700 ಕೋಟಿ ವೆಚ್ಚ, 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕೂರುವ ಸಾಮರ್ಥ್ಯ, 3D ಥಿಯೇಟರ್, ಅಬ್ಬಬ್ಬಾ.! ಕ್ರಿಕೆಟ್​ ಸ್ವರ್ಗ ಮೊಟೆರಾ ಕ್ರೀಡಾಂಗಣದ Photos ನೋಡಿ

Edited By:

Updated on: Feb 24, 2021 | 6:59 PM

Motera Stadium: 63 ಎಕರೆ ಪ್ರದೇಶದಲ್ಲಿ ಹರಡಿರುವ, 700 ಕೋಟಿ ವೆಚ್ಚದಲ್ಲಿ ಮೊಟೆರಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಒಲಿಂಪಿಕ್ ಗಾತ್ರದ ಈಜುಕೊಳ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ಕೊಠಡಿಗಳಿವೆ.

1 / 9
700 ಕೋಟಿ ವೆಚ್ಚ, 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕೂರುವ ಸಾಮರ್ಥ್ಯ, 3D ಥಿಯೇಟರ್, ಅಬ್ಬಬ್ಬಾ.! ಕ್ರಿಕೆಟ್​ ಸ್ವರ್ಗ ಮೊಟೆರಾ ಕ್ರೀಡಾಂಗಣದ Photos ನೋಡಿ

2 / 9

63 ಎಕರೆ ಪ್ರದೇಶದಲ್ಲಿ ಹರಡಿರುವ, 700 ಕೋಟಿ ವೆಚ್ಚದಲ್ಲಿ ಮೊಟೆರಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಒಲಿಂಪಿಕ್​ ಕ್ರೀಡೆಯಲ್ಲಿ ಬಳಸುವಂತಹ, ಅದೇ ಸಾಮಥ್ರ್ಯದ ಈಜುಕೊಳ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ಕೊಠಡಿಗಳಿವೆ.

3 / 9

ಪ್ರೇಕ್ಷಕರ ಸಾಮರ್ಥ್ಯಕ್ಕೆ ಅನುಗುಣವಾಗಿ ಮೊಟೆರಾ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣದಲ್ಲಿ, ಒಂದು ಲಕ್ಷ 10 ಸಾವಿರ ಪ್ರೇಕ್ಷಕರು ಒಂದೇ ಸಮಯದಲ್ಲಿ ಪಂದ್ಯವನ್ನು ಆನಂದಿಸಬಹುದು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣವು 90 ಸಾವಿರ ಪ್ರೇಕ್ಷಕರು ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ವಿಷಯದಲ್ಲಿ ಮುಂಚೂಣಿಯಲ್ಲಿತ್ತು.

4 / 9

ಪ್ರಯಾಣದ ಸುಲಭಕ್ಕಾಗಿ, ಕ್ರೀಡಾಂಗಣವನ್ನು ಅಹಮದಾಬಾದ್ ಮೆಟ್ರೊದೊಂದಿಗೆ ಸಂಪರ್ಕಿಸಲಾಗಿದೆ. ಟ್ರಾಫಿಕ್ ಜಾಮ್​ಗಳಲ್ಲಿ ಸಿಲುಕಿಕೊಳ್ಳದೆ ಅಭಿಮಾನಿಗಳು ಮೈದಾನಕ್ಕೆ ಆರಾಮವಾಗಿ ತಲುಪಬಹುದಾಗಿದೆ.

5 / 9

ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ

6 / 9

ಭಾರತದ ಯಾವುದೇ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಎಲ್​ಇಡಿ ದೀಪಗಳನ್ನು ಬಳಸಲಾಗಿಲ್ಲ. ಮೊಟೆರಾ ಕ್ರೀಡಾಂಗಣದಲ್ಲಿ ಎಲ್ಇಡಿ ದೀಪಗಳನ್ನು ಬಳಸಲಾಗಿದೆ. ಎಲ್‌ಇಡಿ ದೀಪಗಳಿಂದಾಗಿ, ಆಟಗಾರರಿಗೆ ರಾತ್ರಿ ಪಂದ್ಯಗಳಲ್ಲಿ ಚೆಂಡು ಸ್ಪಷ್ಟವಾಗಿ ಕಾಣುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಎಲ್ಇಡಿ ದೀಪಗಳ ಬಳಕೆಯು ನೆರಳುಗಳನ್ನು ಪ್ರತಿಬಿಂಬಿಸುವುದಿಲ್ಲ

7 / 9

ಮೊಟೆರಾ ಕ್ರೀಡಾಂಗಣ

8 / 9

ಇತರ ಕೆಲವು ಸ್ಥಳಗಳಿಗಿಂತ ಭಿನ್ನವಾಗಿ, ಮೊಟೆರಾ ಕ್ರೀಡಾಂಗಣವು ಪ್ರತಿ ಸ್ಟ್ಯಾಂಡ್‌ನಲ್ಲಿ ಫುಡ್ ಕೋರ್ಟ್ ಹೊಂದಿದೆ.

9 / 9

ಒಟ್ಟು 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್​ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದೆ. ಕ್ರೀಡಾಂಗಣದೊಳಗಿನ ಅಭಿಮಾನಿಗಳ ಸಾಮರ್ಥ್ಯ ಮಾತ್ರವಲ್ಲ, ಪಾರ್ಕಿಂಗ್ ಸ್ಥಳವೂ ಬಹಳ ದೊಡ್ಡದಾಗಿದೆ.

Published On - 4:48 pm, Tue, 23 February 21

Loading...
Unable to load recommendations.
Follow Us