ಬಲಿಷ್ಠ ತಂಡಗಳೆದುರು ಕೊಹ್ಲಿಯೇ ಕಿಂಗ್! ವಿರಾಟ್ – ವಿಲಿಯಮ್ಸನ್‌, ಈ ಇಬ್ಬರಲ್ಲಿ ಯಾರು ಬೆಸ್ಟ್? ಅಂಕಿಅಂಶ ಹೇಳುವುದೇನು?

| Updated By: Skanda

Updated on: May 18, 2021 | 9:28 AM

ಆದರೆ ಅಂಕಿಅಂಶಗಳು ಭಾರತದ ನಾಯಕ ವಿಶ್ವದ ಕಠಿಣ ಮತ್ತು ಅತ್ಯುತ್ತಮ ತಂಡಗಳ ಮುಂದೆ ಸ್ಕೋರ್ ಮಾಡಿದ್ದಾರೆ ಎಂದು ತೋರಿಸುತ್ತದೆ.

ಬಲಿಷ್ಠ ತಂಡಗಳೆದುರು ಕೊಹ್ಲಿಯೇ ಕಿಂಗ್! ವಿರಾಟ್ - ವಿಲಿಯಮ್ಸನ್‌, ಈ ಇಬ್ಬರಲ್ಲಿ ಯಾರು ಬೆಸ್ಟ್? ಅಂಕಿಅಂಶ ಹೇಳುವುದೇನು?
ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್‌
Follow us on

ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ರನ್ನು ಹೋಲಿಸಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಇತ್ತೀಚೆಗೆ ಹೊಸ ವಿವಾದ ಹುಟ್ಟು ಹಾಕಿದ್ದರು. ವಿಲಿಯಮ್ಸನ್ ಉತ್ತಮ ಬ್ಯಾಟ್ಸ್‌ಮನ್ ಮತ್ತು ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಕೊಹ್ಲಿಗಿಂತ ಹೆಚ್ಚಿನ ರನ್ ಗಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಇದರಿಂದ ಕೊಹ್ಲಿ ಹೆಚ್ಚು ಗಮನ ಸೆಳೆಯುತ್ತಾರೆ ಎಂದು ವಾನ್ ಹೇಳಿದ್ದಾರೆ. ಅಂದಿನಿಂದ, ಕ್ರಿಕೆಟ್ ಜಗತ್ತಿನಲ್ಲಿ ಒಂದು ಚರ್ಚೆ ಹುಟ್ಟಿದೆ. ಆದರೆ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಈ ಇಬ್ಬರಲ್ಲಿ ಯಾರು ಉತ್ತಮ ಎಂಬುದು ಸ್ಪಷ್ಟವಾಗಿ ಬಹಿರಂಗಗೊಂಡಿದೆ.

52.37 ಸರಾಸರಿಯಲ್ಲಿ 7490 ರನ್ ಗಳಿಸಿದ್ದಾರೆ
ಅಂದಹಾಗೆ, ವಿರಾಟ್ ಮತ್ತು ವಿಲಿಯಮ್ಸನ್ ಇಬ್ಬರೂ ಒಂದೇ ಟೆಸ್ಟ್ ಕ್ರಿಕೆಟ್ ಅಂಕಿಅಂಶಗಳನ್ನು ಹೊಂದಿದ್ದಾರೆ. ಕೊಹ್ಲಿ 91 ಟೆಸ್ಟ್ ಪಂದ್ಯಗಳಲ್ಲಿ 52.37 ಸರಾಸರಿಯಲ್ಲಿ 7490 ರನ್ ಗಳಿಸಿದ್ದಾರೆ. ಅವರ ಹೆಸರಲ್ಲಿ 27 ಶತಕಗಳಿವೆ. ನ್ಯೂಜಿಲೆಂಡ್ ನಾಯಕ 83 ಟೆಸ್ಟ್ ಪಂದ್ಯಗಳಲ್ಲಿ 7115 ರನ್ ಗಳಿಸಿ 54.31 ಸರಾಸರಿಯಲ್ಲಿ 24 ಶತಕಗಳನ್ನು ಗಳಿಸಿದ್ದಾರೆ. ಆದರೆ ಡೇಟಾವನ್ನು ನೋಡಿದಅಗ ಈ ಇಬ್ಬರ ನಡುವಿನ ವ್ಯತ್ಯಾಸ ತಿಳಿದುಬಂದಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳು ಭಾರತಕ್ಕೆ ಅತ್ಯಂತ ಕಠಿಣ ಸ್ಪರ್ಧಿಗಳಾಗಿವೆ. ಈ ದೇಶಗಳಲ್ಲಿ ನ್ಯೂಜಿಲೆಂಡ್ ಹೊರತುಪಡಿಸಿ, ಉಳಿದ ದೇಶಗಳಲ್ಲಿ ಕೊಹ್ಲಿಯ ದಾಖಲೆ ಅದ್ಭುತವಾಗಿದೆ. ಸೆನಾ ದೇಶಗಳಲ್ಲಿ, ಕೊಹ್ಲಿ ಇಲ್ಲಿಯವರೆಗೆ 32 ಟೆಸ್ಟ್ ಪಂದ್ಯಗಳಲ್ಲಿ 46.59 ಸರಾಸರಿಯಲ್ಲಿ 2889 ರನ್ ಗಳಿಸಿದ್ದಾರೆ. ಇಲ್ಲಿ ಅವರು 11 ಶತಕಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ, ಅವರ ಸರಾಸರಿ 50 ಕ್ಕಿಂತ ಹೆಚ್ಚು.

