ಐಪಿಎಲ್​ ಆರಂಭವಾಗುವ ಮೊದಲು ಇಂಗ್ಲೆಂಡ್​ನವರಿಗೆ ನಾವು ಬ್ಲಡೀ ಇಂಡಿಯನ್ಸ್, ಆದರೀಗ ಅವರು ನಮ್ಮ ಬೂಟು ನೆಕ್ಕುತ್ತಿದ್ದಾರೆ: ಫರೂಕ್ ಇಂಜಿನೀಯರ್

| Updated By: Digi Tech Desk

Updated on: Jun 10, 2021 | 4:37 PM

ಸುದೀರ್ಘ ಸಮಯದವರಗೆ ಲ್ಯಾಂಕಾಷೈರ್ ಕೌಂಟಿ ಕ್ಲವ್ ಪರ ಆಡಿದ ಇಂಜಿನೀಯರ್ ಅವರು, ಒಬ್ಬ ಆಟಗಾರ ಹಾಗೆ ಕಾಮೆಂಟ್​​ಗಳನ್ನು ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಅಂಥವರಿಗೆ ಶಿಕ್ಷೆಯಾಗಲೇಬೇಕು. ಅಂತ ಹೇಳಿದ್ದಾರೆ.

ಐಪಿಎಲ್​ ಆರಂಭವಾಗುವ ಮೊದಲು ಇಂಗ್ಲೆಂಡ್​ನವರಿಗೆ ನಾವು ಬ್ಲಡೀ ಇಂಡಿಯನ್ಸ್, ಆದರೀಗ ಅವರು ನಮ್ಮ ಬೂಟು ನೆಕ್ಕುತ್ತಿದ್ದಾರೆ: ಫರೂಕ್ ಇಂಜಿನೀಯರ್
ಫರೂಕ್ ಇಂಜಿನೀಯರ್
Follow us on

ಎಪ್ಪತ್ತರ ದಶಕದಲ್ಲಿ ಭಾರತದ ಆರಂಭ ಆಟಗಾರ ಮತ್ತು ವಿಕೆಟ್​ ಕೀಪರ್ ಆಗಿದ್ದ ಫರೂಕ್ ಇಂಜಿನೀಯರ್ ಕ್ರಿಕೆಟ್​​ ಜೊತೆ ತಮ್ಮ ನೇರ ಮಾತಿಗೆ ಹೆಸರಾದವರು. ಬದುಕನ್ನೆಲ್ಲ ಇಂಗ್ಲೆಂಡ್​ನಲ್ಲೇ ಕಳೆದಿರುವ ಅವರು ಅಲ್ಲಿನ ಸರ್ಕಾರ, ಅದರ ಪ್ರತಿನಿಧಿಗಳ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಟೀಕೆಗಳನ್ನು ಮಾಡುತ್ತಾರೆ. ಬುಧವಾರದಂದು ಅವರು ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕುರಿತು ಮಾಡಿರುವ ಕಾಮೆಂಟನ್ನೇ ಗಮನಿಸಿ. ಈಗಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿ ಮೊದಲಯ ಟೆಸ್ಟ್​ನಲ್ಲಿ ಸಾಂಪ್ರದಾಯಿಕ ಕ್ರಿಕೆಟ್ ಆವೃತ್ತಿಗೆ ಪದಾರ್ಪಣೆ ಮಾಡಿರುವ ವೇಗದ ಬೌಲರ್ ಒಲ್ಲೀ ರಾಬಿನ್ಸನ್ ಕೆಲ ವರ್ಷಗಳ ಹಿಂದೆ ಜನಾಂಗೀಯ ನಿಂದನೆ ಮಾಡಿದ್ದು ಬೆಳಕಿಗೆ ಬಂದಿರುವುದರಿಂದ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ (ಈಸಿಬಿ) ಅವರನ್ನು ಸಸ್ಪೆಂಡ್​ ಮಾಡಿದೆ. ಆದರೆ. ಬೊರಿಸ್ ಜಾನ್ಸನ್ ಮಾತ್ರ ರಾಬಿನ್ಸನ್ ಪರ ವಹಿಸಿಕೊಂಡು ಮಾತಾಡಿರುವುದು ಇಂಜಿನೀಯರ್​ ಅವರನ್ನು ಕೆರಳಿಸಿದೆ.

