AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy 2021: 4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ.. ಮಿಂಚಿದ ಪೃಥ್ವಿ ಶಾ, ಆದಿತ್ಯ ತಾರೆ!

Vijay Hazare Trophy 2021: ಮುಂಬೈ ಬ್ಯಾಟ್ಸ್‌ಮನ್ ಆದಿತ್ಯ ತಾರೆ 91 ಎಸೆತಗಳ ಬಾರಿಸಿದ ಅಮೋಘ ಶತಕದ ನೆರವಿನಿಂದಾಗಿ ಮುಂಬೈ ತಂಡ ಭಾನುವಾರದಂದು ತಮ್ಮ ನಾಲ್ಕನೇ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಬೀಗಿತು.

Vijay Hazare Trophy 2021: 4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ.. ಮಿಂಚಿದ ಪೃಥ್ವಿ ಶಾ, ಆದಿತ್ಯ ತಾರೆ!
4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ
Follow us
ಪೃಥ್ವಿಶಂಕರ
|

Updated on: Mar 14, 2021 | 5:19 PM

ಇಂದು ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದೆದೂರು ಮುಂಬೈ ತಂಡ ಭರ್ಜರಿ ಜಯ ಸಾಧಿಸಿದೆ. ಮುಂಬೈ ಬ್ಯಾಟ್ಸ್‌ಮನ್ ಆದಿತ್ಯ ತಾರೆ 91 ಎಸೆತಗಳ ಬಾರಿಸಿದ ಅಮೋಘ ಶತಕದ ನೆರವಿನಿಂದಾಗಿ ಮುಂಬೈ ತಂಡ ಭಾನುವಾರದಂದು ತಮ್ಮ ನಾಲ್ಕನೇ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಬೀಗಿತು. ಉತ್ತರ ಪ್ರದೇಶ ತಂಡ ನೀಡಿದ 312 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಪೃಥ್ವಿ ಶಾ ಅವರ 73 ರನ್ ತಂಡಕ್ಕೆ ಉತ್ತಮವಾಗಿ ನೆರವಾಯಿತು. ಹೀಗಾಗಿ ಇತರ ಬ್ಯಾಟ್ಸ್‌ಮನ್‌ಗಳು ತಂಡವನ್ನು ಪ್ರಶಸ್ತಿಯನ್ನು ಕೊಂಡೊಯ್ಯಲು ಯಶಸ್ವಿಯಾದರು.

ಉತ್ತರ ಪ್ರದೇಶ ಬೃಹತ್​ ಮೊತ್ತ.. ಹಿಂದಿನ ದಿನ ಟಾಸ್ ಗೆದ್ದ ಮುಂಬೈ ಮೊದಲು ಉತ್ತರ ಪ್ರದೇಶವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡ ಆರಂಭಿಕರಾದ ಮಾಧವ್​ ಕೌಶಿಕ್​ ಹಾಗೂ ಸಮರ್ಥ್​ ಯಾದವ್​ ಅವರ ಅದ್ಭುತ ಜೊತೆಯಾಟ ಹಾಗೂ ಅಕ್ಷ್​ದೀಪ್​ ನಾಥ್​ ಅವರ ಆಟದಿಂದ ಗೌರವಯುತ ಮೊತ್ತ ಕಲೆ ಹಾಕಿತು. ಆರಂಭಿಕಾರಗಿ ಬಂದ ಮಾಧವ್​ ಕೌಶಿಕ್ ಅಜೇಯರಾಗಿ ಉಳಿದು ಬರೋಬ್ಬರಿ 158 ರನ್​ ಗಳಿಸಿದರು.

ಮಾಧವ್​ ಕೌಶಿಕ್ ಅವರ ಈ ಶತಕದಾಟದಲ್ಲಿ 15 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ ಸೇರಿದ್ದವು. ಮಾಧವ್​ ಕೌಶಿಕ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಸಮರ್ಥ್​ ಯಾದವ್ ಸಹ 55 ರನ್​ಗಳ ಭರ್ಜರಿ ಆಟ ಆಡಿದರು. ನಂತರ ಬಂದ ಅಕ್ಷ್​ದೀಪ್​ ನಾಥ್ ಸಹ ಭರ್ಜರಿ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾದರು. ಈ ಮೂವರ ಆಟದಿಂದಾಗಿ ಉತ್ತರ ಪ್ರದೇಶ ತಂಡ 4 ವಿಕೆಟ್​ ಕಳೆದುಕೊಂಡು 312 ರನ್​ ಗಳಿಸಿತು.

ಬೃಹತ್​ ಮೊತ್ತ ಬೆನ್ನತ್ತಿದ್ದ ಮುಂಬೈ ಉತ್ತರ ಪ್ರದೇಶ ತಂಡ ನೀಡಿದ ಬೃಹತ್​ ಮೊತ್ತವನ್ನು ಬೆನ್ನತ್ತಲು ಪ್ರಾರಂಭಿಸಿದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಅವರ ಅಮೋಘ 73 ರನ್​ಗಳು ತಂಡಕ್ಕೆ ಭದ್ರ ಬುನಾದಿ ಹಾಕಿತು. ನಂತರ ಬಂದ ಆದಿತ್ಯ ತಾರೆ ಅಜೇಯ 118 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದಿತ್ಯ ತಾರೆಯೊಂದಿಗೆ ಉತ್ತಮ ಜೊತೆಯಾಟ ಪ್ರದರ್ಶಿಸಿದ ಶಿವಂ ದುಬೆ ತಂಡಕ್ಕೆ 42 ರನ್​ಗಳ ಕೊಡುಗೆ ನೀಡಿದರು. ಉಳಿದಂತೆ ಬ್ಯಾಟಿಂಗ್​ಗೆ ಬಂದ ಎಲ್ಲಾ ಆಟಗಾರರು ತಮ್ಮ ಪ್ರದರ್ಶನದಿಂದಾಗಿ ತಂಡವನ್ನು 4ನೇ ಬಾರಿಗೆ ಚಾಂಪಿಯನ್​ ಆಗಿ ಮಾಡಿದರು.

ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್