AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ 16 ವಿಕೆಟ್ ಕಳೆದುಕೊಂಡ ವೀಂಡೀಸ್​ಗೆ ಇನ್ನಿಂಗ್ಸ್ ಸೋಲಿನ ಭೀತಿ!

ಮೂರನೇ ದಿನದಾಟಲ್ಲಿ ಮೋಡ ಮುಸುಕಿದ ವಾತಾವರಣದ ಸಂಪೂರ್ಣ ಲಾಭ ಪಡೆದ ನ್ಯೂಜಿಲೆಂಡ್ ಬೌಲರ್​ಗಳು ಪ್ರವಾಸಿ ವೆಸ್ಟ್ ಇಂಡೀಸ್ ಟೀಮಿನ 16 ವಿಕೆಟ್​ಗಳನ್ನು ಕಬಳಿಸಿ ತಮ್ಮ ಟೀಮನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಈಗಾಗಲೇ 6 ವಿಕೆಟ್ ಕಳೆದುಕೊಂಡಿರುವ ವಿಂಡೀಸ್ ಇನ್ನಿಂಗ್ಸ್​ ಸೋಲಿನಿಂದ ತಪ್ಪಿಸಿಕೊಳ್ಳಲು ಇನ್ನೂ 185 ರನ್ ಗಳಿಸಬೇಕಿದೆ.

ಒಂದೇ ದಿನ 16 ವಿಕೆಟ್ ಕಳೆದುಕೊಂಡ ವೀಂಡೀಸ್​ಗೆ ಇನ್ನಿಂಗ್ಸ್ ಸೋಲಿನ ಭೀತಿ!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 05, 2020 | 6:20 PM

Share

ಜರ್ಮೈನ್ ಬ್ಲ್ಯಾಕ್​ವುಡ್​ ಮತ್ತು ಅಲ್ಜರಿ ಜೊಸೆಫ್

70 ಮತ್ತು 80 ರ ದಶಕದಲ್ಲಿ ಕ್ರಿಕೆಟ್ ವಿಶ್ವವನ್ನು ಭೀತಿಗೊಳಪಡಿಸಿದ್ದ ವೆಸ್ಟ್ ಇಂಡೀಸ್, ನಂತರದ ದಿನಗಳಲ್ಲಿ ಬ್ರಿಯಾನ್ ಲಾರಾ, ಕರ್ಟ್ಲೀ ಆ್ಯಂಬ್ರೋಸ್, ಕರ್ಟ್ನೀ ವಾಲ್ಷ್, ಕ್ರಿಸ್ ಗೇಲ್, ಶಿವನಾರಾಯನ್ ಚಂದ್ರಪಾಲ್, ಮುಂತಾದ ಸೂಪರ್ ಸ್ಟಾರ್ ಬ್ಯಾಟ್ಸ್​ಮನ್ ಮತ್ತು ಬೌಲರ್​ಗಳನ್ನು ಸೃಷ್ಟಿಮಾಡಿದರೂ ಅದರ ಗತವೈಭವ ಪುನಃ ನೋಡಸಿಗುತ್ತಿಲ್ಲ. ಈಗಿನ ಟೀಮನ್ನು ಸೋಲಿಸುವುದು ದುರ್ಬಲ ತಂಡಗಳಿಗೂ ಸುಲಭವಾಗಿದೆ.

ಇದನ್ನ ಯಾಕೆ ಹೇಳಬೇಕಾಗಿದೆಯೆಂದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ತಂಡ ಹ್ಯಾಮಿಲ್ಟನ್​ನ ಸ್ನೆಡೆನ್ ಪಾರ್ಕ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯರನ್ನು ಎದುರಿಸುತ್ತಿದೆ. ಪಂದ್ಯದ ಮೂರನೇ ದಿನವಾದ ಇಂದು ವಿಂಡೀಸ್ 16 ವಿಕೆಟ್​ಗಳನ್ನು ಕಳೆದುಕೊಂಡಿದೆ. ಹೌದು ನೀವು ಓದಿದ್ದು ಸರಿ; ವಿಂಡೀಸ್​ನ ಕೆಳ ಕ್ರಮಾಂಕದ ಬ್ಯಾಟ್ಸ್​ಮನ್ ಜರ್ಮೈನ್ ಬ್ಲ್ಯಾಕ್​ವುಡ್ (ಅಜೇಯ 80, 9X4 2×6) ವೇಗದ ಬೌಲರ್ ಅಲ್ಜರಿ ಜೊಸೆಫ್ (ಅಜೇಯ 59 9×4 1×6) ಮುರಿಯದ 7 ನೇ ವಿಕೆಟ್​​ಗೆ ಅವರು 110 ರನ್​ಗಳನ್ನು ಸೇರಿಸದೆ ಹೋಗಿದ್ದರೆ ಮೊದಲ ಟೆಸ್ಟ್ ಇವತ್ತೇ ಮುಗಿದುಹೋಗುತ್ತಿತ್ತು.

ಹಾಗೆ ನೋಡಿದರೆ, ಸ್ನೆಡೆನ್ ಪಾರ್ಕ್​ನಲ್ಲಿರುವ ಪಿಚ್ ಬೌಲರ್​ಗಳ ಗಣಿಪ್ರದೇಶವೇನೂ ಅಲ್ಲ. ಇದೇ ಪಿಚ್ ಮೇಲೆ ಮೊದಲು ಬ್ಯಾಟ್​ ಮಾಡಿದ ಅತಿಥೇಯರು ಕೇವಲ ಒಂದೂವರೆಗಳ ದಿನ ಆಟದಲ್ಲಿ 7/519 ಬೃಹತ್ ಮೊತ್ತ  ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ ತಮ್ಮ ಕರೀಯರ್-ಬೆಸ್ಟ್ 251 ರನ್ ಗಳಿಸಿ ಔಟಾದರೆ, ಓಪನರ್ ಟಾಮ್ ಲಾಥಮ್ 86 ರನ್ ಗಳಿಸಿದರು.