‘ಜಾನ್ಸನ್ ಹೇಳಿರುವುದನ್ನು ನಾನು ಪತ್ರಿಕೆಗಳಲ್ಲಿ ಓದಿದೆ. ರಾಬಿನ್ಸನ್ ಪರ ವಹಿಸಿಕೊಂಡು ಅವರು ಮಾತಾಡಿರುವದು ನನ್ನಲ್ಲಿ ಹೇವರಿಕೆ ಹುಟ್ಟಿಸುತ್ತಿದೆ. ರಾಬಿನ್ಸನ್ ಅವರಿಗೆ ಶಿಕ್ಷೆಯಾಗಲೇಬೇಕು. ಅವರನ್ನು ಸಸ್ಪೆಂಡ್​ ಮಾಡುವ ಮೂಲಕ ಈಸಿಬಿ ಸರಿಯಾದ ಕ್ರಮ ತೆಗೆದುಕೊಂಡಿದೆ. ಅವರು ತಪ್ಪೆಸಗಿದ್ದಾರೆ ಮತ್ತು ಅದಕ್ಕೆ ಶಿಕ್ಷೆ ಅನುಭವಿಸಲೇಬೇಕು. ದಂಡನೆ ಅವರನ್ನು ಮತ್ತೊಮ್ಮೆ ಇಂಥ ತಪ್ಪೆಸಗದಂತೆ ಎಚ್ಚರಿಸುತ್ತದೆ,’ ಎಂದು ಮ್ಯಾಂಚೆಸ್ಟರ್​ನಿಂದ ಭಾರತದ ಪತ್ರಿಕೆಯೊಂದರ ಜೊತೆ ಮಾತಾಡುತ್ತಾ ಇಂಜಿನೀಯರ್ ಹೇಳಿದ್ದಾರೆ.

ಸುಮಾರು ಒಂದು ದಶಕದ ಹಿಂದೆ ರಾಬಿನ್ಸನ್ ತನ್ನ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಬಹಳ ಕೆಟ್ಟದಾಗಿ ಕಾಮೆಂಟ್​ಗಳನ್ನು ಮಾಡಿದ್ದರು. ಅವರ ಒಂದು ಟ್ವೀಟ್​, ‘ನನ್ನ ಹೊಸ ಮುಸ್ಲಿಂ ಸ್ನೇಹಿತ ಒಂದು ಬಾಂಬ್ ಆಗಿದ್ದಾನೆ: ಏಷ್ಯಾದ ಜನ ಈ ತೆರನಾದ ಸ್ಮೈಲಿಗಳನ್ನು ಹಾಕಿದರೆ) #racist; ಮತ್ತು ನಾನು ಪ್ರಯಾಣಿಸುತ್ತಿರುವ ಟ್ರೇನ್​ನಲ್ಲಿ ನನ್ನ ಪಕ್ಕ ಕೂತಿರುವ ವ್ಯಕ್ತಿಯು ಖಂಡಿತವಾಗಿಯೂ ಎಬೋಲಾ ಸೋಂಕಿನಿಂದ ಪೀಡಿತನಾಗಿದ್ದಾನೆ.’ ಅಂತ ಬರೆದಿದ್ದರು.

ಒಲ್ಲೀ ರಾಬಿನ್ಸನ್

ಸುದೀರ್ಘ ಸಮಯದವರಗೆ ಲ್ಯಾಂಕಾಷೈರ್ ಕೌಂಟಿ ಕ್ಲವ್ ಪರ ಆಡಿದ ಇಂಜಿನೀಯರ್ ಅವರು, ಒಬ್ಬ ಆಟಗಾರ ಹಾಗೆ ಕಾಮೆಂಟ್​​ಗಳನ್ನು ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಅಂಥವರಿಗೆ ಶಿಕ್ಷೆಯಾಗಲೇಬೇಕು. ಅಂತ ಹೇಳಿದ್ದಾರೆ.

