ಆಸ್ಟ್ರೇಲಿಯಾ ಪ್ರವಾಸ: ಕ್ಯಾಪ್ಟನ್ ಕೊಹ್ಲಿ ಮೊದಲೆರಡು ಟೆಸ್ಟ್ಗೆ ಮಾತ್ರವಾ? ಮುಂದಿನ ಕ್ಯಾಪ್ಟನ್ ಯಾರು?
ಕೊರೊನಾ ಸಂಕಷ್ಟದಲ್ಲಿರುವಾಗಲೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲ್ಲಿದ್ದಾರೆ. ಜೊತೆಗೆ ಬಿಸಿಸಿಐ ಸಹ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅಲಭ್ಯರಾಗಬಹುದು ಎಂದು ವರದಿಯಾಗಿದೆ. ನಾಯಕ ಕೊಹ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣದಿಂದಾಗಿ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ಬಿಟ್ಟುಬಿಡಬಹುದು ಎಂದು ಹೇಳಲಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಆಗಸ್ಟ್ನಲ್ಲಿ ತಾವು ತಂದೆ-ತಾಯಿ ಆಗುತ್ತಿರುವುದಾಗಿ ಘೋಷಿಸಿದ್ರು. […]
ಕೊರೊನಾ ಸಂಕಷ್ಟದಲ್ಲಿರುವಾಗಲೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲ್ಲಿದ್ದಾರೆ. ಜೊತೆಗೆ ಬಿಸಿಸಿಐ ಸಹ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸಿದೆ.
ಆದರೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅಲಭ್ಯರಾಗಬಹುದು ಎಂದು ವರದಿಯಾಗಿದೆ. ನಾಯಕ ಕೊಹ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣದಿಂದಾಗಿ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ಬಿಟ್ಟುಬಿಡಬಹುದು ಎಂದು ಹೇಳಲಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಆಗಸ್ಟ್ನಲ್ಲಿ ತಾವು ತಂದೆ-ತಾಯಿ ಆಗುತ್ತಿರುವುದಾಗಿ ಘೋಷಿಸಿದ್ರು. ಹೀಗಾಗಿ ಅನುಷ್ಕಾ ಶರ್ಮಾ ಜನವರಿ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಅಜಿಂಕ್ಯ ರಹಾನೆಗೆ ಭಾರತ ತಂಡದ ಸಾರಥ್ಯ? ನಾಯಕ ಕೊಹ್ಲಿ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗಗೊಳಿಸಿಲ್ಲ. ಆದರೆ ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳ ನಂತರ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕೊಹ್ಲಿ ವಾಪಸಾಗಲು ನಿರ್ಧರಿಸಿದರೆ.. ಅಜಿಂಕ್ಯ ರಹಾನೆ ಭಾರತೀಯ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
Published On - 11:47 am, Mon, 9 November 20