ಕೇನ್ ವಿಲಿಯಮ್ಸನ್

ಎರಡನೆ ದಿನದಾಟದಲ್ಲಿ ಅಂದರೆ ನಾಯಕ ವಿಲಿಯಮ್ಸನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಂತರ ವಿಂಡೀಸ್ ಆರಂಭಿಕ ಬ್ಯಾಟ್ಸ್​ಮನ್​ಗಳು ಯಾವುದೆ ಅಳುಕಿಲ್ಲದೆ, ಆತ್ಮವಿಶ್ವಾಸದಿಂದ ಕಿವಿ ವೇಗದ ಬೌಲರ್​ಗಳನ್ನು ಎದುರಿಸಿದರಲ್ಲದೆ ದಿನದಾಟ ಕೊನೆಗೊಳ್ಳುವವರೆಗೆ ಬೇರ್ಪಡಲಿಲ್ಲ. 24 ಓವರ್​ಗಳನ್ನು ಅವರು ನಿರಾತಂಕದಿಂದ ಎದುರಿಸಿ ಮೊದಲ ವಿಕೆಟ್​ಗೆ 53 ರನ್ ಸೇರಿಸಿದರು.

ಆದರೆ, ಮೂರನೆ ದಿನ ಮೋಡ ಮುಸುಕಿದ ವಾತಾವರಣದ ಸಂಫೂರ್ಣ ಲಾಭ ಪಡೆದ ನ್ಯೂಜಿಲೆಂಡ್ ವೇಗದ ಬೌಲರ್​ಗಳು ಪಟಪಟನೆ ಪ್ರವಾಸಿ ತಂಡದ ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡಿದರು. ವಿಂಡೀಸ್ ಕೇವಲ 138ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಓಪನರ್ಸ್ ಕ್ರೇಗ್ ಬ್ರಾಥ್​ವೈಟ್ 21, ಮತ್ತು ಜಾನ್ ಕ್ಯಾಂಬೆಲ್, ಹಾಗೂ ಕೆಳ ಕ್ರಮಾಂಕದ ಆಟಗಾರರಾದ ಬ್ಲ್ಯಾಕ್​ವುಡ್ 23 ಮತ್ತು ನಾಯಕ ಜೇಸನ್ ಹೋಲ್ಡರ್ 25 ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಬ್ಯಾಟ್ಸ್​ಮನ್​ಗಳು ಕ್ರೀಸಿಗೆ ಭೇಟಿ ನೀಡಿ ಪೆವಿಲಿಯನ್​ಗೆ ವಾಪಸ್ಸಾದರು. ಅತಿಥೇಯರ ಪರ ಟಿಮ್ ಸೌಥಿ 4/35, ಕೈಲ್ ಜೇಮಿಸನ್ 2/33, ನೀಲ್ ವ್ಯಾಗ್ನರ್ 2/33 ಮತ್ತು ಟ್ರೆಂಟ್ ಬೌಲ್ಟ್ 1/30 ಬೌಲಿಂಗ್​ನಲ್ಲಿ ಮೆರೆದರು.

381 ರನ್​ಗಳಿಂದ ಹಿಂದುಳಿದ ವಿಂಡೀಸ್ ಮೇಲೆ ವಿಲಿಯಮ್ಸನ್ ಫಾಲೋ-ಆನ್ ಹೇರಿದರು, ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಪ್ರವಾಸಿಗರ ಪ್ರದರ್ಶನ ಇನ್ನೂ ಕಳಪೆಯಾಗಿತ್ತ್ತು. 89 ರನ್​ಗಳಾಗಿವುಷ್ಟರಲ್ಲಿ ಅದರ 6 ಪ್ರಮುಖ ಬ್ಯಾಟ್ಸ್​ಮನ್​ಗಳು ಔಟಾದರು. ಆದರೆ 7 ನೇ ವಿಕೆಟ್​ಗೆ ಜೊತೆಗೂಡಿದ ಬ್ಲ್ಯಾಕ್​ವುಡ್ ಮತ್ತು ಜೊಸೆಫ್ ಆಕ್ರಮಣಕಾರಿ ಆಟವಾಡತೊಡಗಿ ಕೇವಲ 20 ಓವರ್​ಗಳಲ್ಲಿ 110 ರನ್ ಸೇರಿಸಿದರಲ್ಲದೆ ಪಂದ್ಯವನ್ನು ನಾಲ್ಕನೆ ದಿನಕ್ಕೆ ಒಯ್ದರು. ಇಂದಿನ ಆಟ ಕೊನೆಗೊಂಡಾಗ ವಿಂಡೀಸ್ ಸ್ಕೋರ್ 196/6 ಆಗಿತ್ತು.

ಇನ್ನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್​ಗೆ ಇನ್ನೂ 185 ರನ್​ಗಳ ಅವಶ್ಯಕತೆಯಿದೆ. ನಾಳೆ ಭೋಜನ ವಿರಾಮಕ್ಕೆ ಮೊದಲು ಅಥವಾ ಅದಕ್ಕೆ ಮೊದಲೇ ಟೆಸ್ಟ್​ ಮುಗಿದರೆ ಆಶ್ಚರ್ಯಪಡಬೇಕಿಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ಸೌಥೀ, ಬೌಲ್ಟ್, ಜೇಮಿಸನ್, ಡೆರಿಲ್ ಮಿಚೆಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದರೆ, ವ್ಯಾಗ್ನರ್ 2 ವಿಕೆಟ್ ಕಬಳಿಸಿದ್ದಾರೆ.

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