‘ಆ ಟ್ವೀಟ್​ಗಳನ್ನು ಮಾಡಿದಾಗ ರಾಬಿನ್ಸನ್ 18 ವರ್ಷದ ಯುವಕನಾಗಿದ್ದ, ಈ ವಯಸ್ಸಿನಲ್ಲೇ ಜವಾಬ್ದಾರಿಗಳ ಬಗ್ಗೆ ಅರಿವು ಮೂಡುತ್ತದೆ. ಕ್ರಿಕೆಟ್ ಆಟಗಾರರು ಅಂಥ ತಪ್ಪುಗಳನ್ನು ಮಾಡಿಯೂ ಬಚಾವಾದರೆ ಅದಕ್ಕಿಂತ ಕೆಟ್ಟ ವಿಷಯ ಮತ್ತೊಂದಿಲ್ಲ. ಜನ ನಮ್ಮ ವಿರುದ್ಧ (ಏಷ್ಯನ್ ಜನರು) ಮನಸ್ಸಿಗೆ ಬಂದಂತೆ ಮಾತಾಡುತ್ತಾರೆ. ಇದನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ಇಂಥ ಒಂದು ಹಿನ್ನೆಲೆಯಲ್ಲಿ ಏಷ್ಯನ್ನರ ಕುರಿತು ಹಾಗೆ ಕಾಮೆಂಟ್​ಗಳನ್ನು ಮಾಡುವುದು ಅವರು ಬೆಳೆದು ಬಂದಿರುವ ಸಂಸ್ಕೃತಿಯನ್ನು ಬಿಂಬಿಸುತ್ತದೆ,’ ಎಂದು ಭಾರತದ ಪರ 46 ಟೆಸ್ಟ್​ಗಳನ್ನಾಡಿದ ಇಂಜಿನೀಯರ್ ಹೇಳಿದ್ದಾರೆ.

‘ಅಂಥ ಆಟಗಾರರ ಮೇಲೆ ಜೀವಾವಧಿ ನಿಷೇಧ ಹೇರಬೇಕು ಅಂತ ನಾನು ಹೇಳುತ್ತಿಲ್ಲ. ಆದರೆ ಅವರಿಗೆ ಹೊರೆ ಎನಿಸುವಷ್ಟು ದಂಡವನ್ನು ವಿಧಿಸಬೇಕು ಮತ್ತು ಒಂದು ಟೆಸ್ಟ್​ ಸರಣಿಯಿಂದ ಇಲ್ಲವೇ ಪ್ರಥಮ ದರ್ಜೆ ಕ್ರಿಕೆಟ್​ನಿಂದ ಸ್ವಲ್ಪ ಅವಧಿಯವರಗೆ ಸಸ್ಪೆಂಡ್​ ಮಾಡಬೇಕು. ಅವರಿಗೆ ರಿಯಾಯಿತಿ ತೋರುವ ಅಗತ್ಯವಿಲ್ಲ.’ ಎಂದು ಇಂಜಿನೀಯರ್ ಹೇಳಿದ್ದಾರೆ.

‘ಮೊದಲ ಬಾರಿಗೆ ನಾನು ಕೌಂಟಿ ಕ್ರಿಕೆಟ್​ ಆಡಲು ಬಂದಾಗ ಇಲ್ಲಿನ ಜನರ ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಗೋಚರಿಸಿದ್ದವು, ಇವನು ಭಾರತೀಯನೇ? ಲ್ಯಾಂಕಾಷೈರ್ ಕೌಂಟಿ ಸೇರಿದಾಗ ನಾನು ಹಲವಾರು ಬಾರಿ ಜನಾಂಗೀಯ ನಿಂದನೆಗೊಳಗಾಗಿದ್ದೆ. ಕಾಮೆಂಟ್​ಗಳು ವೈಯಕ್ತಿಕವಾಗಿರದಿದ್ದರೂ ನಾನು ಭಾರತೀಯನೆಂಬ ಕಾರಣಕ್ಕೆ ಅವುಗಳನ್ನು ಮಾಡಲಾಗುತಿತ್ತು. ನನ್ನ ಇಂಗ್ಲಿಷ್ ಉಚ್ಚಾರಣೆಯನ್ನು ಗೇಲಿ ಮಾಡಲಾಗುತಿತ್ತು. ಆದರೆ ನನ್ನ ಇಂಗ್ಲಿಷ್ ಬಹಳಷ್ಟು ಇಂಗ್ಲಿಷರಿಗಿಂತ ಚೆನ್ನಾಗಿತ್ತು. ನನ್ನೊಂದಿಗೆ ಪಂಗಾ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಅನ್ನೋದು ಅವರಿಗೆ ಬೇಗ ಅರ್ಥವಾಯಿತು. ಅವರು ಏನದರೂ ಹೇಳಿದರೆ ನಾನು ಕೂಡಲೇ ಅದನ್ನು ವಾಪಸ್ಸು ನೀಡುತ್ತಿದೆ. ಅಷ್ಟು ಮಾತ್ರವಲ್ಲ ಫೀಲ್ಡ್​ನಲ್ಲೂ ಬ್ಯಾಟಿಂಗ್ ಮತ್ತು ವಿಕೆಟ್​ಕೀಪಿಂಗ್​ನಲ್ಲಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೆ. ನಾನು ಭಾರತದ ಯೋಗ್ಯ ರಾಯಭಾರಿ ಎನ್ನುವುದನ್ನು ಸಾಬೀತು ಮಾಡಿದ್ದ್ದು ಹೆಮ್ಮೆಯ ವಿಷಯವಾಗಿದೆ.’ ಎಂದು ಇಂಜಿನೀಯರ್ ಹೇಳಿದ್ದಾರೆ.

