AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಗಂಟೆ 15 ನಿಮಿಷಗಳ ಕಾದಾಟ: ಹೊಸ ಇತಿಹಾಸ  ನಿರ್ಮಿಸಿದ ನೊವಾಕ್ ಜೊಕೊವಿಚ್

Novak Djokovic vsFelix Auger-Aliassime: ವಿಂಬಲ್ಡನ್​ ಅಂಗಳದಲ್ಲಿ ನಡೆದ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮೆ ವಿರುದ್ಧ ನೊವಾಕ್ ಜೊಕೊವಿಚ್ ಜಯ ಸಾಧಿಸಿದ್ದಾರೆ. ಈ ಪಂದ್ಯದ ಮೊದಲ ಸೆಟ್​ ಅನ್ನು 7-6 (12-10) ಅಂತರದಿಂದ ಗೆದ್ದ ಜೊಕೊವಿಚ್, ದ್ವಿತೀಯ ಸೆಟ್​​ನಲ್ಲಿ 3-6 ಅಂತರದಿಂದ ಮುಗ್ಗರಿಸಿದ್ದರು. ಇನ್ನು ಮೂರನೇ ಸೆಟ್​​ನಲ್ಲಿ  6-3  ಅಂತರದಿಂದ ಗೆದ್ದರೂ, ನಾಲ್ಕನೇ ಸೆಟ್​​ನಲ್ಲಿ 6-7 (4-7) ಅಂತರದಿಂದ ಫೆಲಿಕ್ಸ್ ಕಂಬ್ಯಾಕ್ ಮಾಡಿದರು. ಇನ್ನು ನಿರ್ಣಾಯಕ ಸೆಟ್​​ನಲ್ಲಿ 7-6 (10-4) ಅಂತರದ ಜಯ ಸಾಧಿಸಿ ನೊವಾಕ್ ಜೊಕೊವಿಚ್ ಸೆಮಿಫೈನಲ್​​ಗೆ ಲಗ್ಗೆಯಿಟ್ಟಿದ್ದಾರೆ.

5 ಗಂಟೆ 15 ನಿಮಿಷಗಳ ಕಾದಾಟ: ಹೊಸ ಇತಿಹಾಸ  ನಿರ್ಮಿಸಿದ ನೊವಾಕ್ ಜೊಕೊವಿಚ್
Novak DjokovicImage Credit source: GettyImages
ಝಾಹಿರ್ ಯೂಸುಫ್
|

Updated on: Jul 09, 2026 | 7:32 AM

Share

ವಿಂಬಲ್ಡನ್ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 39 ವರ್ಷದ ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಭರ್ಜರಿ ಜಯ ಸಾಧಿಸಿದ್ದಾರೆ. ಲಂಡನ್‌ನ ಪ್ರಸಿದ್ಧ ಸೆಂಟರ್ ಕೋರ್ಟ್‌ನಲ್ಲಿ ನಡೆದ ಈ ರಣರೋಚಕ ಹಣಾಹಣಿಯಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮೆ ಹಾಗೂ ನೊವಾಕ್ ಜೊಕೊವಿಚ್ ಮುಖಾಮುಖಿಯಾಗಿದ್ದರು. ಈ ಮುಖಾಮುಖಿಯು ಬರೋಬ್ಬರಿ 5 ಗಂಟೆ, 15 ನಿಮಿಷಗಳ ಕಾಲ ನಡೆದಿದ್ದು ವಿಶೇಷ.  ಈ ಸುದೀರ್ಘ ಹೋರಾಟದೊಂದಿಗೆ ನೊವಾಕ್ ವಿಂಬಲ್ಡನ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಜೊಕೊವಿಚ್ ಪರಾಕ್ರಮ:

ವಿಶ್ವ ರ‍್ಯಾಂಕಿಂಗ್‌ನಲ್ಲಿ 4 ನೇ ಸ್ಥಾನದಲ್ಲಿರುವ ಫೆಲಿಕ್ಸ್ ಆಗರ್-ಅಲಿಯಾಸಿಮೆ ವಿರುದ್ಧ 8ನೇ ಶ್ರೇಯಾಂಕಿತರಾಗಿರುವ ನೊವಾಕ್ ಜೊಕೊವಿಚ್ ಏನು ಮಾಡಲಿದ್ದಾರೆ? ಎಂಬ ಕುತೂಹಲ ಎಲ್ಲರಲ್ಲಿತ್ತು. ಏಕೆಂದರೆ ಈ ಪಂದ್ಯವನ್ನು ಯಂಗ್ ಬ್ಲಡ್ ವರ್ಸಸ್ ಎಕ್ಸ್​ಪಿರಿಯೆನ್ಸ್ ಎಂದು ಬಿಂಬಿಸಲಾಗಿತ್ತು. ಅದರಂತೆ ಶುರುವಾದ ಈ ಪಂದ್ಯದಲ್ಲಿ ಫೆಲಿಕ್ಸ್ ತಮ್ಮ ಬಿಸಿರಕ್ತವನ್ನು ಬೆವರಾಗಿಸಿದರೆ, ಜೊಕೊವಿಚ್ ಅನುಭವವನ್ನು ಧಾರೆಯೆರದರು. ಪರಿಣಾಮ ಹೋರಾಟವು 5 ಗಂಟೆ 15 ನಿಮಿಷಗಳವರೆಗೆ ಸಾಗಿತು.