ಬಲಿಷ್ಠ ತಂಡಗಳ ಮುಂದೆ ವಿಲಿಯಮ್ಸನ್ ದುರ್ಬಲ
ಕೇನ್ ವಿಲಿಯಮ್ಸನ್ ಬಲಿಷ್ಠ ತಂಡಗಳ ಮುಂದೆ ಮಂಕಾಗಿದ್ದಾರೆ. ಅವರು ಭಾರತದ ಏಳು ಟೆಸ್ಟ್ ಪಂದ್ಯಗಳಲ್ಲಿ 461 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲೂ ನಾಲ್ಕು ಟೆಸ್ಟ್‌ಗಳಲ್ಲಿ 247 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸರಾಸರಿ 30.87. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ, ಅವರು ಏಳು ಇನ್ನಿಂಗ್ಸ್‌ಗಳಲ್ಲಿ 127 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಅವರು 22 ಟೆಸ್ಟ್‌ಗಳಲ್ಲಿ 34.8 ಸರಾಸರಿಯಲ್ಲಿ 1392 ರನ್ ಗಳಿಸಿದ್ದಾರೆ. ಆದಾಗ್ಯೂ, ನ್ಯೂಜಿಲೆಂಡ್ ವಿಜೇತ ಟೆಸ್ಟ್ನಲ್ಲಿ ಅವರ ಕೊಡುಗೆ ದೊಡ್ಡದಾಗಿದೆ. ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಗೆದ್ದ 36 ಪಂದ್ಯಗಳಲ್ಲಿ 3993 ರನ್ ಗಳಿಸಿದ್ದಾರೆ. ಸರಾಸರಿ 78.29. ಟೆಸ್ಟ್ ಕ್ರಿಕೆಟ್‌ನಲ್ಲಿ ಗೆದ್ದ ಪಂದ್ಯಗಳಲ್ಲಿ ಅವರ ಸರಾಸರಿಯು ಡಾನ್ ಬ್ರಾಡ್‌ಮನ್ ಮತ್ತು ಸ್ಟೀವ್ ಸ್ಮಿತ್ ನಂತರ ಅತಿ ಹೆಚ್ಚು ಇದೆ.

ಈ ವಿಚಾರದಲ್ಲಿ, ಕೊಹ್ಲಿ ಕೊಂಚ ಹಿಂದೆ ಇದ್ದಾರೆ. ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವಲ್ಲಿ ವಿಲಿಯಮ್ಸನ್ ಭಾರತದ ನಾಯಕನನ್ನು ಮೀರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಸರಾಸರಿ 48 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಸರಾಸರಿ 40.69 ಸ್ಕೋರ್ ಮಾಡಿದ್ದಾರೆ.

ಅತ್ಯುತ್ತಮ ತಂಡಗಳ ಮುಂದೆ ಸ್ಕೋರ್
ಆದರೆ ಅಂಕಿಅಂಶಗಳು ಭಾರತದ ನಾಯಕ ವಿಶ್ವದ ಕಠಿಣ ಮತ್ತು ಅತ್ಯುತ್ತಮ ತಂಡಗಳ ಮುಂದೆ ಸ್ಕೋರ್ ಮಾಡಿದ್ದಾರೆ ಎಂದು ತೋರಿಸುತ್ತದೆ. ಅದೇ ಸಮಯದಲ್ಲಿ, ವಿಲಿಯಮ್ಸನ್ ಅಂತಹ ತಂಡಗಳ ಮುಂದೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರ ದಾಖಲೆ ದುರ್ಬಲ ತಂಡಗಳ ಮೇಲೆ ಉತ್ತಮವಾಗಿದೆ. ಇಂಗ್ಲೆಂಡ್‌ನ ಮಟ್ಟಿಗೆ ಹೇಳುವುದಾದರೆ, ಕೊಹ್ಲಿ ಇನ್ನೂ ಅಗ್ರಸ್ಥಾನದಲ್ಲಿದ್ದಾರೆ. ವಿಲಿಯಮ್ಸನ್ ಇಲ್ಲಿ ಹಿಂದುಳಿದಿದ್ದಾರೆ.

ಇದನ್ನೂ ಓದಿ:
ಸುರಕ್ಷಿತವಾಗಿ ಗೂಡು ಸೇರಿದ ಅಸಿಸ್ ಆಟಗಾರರು; ಬಿಸಿಸಿಐ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದೇನು ಗೊತ್ತಾ?