ಧೋನಿಗಾಗಿ ದಾದಾ ಬೆನ್ನಿಂದೆ ಬಿದ್ದಿದ್ದೆ: ಗಂಗೂಲಿ ಮನವೊಲಿಸಲು 10 ದಿನಗಳು ಬೇಕಾಯ್ತು; ಕಿರಣ್ ಮೋರೆ
MS Dhoni: ಆಗಲೇ ದೀಪ್ದಾಸ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ರು. ಆದ್ರೆ ದಾದಾ 10 ದಿನಗಳನ್ನ ತಗೆದುಕೊಂಡ ಬಳಿಕ, ಆಯ್ಕೆ ಸಮಿತಿ ಜೊತೆ ಮಾತನಾಡಿ ಧೋನಿಗೆ ಅವಕಾಶ ನೀಡೋದಾಗಿ ಹೇಳಿದ್ರಂತೆ.
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ಗೆ ಸಿಕ್ಕ ಅಪರೂಪದ ಮಾಣಿಕ್ಯ. ಆದ್ರೆ ಈ ಮಾಣಿಕ್ಯ ವಿಶ್ವ ಕ್ರಿಕೆಟ್ನಲ್ಲಿ ಪ್ರಜ್ವಲಿಸೋಕೆ ಕಾರಣ, ಮಾಜಿ ಕ್ರಿಕೆಟಿಗ ಕಿರಣ್ ಮೋರೆ. ಇಡೀ ಕ್ರಿಕೆಟ್ ದುನಿಯಾದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದ್ರೂ, ಮಹೇಂದ್ರ ಸಿಂಗ್ ಧೋನಿಯಂತ ಚಾಣಾಕ್ಷ ವಿಕೆಟ್ ಕೀಪರ್ ಸಿಗೋದಿಲ್ಲ. ಹಾಗೇ ಮಹೇಂದ್ರನನ್ನ ಮತ್ತೊಬ್ಬ ವಿಕೆಟ್ ಕೀಪರ್ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ವಿಶ್ವ ಕ್ರಿಕೆಟ್ನಲ್ಲಿ MSD ತಮ್ಮ ಚಾಪನ್ನ ಒತ್ತಿದ್ದಾರೆ.
ಇಂತಹದ್ದೊಂದು ಸಾಧನೆ ಮಾಡಿರುವ ಧೋನಿಗೆ, ಟೀಮ್ ಇಂಡಿಯಾಕ್ಕೆ ಹಾದಿಯನ್ನ ಸುಗಮವಾಗುವಂತೆ ಮಾಡಿದ್ದು, ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ. ಟೀಮ್ ಇಂಡಿಯಾದಲ್ಲಿ ಧೋನಿಗೆ ಅವಕಾಶ ಕೊಡಿಸಲು, ಕಿರಣ್ ಮೋರೆ ತಾವೆಷ್ಟು ಪರದಾಡಿದ್ದೇ ಅನ್ನೋ ಸಂಗತಿಯನ್ನ ಈಗ ಬಿಚ್ಟಿಟ್ಟಿದ್ದಾರೆ.
ಸಮಿತಿ ಜೊತೆ ಮಾತನಾಡಿ ಧೋನಿಗೆ ಅವಕಾಶ 2003-04ರ ದುಲೀಪ್ ಟ್ರೋಫಿ ಅದು. ಧೋನಿ ಉತ್ತರ ವಲಯದ ಪರ ವಿಕೆಟ್ ಕೀಪಿಂಗ್ ಮಾಡಲಿ ಅಂತ ಕಿರಣ್ ಮೋರೆ ಪ್ರಯತ್ನಿಸುತ್ತಿದ್ರು. ಆದ್ರೆ ಆಗಲೇ ದೀಪ್ದಾಸ್ ಗುಪ್ತಾ ತಂಡಕ್ಕೆ ಆಯ್ಕೆಯಾಗಿದ್ರು. ಹೀಗಾಗಿ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿಗೆ, ದೀಪ್ದಾಸ್ ಬದಲು ಧೋನಿಗೆ ಅವಕಾಶ ನೀಡುವಂತೆ ದುಂಬಾಲು ಬಿದ್ದಿದ್ರು. ಯಾಕಂದ್ರೆ ದೀಪ್ದಾಸ್ ಗುಪ್ತಾ ಕೂಡ ಕೊಲ್ಕತ್ತಾದವರೇ ಆಗಿದ್ರು. ಆಗಲೇ ದೀಪ್ದಾಸ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ರು. ಆದ್ರೆ ದಾದಾ 10 ದಿನಗಳನ್ನ ತಗೆದುಕೊಂಡ ಬಳಿಕ, ಆಯ್ಕೆ ಸಮಿತಿ ಜೊತೆ ಮಾತನಾಡಿ ಧೋನಿಗೆ ಅವಕಾಶ ನೀಡೋದಾಗಿ ಹೇಳಿದ್ರಂತೆ.
ಆವತ್ತು ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಧೋನಿ 21 ರನ್ ಗಳಿಸಿದ್ರೆ, ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 47 ಬಾಲ್ಗಳಲ್ಲಿ 60 ರನ್ಗಳಿಸಿದ್ರು. ಮೊದಲೇ ಧೋನಿ ಆಟಕ್ಕೆ ಮನಸೋತಿದ್ದ ಕಿರಣ್ ಮೋರೆಗೆ, ಈತ ಮುಂದೊಂದು ದಿನ ಸ್ಟಾರ್ ಆಟಗಾರನಾಗ್ತಾನೆ ಅನ್ನೋ ಭರವಸೆಯಿತ್ತು. ಇದೇ ಕಾರಣಕ್ಕೆ ಮೋರೆ, ಗಂಗೂಲಿ ಬಳಿ ಧೋನಿಗೆ ಅವಕಾಶ ನೀಡಲು ಪರದಾಡಿದ್ರು.
600 ರನ್ಗಳಿಸೋ ಮೂಲಕ ಧೋನಿ ದಾಖಲೆ ಬರೆದ್ರು ನಂತರ ಕೀನ್ಯಾದಲ್ಲಿ ನಡೆದ ಕೀನ್ಯಾ ಎ, ಪಾಕಿಸ್ತಾನ ಎ ಮತ್ತು ಭಾರತ ಎ ನಡುವಿನ ತ್ರಿಕೋನ ಸರಣಿಯಲ್ಲಿ ಧೋನಿ ಅದ್ಭುತ ಪ್ರದರ್ಶನ ನೀಡಿದ್ರು. 600 ರನ್ಗಳಿಸೋ ಮೂಲಕ ಧೋನಿ ದಾಖಲೆ ಬರೆದ್ರು. ಆ ಬಳಿಕ ಧೋನಿ 2004ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ರು. ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಧೋನಿ ಮತ್ತೆಂದೂ ಹಿಂತುರಿಗಿ ನೋಡೇ ಇಲ್ಲ. ನಿಜಕ್ಕೂ ಆವತ್ತು ಕಿರಣ್ ಮೋರೆ ಗಂಗೂಲಿ ಬೆನ್ನಿಂದೆ ಬೀಳದೇ ಇದ್ರೆ, ಭಾರತೀಯ ಕ್ರಿಕೆಟ್ಗೆ ಧೋನಿಯಂತ ಅಪರೂಪದ ಮಾಣಿಕ್ಯ ಸಿಗ್ತಾನೇ ಇರಲಿಲ್ಲ.
Published On - 3:02 pm, Thu, 3 June 21