ವಿಲಿಯಮ್ಸನ್ರನ್ನು 17 ನೇ ಬಾರಿ ಔಟ್ ಮಾಡಿದ ಆಂಡರ್ಸನ್, ಚೊಚ್ಚಲು ಪಂದ್ಯದಲ್ಲೇ ಕಾನ್ವೇ ಭರ್ಜರಿ ಶತಕ
ವಿಲಿಯಮ್ಸನ್ ಅವರ ವಿಕೆಟ್ ಪತನ ಪ್ರವಾಸಿ ತಂಡಕ್ಕೆ ಭಾರೀ ಆಘಾತ ನೀಡಿತು. ಅವರು ಕೇವಲ 13 ರನ್ ಗಳಿಸಿ ಪೆವಿಲಿಯನ್ಗೆ ವಾಪಸ್ಸಾದಾಗ ನ್ಯೂಜಿಲೆಂಡ್ ಸ್ಕೋರ್ 86/2 ಆಗಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ವಿಲಿಯಮ್ಸನ್ ಅವರು ಜಿಮ್ಮಿಗೆ 17ನೇ ಸಲ ಬಲಿಯಾಗಿದ್ದಾರೆ.
ಲಾರ್ಡ್ಸ್ (ಲಂಡನ್): ಇಂಗ್ಲೆಂಡಿನ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರು ಪ್ರಸಕ್ತ ಕ್ರಿಕೆಟ್ ಸೀಸನ್ ಅನ್ನು ಅಮೋಘವಾದ ರೀತಿಯಲ್ಲಿ ಶುರುಮಾಡಿದ್ದಾರೆ. ಬುಧವಾರದಂದು ನ್ಯೂಜಿಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಆರಂಭವಾದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನ ಅವರು ಪ್ರವಾಸಿ ಟೀಮಿನ ನಾಯಕ ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಕೇನ್ ವಿಲಿಯಮ್ಸನ್ ಅವರನ್ನು ಭೋಜನ ವಿರಾಮದ ನಂತರ ಕ್ಲೀನ್ ಬೋಲ್ಡ್ ಮಾಡಿ ತನಗೆ ವಯಸ್ಸಾಗಿದ್ದರೂ ಬೌಲಿಂಗ್ನಲ್ಲಿ ಮೊನಚು ಕಡಿಮೆಯಾಗಿಲ್ಲ ಎನ್ನುವುದನ್ನು ಸಾಬೀತು ಮಾಡಿದರು. ವಿಲಿಯಮ್ಸನ್ ಬೇಗ ಔಟಾದರೂ ಒತ್ತಡಕ್ಕೆ ಸಿಲುಕದ ಕಿವೀಸ್ ತಂಡದ ಆರಂಭ ಆಟಗಾರ ಡೆವೊನ್ ಕಾನ್ವೇ ತಮ್ಮ ಪಾದಾರ್ಪಣೆಯ ಪಂದ್ಯದಲ್ಲೇ ಬಾರಿಸಿದ ಅತ್ಯಾಕರ್ಷಕ ಅಜೇಯ ಶತಕದ ನೆರವಿನಿಂದ ದಿನದಾಟ ಕೊನಗೊಂಡಾಗ 3 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿತ್ತು. ಕಾನ್ವೇ 136 ರನ್ (240 ಎಸೆತ 16 ಬೌಂಡರಿ) ಗಳಿಸಿ ಆಡುತ್ತಿದ್ದರೆ ಮರಿಯದ ನಾಲ್ಕನೇ ವಿಕೆಟ್ಗೆ ಅವರೊಂದಿಗೆ 132 ರನ್ ಸೇರಿಸಿರುವ ಹೆನ್ರಿ ನಿಕಾಲ್ಸ್ 46 ರನ್ಗಳೊಂದಿಗೆ ಆಡುತ್ತಿದ್ದಾರೆ.
ವಿಲಿಯಮ್ಸನ್ ಅವರ ವಿಕೆಟ್ ಪತನ ಪ್ರವಾಸಿ ತಂಡಕ್ಕೆ ಭಾರೀ ಆಘಾತ ನೀಡಿತು. ಅವರು ಕೇವಲ 13 ರನ್ ಗಳಿಸಿ ಪೆವಿಲಿಯನ್ಗೆ ವಾಪಸ್ಸಾದಾಗ ನ್ಯೂಜಿಲೆಂಡ್ ಸ್ಕೋರ್ 86/2 ಆಗಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ವಿಲಿಯಮ್ಸನ್ ಅವರು ಜಿಮ್ಮಿಗೆ 17ನೇ ಸಲ ಬಲಿಯಾಗಿದ್ದಾರೆ.