ಇದಾಗ್ಯೂ 39 ವರ್ಷದ ನೊವಾಕ್ ಜೊಕೊವಿಚ್ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಂತಿಮವಾಗಿ ಜೊಕೊವಿಚ್ ಟ್ರೈಬೆಕರ್​ನಲ್ಲಿ ಸತತ 6 ಪಾಯಿಂಟ್‌ಗಳನ್ನು ಗೆದ್ದು 10-4 ರಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ವಿಂಬಲ್ಡನ್ ಇತಿಹಾಸದಲ್ಲೇ ಸುದೀರ್ಘ ಅವಧಿಯ ಕ್ವಾರ್ಟರ್ ಫೈನಲ್ ಆಡಿದ ಹೊಸ ದಾಖಲೆ ಬರೆದರು.

  • ಅಂತಿಮ ಸ್ಕೋರ್: 7-6 (12-10), 3-6, 6-3, 6-7 (4-7), 7-6 (10-4)
  •  ಒಟ್ಟು ಸಮಯ: 5 ಗಂಟೆ, 15 ನಿಮಿಷಗಳು.
  • ರೋಚಕಅಂತ್ಯ: ಅಂತಿಮ ಸೆಟ್‌ನ ಸೂಪರ್ ಟೈ-ಬ್ರೇಕರ್‌ನಲ್ಲಿ 4-4 ರ ಸಮಬಲವಿದ್ದಾಗ, ಜೊಕೊವಿಕ್ ಸತತ 6 ಪಾಯಿಂಟ್‌ಗಳನ್ನು ಗೆದ್ದು 10-4 ರಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಜೊಕೊವಿಕ್ ಬರೆದ ಹೊಸ ದಾಖಲೆಗಳು!

ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಚ್ ಟೆನಿಸ್ ಇತಿಹಾಸದ ಪುಟಗಳಲ್ಲಿ ಮತ್ತಷ್ಟು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ:

  • ಅತಿ ಹಿರಿಯ ಆಟಗಾರ: 39 ವರ್ಷದ ನೊವಾಕ್ ಜೊಕೊವಿಚ್, 1974ರ ನಂತರ ವಿಂಬಲ್ಡನ್ ಸೆಮಿ-ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
  •  15ನೇ ಸೆಮಿ-ಫೈನಲ್: ವಿಂಬಲ್ಡನ್‌ನಲ್ಲಿ ದಾಖಲೆಯ 15ನೇ ಬಾರಿಗೆ ಸೆಮಿ-ಫೈನಲ್ ತಲುಪಿದ ವಿಶೇಷ ದಾಖಲೆಯನ್ನೂ ಕೂಡ ಜೊಕೊವಿಚ್ ತಮ್ಮದಾಗಿಸಿಕೊಂಡಿದ್ದಾರೆ.
  •  107ನೇ ಗೆಲುವು: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ತಮ್ಮ ಒಟ್ಟು ಗೆಲುವಿನ ಸಂಖ್ಯೆಯನ್ನು 107ಕ್ಕೆ ಏರಿಸಿಕೊಂಡಿದ್ದಾರೆ.

ಸವಾಲುಗಳನ್ನು ಮೆಟ್ಟಿ ನಿಂತ ದಿಗ್ಗಜ!

ಈ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರಿಗೆ ಜಯ ಸುಲಭವಾಗಿ ದಕ್ಕಿರಲಿಲ್ಲ. ಮೊದಲ ಸೆಟ್‌ನಲ್ಲಿಯೇ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕಾಯಿತು. ಇದಲ್ಲದೆ, ಎರಡನೇ ಸೆಟ್ ನಂತರ ಕೋರ್ಟ್‌ನ ಮೇಲ್ಛಾವಣಿಯನ್ನು ಮುಚ್ಚುವ ಅಧಿಕಾರಿಗಳ ನಿರ್ಧಾರದ ಬಗ್ಗೆಯೂ ಜೊಕೊವಿಕ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇವೆಲ್ಲದರ ಮಧ್ಯೆ 25 ವರ್ಷದ ಯುವ ಆಟಗಾರ ಆಗರ್-ಅಲಿಯಾಸಿಮೆ ಬರೋಬ್ಬರಿ 29 ಏಸ್ ಸರ್ವ್‌ಗಳನ್ನು ಸಿಡಿಸಿ ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡಿದರು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಗೆಲ್ಲುವಲ್ಲಿ “ನೋಲೆ” ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಸೆಮಿಫೈನಲ್ ಎದುರಾಳಿ ಯಾರು?

ಈ ಸುದೀರ್ಘ ಪಂದ್ಯದ ಬಳಿಕ ನೊವಾಕ್ ಜೊಕೊವಿಚ್ ಅವರಿಗೆ ಎರಡು ದಿನಗಳ ವಿಶ್ರಾಂತಿ ಸಿಗಲಿದೆ. ಬರುವ ಶುಕ್ರವಾರ ನಡೆಯಲಿರುವ ಹೈ-ವೋಲ್ಟೇಜ್ ಸೆಮಿ-ಫೈನಲ್ ಪಂದ್ಯದಲ್ಲಿ ಅವರು ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಯಾನಿಕ್ ಸಿನರ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಸವಾಲಿನಲ್ಲಿ ಗೆದ್ದರೆ ನೊವಾಕ್ ಜೊಕೊವಿಚ್ ಮತ್ತೊಂದು ಫೈನಲ್​ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