KL Rahul: ಅಥಿಯಾ ನನ್ನ ಜೊತೆಗಾತಿ! ಪ್ರೇಯಸಿಯ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಕೆ. ಎಲ್. ರಾಹುಲ್

KL Rahul: ರಾಹುಲ್ ಇಂಗ್ಲೆಂಡ್​ಗೆ ತಮ್ಮ ಪಾರ್ಟನರ್ ಜೊತೆಗೆ ಹೋಗುತ್ತಿರೋದಾಗಿ, ಲಾಜೆಸ್ಟಿಕ್ ವಿಭಾಗಕ್ಕೆ ಹೆಸರು ನೀಡಿದ್ದಾರೆ. ರಾಹುಲ್, ಆಥಿಯಾಳನ್ನ ತಮ್ಮ ಪಾರ್ಟನರ್ ಎಂದು ಲಾಜೆಸ್ಟಿಕ್ ವಿಭಾಗಕ್ಕೆ ಹೆಸರು ನೀಡಿದ್ದಾರೆ.

KL Rahul: ಅಥಿಯಾ ನನ್ನ ಜೊತೆಗಾತಿ! ಪ್ರೇಯಸಿಯ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಕೆ. ಎಲ್. ರಾಹುಲ್
ಕೆ ಎಲ್ ರಾಹುಲ್ ಜೊತೆ ಅಥಿಯಾ ಶೆಟ್ಟಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 17, 2021 | 4:44 PM

ಟೀಮ್ ಇಂಡಿಯಾ ಕ್ರಿಕೆಟಿಗ ಕನ್ನಡಿಗ ಕೆ.ಎಲ್. ರಾಹುಲ್, ಪ್ರೀತಿಯಲ್ಲಿ ಬಿದ್ದಿರೋದು ನಿಮಗೆ ಗೊತ್ತೇ ಇದೆ. ಆದ್ರೀಗ ನಾಲ್ಕೈದು ವರ್ಷಗಳಿಂದ ಗಪ್​ಚುಪ್ ಆಗಿಟ್ಟಿದ್ದ ರಾಹುಲ್ ಪ್ರೀತಿ, ಬಹಿರಂಗವಾಗಿದೆ. ಇಂಗ್ಲೆಂಡ್​ಗೆ ತೆರಳುವಾಗ ರಾಹುಲ್ ತಮ್ಮ ಪಾರ್ಟನರ್ ಯಾರೇಂದು ಹೇಳಿದ ವಿಚಾರ ಈಗ ರಿವೀಲ್ ಆಗಿದೆ. ಟೀಮ್ ಇಂಡಿಯಾದ ಸ್ಟೈಲಿಷ್ ಆಟಗಾರ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ನಡುವಿನ ಲವ್ವಿ-ಡವ್ವಿ ಗಪ್ ಚುಪ್ ಆಗೇನು ಉಳಿದಿಲ್ಲ. ಸದ್ಯ ಇಂಗ್ಲೆಂಡ್​ನಲ್ಲಿರುವ ರಾಹುಲ್ ಜೊತೆಗೆ, ಆಥಿಯಾ ಕೂಡ ಇಂಗ್ಲೆಂಡ್​ನಲ್ಲೇ ಇದ್ದಾಳೆ.