YESSSS @jimmy9 with a huge wicket! ?
Scorecard & Videos: https://t.co/7Bh6Sa3TPf#ENGvNZ pic.twitter.com/2Hke3L8Sqv
— England Cricket (@englandcricket) June 2, 2021
ತಮ್ಮ 161 ನೇ ಟೆಸ್ಟ್ ಆಡುತ್ತಿರುವ ಜಿಮ್ಮಿ ಇಂಗ್ಲೆಂಡ್ ಪರ ಅತಿಹೆಚ್ಚು ಟೆಸ್ಟ್ಗಳನ್ನಾಡಿರುವ ಮಾಜಿ ಆರಂಭ ಆಟಗಾರ ಅಲಸ್ಟೇರ್ ಕುಕ್ ಅವರ ದಾಖಲೆಯನ್ನು ಸರಿಗಟ್ಟಿದರು. 18 ವರ್ಷಗಳ ಹಿಂದೆ (2003) ಇದೇ ಮೈದಾನದಲ್ಲಿ ಅವರು ಜಿಂಬಾಬ್ವೆ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ಇದಕ್ಕೆ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿತು. ತಮ್ಮ ಮೊದಲ ಟೆಸ್ಟ್ ಆಡುತ್ತಿರುವ ಒಲ್ಲೀ ರಾಬಿನ್ಸನ್ ಅವರು ಲಂಚ್ ವಿರಾಮಕ್ಕೆ ಮೊದಲು 23 ರನ್ ಗಳಿಸಿದ್ದ ಟಾಮ್ ಲಾಥಮ್ ಅವರನ್ನು ಔಟ್ ಮಾಡಿದರು.
ಇಂಗ್ಲೆಂಡ್ ಮತ್ತು ವಿಶ್ವದ ಅಗ್ರಮಾನ್ಯ ಅಲ್ರೌಂಡರ್ ಅಗಿರುವ ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿಯಲ್ಲೇ ಇಂಗ್ಲಿಷ್ ತಂಡ ಬುಧವಾರದಂದು ಮೈದಾನಕ್ಕಿಳಿಯಿತು. ಗಮನಾರ್ಹ ಸಂಗತಿಯೆಂದರೆ ಎಲ್ಲ ವೇಗದ ಬೌಲರ್ಗಳನ್ನೊಳಗೊಂಡ ಬೌಲಿಂಗ್ ಅಕ್ರಮಣದೊಂದಿಗೆ ಅತಿಥೇಯ ತಂಡ ಮೊದಲ ಟೆಸ್ಟ್ ಆಡುತ್ತಿದೆ. ಜಿಮ್ಮಿ ಅವರೊಂದಿಗೆ ಅವರ ಹಲವಾರು ವರ್ಷಗಳ ಜೊತೆಗಾರ ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್, ಮತ್ತು ಡೆಬ್ಯುಟಂಟ್ ಒಲ್ಲಿ ರಾಬಿನ್ಸನ್ ಇದ್ದ್ದಾರೆ. ವಿಕೆಟ್ಕೀಪರ್-ಬ್ಯಾಟ್ಸ್ಮನ್ ಜೇಮ್ಸ್ ಬ್ರೇಸಿ ಸಹ ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ.
2019ರಲ್ಲಿ ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯ ನಡುವೆ ನಡೆದ ಌಶಸ್ ಸರಣಿಯ ಟೆಸ್ಟ್ ಒಂದನ್ನು ಆಯೋಜಿಸಿದ ನಂತರ ಮೊದಲ ಬಾರಿಗೆ ಕ್ರಿಕೆಟ್ ಕಾಶಿಯೆನಿಸಿಕೊಂಡಿರುವ ಲಾರ್ಡ್ಸ್ನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಕೊವಿಡ್ ಪಿಡುಗುನಿಂದಾಗಿ ಸ್ಟೇಡಿಯಂ ಸಾಮರ್ಥ್ಯದ ಶೇಕಡಾ 25 ರಷ್ಟು ಪ್ರೇಕ್ಷಕರಿಗೆ ಮಾತ್ರ ಪಂದ್ಯ ನೋಡುವ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