Virat Kohli: ವಿರಾಟ್​ ಕೊಹ್ಲಿಯನ್ನು ಕಿಚಾಯಿಸಿದ್ದ ಉತ್ತರಾಖಂಡ್​ ಪೊಲೀಸರ ಟ್ವೀಟ್​ ಡಿಲೀಟ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2021 | 8:40 PM

ಕೊಹ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್​ಗೆ ತೆರಳುತ್ತಿರುವ ಫೋಟೋವನ್ನು ಉತ್ತರಾಖಂಡ ಪೊಲೀಸರು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು. ರಾಶ್ ಡ್ರೈವಿಂಗ್ ಮಾಡುವವರಿಗೆ ಉತ್ತಮ ಸಲಹೆ ನೀಡುವ ಸಲುವಾಗಿ ಟೀಂ ಇಂಡಿಯಾ ನಾಯಕನ ಉದಾಹರಣೆಯನ್ನು ಉಲ್ಲೇಖಿಸಲಾಗಿತ್ತು.

Virat Kohli: ವಿರಾಟ್​ ಕೊಹ್ಲಿಯನ್ನು ಕಿಚಾಯಿಸಿದ್ದ ಉತ್ತರಾಖಂಡ್​ ಪೊಲೀಸರ ಟ್ವೀಟ್​ ಡಿಲೀಟ್​
ವಿರಾಟ್ ಕೊಹ್ಲಿ
Follow us on

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕೊಹ್ಲಿ ಡಕ್​ಗೆ ಔಟ್​ ಆಗಿದ್ದರು. ಎಚ್ಚರವಹಿಸದಿದ್ದರೆ ನೀವು ಕೊಹ್ಲಿಯಂತಾಗುತ್ತೀರಿ ಎಂದು ಉತ್ತರಾಖಂಡ ಪೊಲೀಸರು ಭಿನ್ನವಾಗಿ ಜಾಗೃತಿ ಮೂಡಿಸುವ ಜಾಹೀರಾತು ಮಾಡಿದ್ದರು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಟ್ವೀಟ್​ ಅನ್ನು ಉತ್ತರಾಖಂಡ ಪೊಲೀಸರು ಡಿಲೀಟ್​ ಮಾಡಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ರಾಹುಲ್​ ವಿಕೆಟ್​ ಬಳಿಕ ಬ್ಯಾಟಿಂಗ್​ಗೆ ಬಂದ ನಾಯಕ ವಿರಾಟ್​ ಕೊಹ್ಲಿ, ನಾಯಕನ ಜವಾಬ್ದಾರಿಯನ್ನು ಮರೆತು ಶೂನ್ಯಕ್ಕೆ ಔಟಾದರು. ರನ್​ ವೇಗ ಹೆಚ್ಚಿಸಲು ಹೋದ ಕೊಹ್ಲಿ ಆದಿಲ್​ ರಶೀದ್​ ಬೌಲಿಂಗ್​ನಲ್ಲಿ ಮಿಡ್​ ಆಫ್​ ಮೇಲೆ ಬೌಂಡರಿ ಗಳಿಸಲು ಯತ್ನಿಸಿದರು. ಆದರೆ ಈ ಯತ್ನದಲ್ಲಿ ವಿಫಲರಾದ ಕೊಹ್ಲಿ, ಅಲ್ಲಿಯೇ ಫಿಲ್ಡೀಂಗ್​ ಮಾಡುತ್ತಿದ್ದ ಬೈರ್​ಸ್ಟೋವ್​ ಕೈಗೆ ಕ್ಯಾಚಿತ್ತು ಪೆವಿಲಿಯನ್​ಗೆ ತೆರಳಿದರು.

ಕೊಹ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್​ಗೆ ತೆರಳುತ್ತಿರುವ ಫೋಟೋವನ್ನು ಉತ್ತರಾಖಂಡ ಪೊಲೀಸರು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು. ರಾಶ್ ಡ್ರೈವಿಂಗ್ ಮಾಡುವವರಿಗೆ ಉತ್ತಮ ಸಲಹೆ ನೀಡುವ ಸಲುವಾಗಿ ಟೀಂ ಇಂಡಿಯಾ ನಾಯಕನ ಉದಾಹರಣೆಯನ್ನು ಉಲ್ಲೇಖಿಸಲಾಗಿತ್ತು. ಪೂರ್ಣ ಪ್ರಜ್ಞೆಯಲ್ಲಿ ವಾಹನ ಚಾಲನೆ ಮಾಡುವುದು ಅವಶ್ಯಕ. ಇಲ್ಲದಿದ್ದರೆ ನೀವು ಸಹ ಕೊಹ್ಲಿಯಂತೆ ಶೂನ್ಯಕ್ಕೆ ಔಟಾಗಬೇಕಾಗುತ್ತದೆ ಎಂದು ಬರೆದುಕೊಂಡಿದ್ದರು. ಪೊಲೀಸ್​ ಅಧಿಕಾರಿಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು.

ಅನೇಕರು ಈ ಟ್ವೀಟ್​ ಬಗ್ಗೆ ಆಕ್ರೋಶ ಹೊರಹಾಕಿದ್ದರು. ವಿರಾಟ್​ ಕೊಹ್ಲಿ ಎಲ್ಲೋ ಒಂದೆರಡು ಬಾರಿ ಡಕ್​ಗೆ ಔಟ್​ ಆದರು ಎನ್ನುವ ಕಾರಣಕ್ಕೆ ಅವರಿಗೆ ಅಗೌರವ ತೋರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು, ಟೀಂ ಇಂಡಿಯಾ ನಾಯಕನಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಾಕಷ್ಟು ಟೀಕೆಗಳ ನಂತರ ಈ ಟ್ವೀಟ್​ಅನ್ನು ಡಿಲೀಟ್​ ಮಾಡಲಾಗಿದೆ.

ಇದನ್ನೂ ಓದಿ: ಎಚ್ಚರವಹಿಸದಿದ್ದರೆ ನೀವು ಕೊಹ್ಲಿಯಂತ್ತಾಗುತ್ತೀರಿ! ಕೊಹ್ಲಿಯ ಡಕ್​ ಔಟ್, ಉತ್ತರಾಖಂಡ್​ ಪೊಲೀಸ್​ ಅಧಿಕಾರಿ​ಗೆ ಮಾದರಿಯಾಗಿದ್ದೇಗೆ?