
ಟೆನಿಸ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಚ್, ನ್ಯೂಯಾರ್ಕ್‌ನ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ನಡೆದ ಯುಎಸ್ ಓಪನ್ 2026ರ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಅರ್ಜೆಂಟೀನಾದ ಅನ್‌ಸೀಡೆಡ್ ಆಟಗಾರ ಮಾರಿಯಾನೊ ನವೋನ್ ವಿರುದ್ಧ ಕಣಕ್ಕಿಳಿದ ಜೊಕೊವಿಚ್, ಮೊದಲ ಸುತ್ತಿನ ಪಂದ್ಯದಲ್ಲೇ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
4 ಗಂಟೆ 36 ನಿಮಿಷಗಳ ಕಾಲ ನಡೆದ ಐದು ಸೆಟ್‌ಗಳ ಮಹಾ ಮ್ಯಾರಥಾನ್ ಹೋರಾಟದಲ್ಲಿ 7-6 (7-5), 5-7, 4-6, 6-2, 6-1 ಸೆಟ್‌ಗಳಿಂದ ಜೊಕೊವಿಚ್ ಅವರನ್ನು ಸೋಲಿಸುವಲ್ಲಿ ವಿಶ್ವದ 49ನೇ ಶ್ರೇಯಾಂಕದ ಮಾರಿಯಾನೊ ನವೋನ್ ಯಶಸ್ವಿಯಾಗಿದ್ದಾರೆ.
39 ವರ್ಷದ ನೊವಾಕ್ ಜೊಕೊವಿಚ್ ಪಂದ್ಯದ ವೇಳೆ ತೀವ್ರವಾದ ತೇವಾಂಶ ಮತ್ತು ಹವಾಮಾನದಿಂದಾಗಿ ಪರದಾಡಿದ್ದರು. ಮೂರನೇ ಸೆಟ್‌ನ ಮಧ್ಯದಲ್ಲಿ ಅವರು ಕೋರ್ಟ್‌ನಲ್ಲೇ ಹಲವು ಬಾರಿ ವಾಂತಿ ಮಾಡಿಕೊಂಡರು.
ನಾಲ್ಕನೇ ಸೆಟ್‌ನಲ್ಲಿ ಬೆನ್ನು ನೋವು ಮತ್ತು ಕಾಲುಗಳ ಸ್ನಾಯು ಸೆಳೆತದಿಂದಾಗಿ ಓಡಲು ಕೂಡ ಪರದಾಡಿದರು. ಐದನೇ ಸೆಟ್ ವೇಳೆ ಜೊಕೊವಿಚ್ ನೋವಿನಿಂದ ಕಣ್ಣೀರು ಹಾಕಿದ್ದರು.
ಈ ಪಂದ್ಯದ ನಂತರ ಮಾತನಾಡಿದ ಮಾರಿಯಾನೊ ನವೋನ್, “ಟೆನಿಸ್ ಜಗತ್ತಿನ GOAT (ಸಾರ್ವಕಾಲಿಕ ಶ್ರೇಷ್ಠ) ವಿರುದ್ಧ ಆರ್ಥರ್ ಆ್ಯಶ್ ಸ್ಟೇಡಿಯಂನ ದೊಡ್ಡ ವೇದಿಕೆಯಲ್ಲಿ 5 ಸೆಟ್‌ಗಳ ಪಂದ್ಯ ಗೆದ್ದಿರುವುದು ನನ್ನ ಪಾಲಿಗೆ ಕನಸು ನನಸಾದಂತೆ” ಎಂದು ಭಾವುಕರಾಗಿ ನುಡಿದಿದ್ದಾರೆ.
ಇದನ್ನೂ ಓದಿ: ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!