ರಾಹುಲ್ ಮತ್ತು ಆಥಿಯಾ ಇಂಗ್ಲೆಂಡ್​ನಲ್ಲಿದ್ದಾರೆ ಅನ್ನೋದು, ಇನ್​ಸ್ಟ್ರಾಗ್ರಾಮ್​ನಲ್ಲಿ ಹಾಕಿದ ಒಂದೇ ಬ್ಯಾಗ್ರೌಂಡ್ ಫೋಟೋದಿಂದ ಪ್ರೂವ್ ಆಗಿತ್ತು. ಇದಕ್ಕೆಲ್ಲ ಪುಷ್ಟಿ ನೀಡುವಂತೆ ರಾಹುಲ್, ಅಥಿಯಾ ಸಹೋದರ ಅಹಾನ್ ಶೆಟ್ಟಿ ಜೊತೆಗಿರುವ ಫೋಟೋವನ್ನ ಇನ್​ಸ್ಟಾಗ್ರಾಮ್​ನಲ್ಲಿ ಫೋಸ್ಟ್ ಮಾಡಿದ್ರು.. ಆದ್ರೀಗ ರಾಹುಲ್ ಅಥಿಯಾ ಶೆಟ್ಟಿ ಜೊತೆಗಿರುವ ತಮ್ಮ ಪ್ರೀತಿಯನ್ನ ಅದಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಪಾರ್ಟನರ್ ಕರೆದುಕೊಂಡು ಹೋಗಲು ಬಿಸಿಸಿಐ ಅನುಮತಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಇಂಗ್ಲೆಂಡ್​ಗೆ ಪ್ರಯಾಣಿಸುವ ಟೀಂ ಇಂಡಿಯಾ ಆಟಗಾರರಿಗೆ ತಮ್ಮ ಪತ್ನಿಯರು ಮತ್ತು ಪಾರ್ಟನರ್ ಕರೆದುಕೊಂಡು ಹೋಗಲು ಬಿಸಿಸಿಐ ಅನುಮತಿ ನೀಡಿತ್ತು. ಹೊರಡುವಾಗ ತಮ್ಮ ಪತ್ನಿ ಮತ್ತು ಪಾರ್ಟನರ್ ಹೆಸರು ಸೂಚಿಸುವಂತೆ ಲಾಜೆಸ್ಟಿಕ್ ವಿಭಾಗ ಆಟಗಾರರಿಗೆ ಸೂಚಿಸಿತ್ತು. ಇಲ್ಲೇ ರಾಹುಲ್ ಅಥಿಯಾ ನಡುವಿನ ಪ್ರೇಮ ವಿಚಾರ ಬಹಿರಂಗವಾಗಿದ್ದು.

ಆಥಿಯಾ ನನ್ನ ಪಾರ್ಟನರ್ ರಾಹುಲ್ ಇಂಗ್ಲೆಂಡ್​ಗೆ ತಮ್ಮ ಪಾರ್ಟನರ್ ಜೊತೆಗೆ ಹೋಗುತ್ತಿರೋದಾಗಿ, ಲಾಜೆಸ್ಟಿಕ್ ವಿಭಾಗಕ್ಕೆ ಹೆಸರು ನೀಡಿದ್ದಾರೆ. ಇಂಟ್ರಸ್ಟಿಂಗ್ ವಿಚಾರ ಏನು ಅಂದ್ರೆ, ರಾಹುಲ್, ಆಥಿಯಾಳನ್ನ ತಮ್ಮ ಪಾರ್ಟನರ್ ಎಂದು ಲಾಜೆಸ್ಟಿಕ್ ವಿಭಾಗಕ್ಕೆ ಹೆಸರು ನೀಡಿದ್ದಾರೆ. ಹೀಗಂತ ಹಿಂದುಸ್ತಾನ್ ಟೈಮ್ಸ್ ಬಿಸಿಸಿಐ ಮೂಲದಿಂದ ಪಡೆದಿರುವ ಮಾಹಿತಿಯನ್ನ ಆಧರಿಸಿ ವರದಿ ಮಾಡಿದೆ.

ಸದ್ಯ ರಾಹುಲ್ ಜೊತೆಗೆ ಆಥಿಯಾ ಸೌಂತಾಪ್ಟನ್​ನಲ್ಲಿ ತಂಗಿದ್ದಾರೆ ಎನ್ನಲಾಗ್ತಿದೆ. ಇಬ್ಬರು ಬಿಸಿಸಿಐನ ಬಯೊ ಬಬಲ್ ಸೆರಿದ್ದಾರೆ ಎನ್ನಲಾಗ್ತಿದೆ. ಇದರ ಜೊತೆಯಲ್ಲೇ ಇನ್​ಸ್ಟಾಗ್ರಾಮ್ ಫೊಟೋದ ಬ್ಯಾಗ್ರೌಂಡ್.. ಆಥಿಯಾ ಸಹೋದರ ಅಹಾನ್ ಜೊತೆಗಿನ ಫೋಟೋ.. ಇಬ್ಬರು ಲಂಡನ್​ನಲ್ಲಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಇದರ ನಡುವೆ ರಾಹುಲ್ ಪಾರ್ಟನರ್ ಆಗಿ ಆಥಿಯಾ ಹೆಸರನ್ನ ನೀಡಿರೋದು, ಇಬ್ಬರ ನಡುವಿನ ಪ್ರೇಮ್ ಕಹಾನಿ ಕಡೆಗೂ ಬಹಿರಂಗವಾಗಿದೆ.