ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್

ಕನ್ಕಶನ್ ಸಬ್​ಸ್ಟಿಟ್ಯೂಟ್ ವಿಷಯ ಚರ್ಚೆಗೊಳಗಾಗಿದೆ. ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಯುಜ್ವೇಂದ್ರ ಚಹಲ್ ಅವರನ್ನು ಕನ್ಕಶನ್ ಸಬ್ ಆಗಿ ಉಪಯೋಗಿಸಿದ್ದನ್ನುಅಸ್ಟ್ರೇಲಿಯನ್ನರು ವಿರೋಧಿಸುತ್ತಿದ್ದಾರೆ. ಆದರೆ ಭಾರತೀಯರು ನಿಯಮದನುಸಾರ ಆಡಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 04, 2020 | 8:52 PM

ತೊಡೆನೋವಿನಿಂದ ಬಳಲುತ್ತಿರುವ ರವೀಂದ್ರ ಜಡೇಜಾ

ಟೀಮ್ ಇಂಡಿಯ ಮೊದಲ ಟಿ20ಐ ಪಂದ್ಯದಲ್ಲಿ ಕನ್ಕಶನ್ ಸಬ್​ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಲ್ ಅವರನ್ನು ಉಪಯೋಗಿಸಿದ್ದು ಭಾರೀ ಚರ್ಚೆಗೊಳಗಾಗಿದೆ. ಇಂದು ನಡೆದ ಪಂದ್ಯದಲ್ಲಿ ಆಸ್ಸೀ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಬೌನ್ಸರೊಂದು ರವೀಂದ್ರ ಜಡೇಜಾ ಅವರ ಹೆಲ್ಮೆಟ್​ಗೆ ಅಪ್ಪಳಿಸಿತು. ಭಾರತೀಯ ಬ್ಯಾಟ್ಸ್​ಮನ್ ಕುಸಿದು ಬಿದ್ದರಾದರೂ ಕೂಡಲೇ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಅವರು ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದ್ದು, ಭಾರತದ ಗೆಲುವಿನಲ್ಲಿ ದೊಡ್ಡ ಕಾಣಿಕೆ ಎನಿಸಿತು. ಹಾಗೆಯೇ ಅವರು ತೊಡೆನೋವಿನಿಂದ ಬಳಲುತ್ತಿದ್ದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಹಾಗಾಗಿ, ಆಸ್ಟ್ರೇಲಿಯ ಬ್ಯಾಟ್ ಮಾಡುವಾಗ ಜಡೇಜಾ ಫೀಲ್ಡ್​ಗೆ ಬರಲಿಲ್ಲ.

ಅವರ ಸ್ಥಾನದಲ್ಲಿ ಮೈದಾನಕ್ಕಿಳಿದ ಯುಜ್ವೇಂದ್ರ ಚಹಲ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ದಕ್ಕಲು ನೆರವಾದರು. ಆದರೆ ಅವರಿಗೆ ಆಡಲು ಅವಕಾಶ ನೀಡಿದ್ದು ಆಸ್ಟ್ರೇಲಿಯನ್ನರಿಗೆ ಅದರಲ್ಲೂ ವಿಶೇಷವಾಗಿ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಸರಿಯೆನಿಸಲಿಲ್ಲ. ಅವರು ಬಹಳ ಹೊತ್ತಿನವರೆಗೆ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರೊಂದಿಗೆ ಬಹಳ ಗಹನವಾಗಿ ವಿಷಯವನ್ನು ಚರ್ಚಿಸಿದ್ದು ಟಿವಿಯಲ್ಲಿ ತೋರಿಸಲಾಯಿತು.

ಲ್ಯಾಂಗರ್, ಬೌಂಡರಿ ಲೈನ್ ಬಳಿ ಬೂನ್ ಅವರೊಂದಿಗೆ ಏನನ್ನು ಚರ್ಚಿಸಿದರು ಎಂದು ಪಂದ್ಯ ಮುಗಿದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಸ್ಟ್ರೇಲಿಯ ಟೀಮಿನ ನಾಯಕ ಆರನ್ ಫಿಂಚ್, ‘‘ಜಡೇಜಾ ಕನ್ಕಶನ್ ಒಳಗಾಗಿದ್ದಾರೆಂದು ಭಾರತೀಯರು ನಮಗೆ ಹೇಳಿದರು, ಅದನ್ನೇ ಲ್ಯಾಂಗರ್ ಚರ್ಚಿಸಿದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೆಡಿಕಲ್ ಎಕ್ಸ್​ಪರ್ಟ್​ನನ್ನು ಪ್ರಶ್ನಿಸುವಂತಿಲ್ಲ’’ ಎಂದರು.

ಹಾಗೆಯೇ ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದಾಗ ಫಿಂಚ್, ‘‘ಕೊನೆಯ ಓವರ್​ಗಳಲ್ಲಿ ಜಾಸ್ತಿ ರನ್​ಗಳನ್ನು ಸೋರಿಸಿದ್ದು ನಮಗೆ ಮಾರಕವಾಯಿತು. ಹಾಗೆಯೇ ನಾವು ಬ್ಯಾಟ್​ ಮಾಡುವಾಗ ಮಧ್ಯದ ಓವರ್​ಗಳ ಹಂತದಲ್ಲಿ ಮತ್ತು ಕೊನೆಯಲ್ಲಿ ನಾವು ಹೆಚ್ಚು ಬೌಂಡರಿಗಳನ್ನು ಬಾರಿಸಲಿಲ್ಲ,’’ ಎಂದರು.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