IPL 2021: ಮನೀಶ್​ ಪಾಂಡೆ ಔಟ್ ಆದಾಗ ಕವಿಯಾ ಮಾರನ್ ರಿಯಾಕ್ಟ್ ಮಾಡಿದ್ದು ಹೀಗೆ; ವಿಡಿಯೋ ವೈರಲ್​

ಶಹಬಾಜ್​ ವಿಕೆಟ್​ ಆದದ್ದನ್ನು ವೀಕ್ಷಿಸುತ್ತಿದ್ದ ಎಸ್​ಆರ್​ಹೆಚ್​ ಸಿಇಒ ಕವಿಯಾ ಮಾರನ್ ತಲೆಮೇಲೆ ಕೈಹೊತ್ತ ವಿಡಿಯೋ ಇದೀಗ ವೈರಲ್​ ಆಗಿದೆ.

IPL 2021: ಮನೀಶ್​ ಪಾಂಡೆ ಔಟ್ ಆದಾಗ ಕವಿಯಾ ಮಾರನ್ ರಿಯಾಕ್ಟ್ ಮಾಡಿದ್ದು ಹೀಗೆ; ವಿಡಿಯೋ ವೈರಲ್​
ಎಸ್​ಆರ್​ಹೆಚ್​ ಸಿಇಒ ಕವಿಯಾ ಮಾರನ್
Follow us
shruti hegde
| Updated By: ganapathi bhat

Updated on:Apr 15, 2021 | 6:07 PM

ಐಪಿಎಲ್​ 2021 ರಲ್ಲಿ ಸನ್​ರೈಸರ್ಸ್ ಹೈದರಾಬಾದ್​ ವರ್ಸಸ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ 17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್ ವಿಕೆಟ್​ ಕಬಳಿಸಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಶಹಬಾಜ್​ ಸಾಲುಸಾಲಾಗಿ ವಿಕೆಟ್​ ಪಡೆದದ್ದನ್ನು ವೀಕ್ಷಿಸುತ್ತಿದ್ದ ಸನ್​ರೈಸರ್ಸ್ ಹೈದರಾಬಾದ್​ ಸಿಇಒ ಕವಿಯಾ ಮಾರನ್ ತಲೆಮೇಲೆ ಕೈಹೊತ್ತ ವಿಡಿಯೋ ಇದೀಗ ವೈರಲ್​ ಆಗಿದೆ.

ಪಂದ್ಯದ ಕೊನೆಯಲ್ಲಿ ಹೈದರಾಬಾದ್​ಗೆ 24 ಎಸೆತದಲ್ಲಿ 35 ರನ್​ ಬೇಕಿತ್ತು. ಮನೀಶ್​ ಪಾಂಡೆ ಮತ್ತು ಜಾನಿ ಬೈರ್​ಸ್ಟೋ ಕ್ರಿಸ್​ನಲ್ಲಿ ನಿಂತಿದ್ದರು. 17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್ ಬಂದು ಅವರಿಬ್ಬರನ್ನೂ ಔಟ್​ ಮಾಡಿದರು. ಜೊತೆಗೆ ಅಬ್ದುಲ್​ ಸಮದ್​ ಅವರ ವಿಕೆಟ್​ ಕೂಡಾ ಪಡೆದರು. ಮನೀಶ್​ ಪಾಂಡೆ ವಿಕೆಟ್​ ಕಳೆದುಕೊಂಡದ್ದನ್ನು ಕಂಡ ಸನ್​ರೈಸರ್ಸ್ ಹೈದರಾಬಾದ್​​ ಸಿಇಒ ಕವಿಯಾ ಮಾರನ್​ ಆಶ್ಚರ್ಯಚಕಿತರಾದರು. ಮನೀಶ್​ ಪಾಂಡೆ ಔಟ್​ ಆಗಿರುವುದನ್ನು ಕಂಡ ಸಿಇಒ ತಲೆಮೇಲೆ ಕೈಹೊತ್ತು ಕೂತ ವಿಡಿಯೋ ಇದೀಗ ವೈರಲ್​ ಆಗಿದೆ.

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿತ್ತು. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 150 ರನ್​ಗಳ ಸುಲಭ ಟಾರ್ಗೆಟ್ ನೀಡಿತ್ತು. ನಂತರ, ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಕ್ರೀಸ್​ಗೆ ಇಳಿದ ಆಟಗಾರರು ತಂಡವನ್ನು ಮುನ್ನಡೆಸುವ ಮನಮಾಡಲಿಲ್ಲ. ಆರ್​ಸಿಬಿ ಬೌಲರ್​ಗಳು ಡೆತ್ ಓವರ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್​ಅಪ್ ಧೂಳಿಪಟ ಮಾಡಿದರು. ಆರ್​ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಒಂದೇ ಓವರ್​ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.

ಈ ಮೂಲಕ, ಆರ್​ಸಿಬಿ-ಎಸ್​ಆರ್​ಎಚ್ ನಡುವಿನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 33(29) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 59(41) ಹೊರತುಪಡಿಸಿ ಉಳಿದ ಆಟಗಾರರು ಇನ್ನಿಂಗ್ಸ್ ಕಟ್ಟುವ ಆಟ ಆಡಿಲ್ಲ. ಸನ್​ರೈಸರ್ಸ್ ಹೈದರಾಬಾದ್ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು. ರಶೀದ್ ಖಾನ್ 4 ಓವರ್​ನಲ್ಲಿ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ್ದರು. ಜೇಸನ್ ಹೋಲ್ಡರ್ 4 ಓವರ್​ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: SRH vs RCB, IPL 2021 Match 6 Result: ಶಹಬಾಜ್ ಅಹ್ಮದ್ ಮ್ಯಾಜಿಕ್! ರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ; ಸನ್​ರೈಸರ್ಸ್​ಗೆ ಮತ್ತೆ ಸೋಲು

ಇದನ್ನೂ ಓದಿ: SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!

Published On - 6:06 pm, Thu, 15 April 21