಹಾರಲಿದೆ ಭಾರತದ ಮೊದಲ ಬ್ಯಾಚ್​; ಬೀಳ್ಕೊಡಲಿದ್ದಾರೆ ಕ್ರೀಡಾ ಸಚಿವ ಅನುರಾಗ್ ಠಾಕೂರ್
ಕ್ರೀಡಾ ಸಚಿವ ಅನುರಾಗ್ ಠಾಕೂರ್
Follow us on

ಟೋಕಿಯೊ ಒಲಿಂಪಿಕ್ಸ್ (Tokyo Olympics) ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದ್ದು, ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಔಪಚಾರಿಕವಾಗಿ ಒಲಂಪಿಕ್ಸ್ ಸ್ಪರ್ಧಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಮೊದಲ ಬ್ಯಾಚ್ ಕ್ರೀಡಾಪಟುಗಳು ಭಾರತದಿಂದ ಟೋಕಿಯೊಗೆ ತೆರಳಲಿದ್ದಾರೆ. 54 ಕ್ರೀಡಾಪಟುಗಳು, ಸಹಾಯಕ ಸಿಬ್ಬಂದಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಪ್ರತಿನಿಧಿಗಳನ್ನು ಒಳಗೊಂಡ 88 ರ ತಂಡಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ (Sports Minister Anurag Thakur) ಮತ್ತು ರಾಜ್ಯ ಸಚಿವ ನಿಸಿತ್ ಪ್ರಮಣಿಕ್ ಅವರು ಔಪಚಾರಿಕವಾಗಿ ಬೀಳ್ಕೊಡುಗೆ ನೀಡಲಿದ್ದಾರೆ.

ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ
ಬಿಲ್ಲುಗಾರಿಕೆ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಿಲ್ಲುಗಾರಿಕೆ, ಜೂಡೋ, ಜಿಮ್ನಾಸ್ಟಿಕ್ಸ್, ಮತ್ತು ವೇಟ್‌ಲಿಫ್ಟಿಂಗ್ ಎಂಬ ಎಂಟು ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿ ನವದೆಹಲಿಯಿಂದ ನಿರ್ಗಮಿಸಲಿದ್ದು, ಇದರಲ್ಲಿ ಹಾಕಿ ಅತಿದೊಡ್ಡ ತಂಡವಾಗಿದೆ. ಕ್ರೀಡಾಪಟುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಈವೆಂಟ್‌ಗೆ ಹಾಜರಾಗುವ ಎಲ್ಲಾ ಗಣ್ಯರು ತಮ್ಮ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ. ನೆಗೆಟಿವ್ ವರದಿಗಳನ್ನು ಹೊಂದಿರುವವರು ಮಾತ್ರ ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಸಾಮಾಜಿಕ ಅಂತರವನ್ನು ಸಹ ಜಾರಿಗೆ ತರಲಾಗಿದೆ .

127 ಭಾರತೀಯ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇದು ದಾಖಲೆಯಾಗಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 117 ಆಟಗಾರರನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಏತನ್ಮಧ್ಯೆ, ಜುಲೈ 23 ರಿಂದ ನಡೆಯಲಿರುವ ಮುಂಬರುವ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತೀಯ ಶೂಟಿಂಗ್ ತಂಡ ಶನಿವಾರ ಟೋಕಿಯೊಗೆ ತೆರಳಿದೆ. ಶೂಟಿಂಗ್ ತಂಡದ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಅವರೆಲ್ಲರೂ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಏಸ್ ಇಂಡಿಯನ್ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಕೂಡ ಶುಕ್ರವಾರ ಒಲಿಂಪಿಕ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಟೋಕಿಯೊಗೆ ಆಗಮಿಸಿದರು.

Published On - 2:54 pm, Sat, 17 July 21