ಆದರೆ ಬೇರೆ ಭಾರತೀಯರು ಬೈಗುಳಗಳನ್ನು ಕೇಳಿಸಿಕೊಳ್ಳುವುದು ನಿಲ್ಲಲಿಲ್ಲ ಎಂದು ಅವರು ಹೇಳುತ್ತಾರೆ. ಸೈರಸ್ ಬರೂಚಾ ಅವರೊಂದಿಗೆ ಇತ್ತೀಚಿನ ಪಾಡ್​ಕಾಸ್ಟ್​ ಒಂದರಲ್ಲಿ ಇಂಜಿನೀಯರ್, ವಿಖ್ಯಾತ ಇಂಗ್ಲಿಷ್ ಓಪನರ್ ಜೆಫ್ರಿ ಬಾಯ್ಕಾಟ್​ ಅಗಾಗ, ‘ಬ್ಲಡೀ ಇಂಡಿಯನ್ಸ್’ ಅಂತ ಹೇಳುವುದನ್ನು ತಾವು ಕೇಳಿಸಿಕೊಂಡಿದ್ದಾಗಿ ಹೇಳಿದ್ದರು.

‘ಬಾಯ್ಕಾಟ್​ ಕಾಮೆಂಟ್​ ಬಗ್ಗೆ ಹೇಳುವುದಾದರೆ. ಓಕೆ, ಅದು ಕಾಮನ್ ವಿಷಯವಾಗಿತ್ತು. ಕೇವಲ ಅವರೊಬ್ಬರ ಬಗ್ಗೆ ಮಾತ್ರ ದೂರುವುದು ನನಗಿಷ್ಟವಿಲ್ಲ. ಉಳಿದವರು ಹಾಗೆ ಹೇಳದಿದ್ದರೂ ಅದರ ಬಗ್ಗೆ ಯೋಚಿಸುತ್ತಿದ್ದರು. ಬಾಯ್ಕಾಟ್​ ಒಬ್ಬರೇ ಅಲ್ಲ, ಅವರೊಂದಿಗೆ ಬೇರೆಯವರೂ, ಅಸ್ಟ್ರೇಲಿಯನ್ನರು ಸಹ ನಮ್ಮ ಬಗ್ಗೆ ಕಾಮೆಂಟ್​ ಮಾಡುತ್ತಿದ್ದರು.’ ಎಂದು ಅವರು ಹೇಳಿದ್ದಾರೆ.

ಆದರೆ, ಐಪಿಎಲ್ ಶುರವಾದ ನಂತರ ಸನ್ನಿವೇಶ ಬದಲಾಗಿದೆ ಎಂದು ಇಂಜಿನೀಯರ್ ಹೇಳುತ್ತಾರೆ.
‘ಕೇವಲ ಕೆಲವೇ ವರ್ಷಗಳ ಹಿಂದೆ ನಾವು ಅವರಿಗೆ ಬ್ಲಡೀ ಇಂಡಿಯನ್ಸ್ ಆಗಿದ್ದೆವು. ಆದರೆ ಐಪಿಎಲ್ ಆರಂಭವಾದ ನಂತರ ಅವರು ನಮ್ಮ ಹಿಂಭಾಗಗಳನ್ನು ನೆಕ್ಕುತ್ತಿದ್ದಾರೆ. ಕೇವಲ ಹಣಕ್ಕಾಗಿ ಅವರು ನಮ್ಮ ಬೂಟುಗಳನ್ನು ನೆಕ್ಕಲಾರಂಭಿಸಿದ್ದು ನನಲ್ಲಿ ಆಶ್ಚರ್ಯ ಮೂಡಿಸುತ್ತದೆ. ಆದರೆ ನನ್ನಂಥ                                  ಕೆಲವರಿಗೆ ಅವರ ನಿಜವಾದ ಬಣ್ಣ ಏನು ಅನ್ನೋದು ಚೆನ್ನಾಗಿ ಗೊತ್ತು. ಅವರೀಗ ತಮ್ಮ ಮಾತಿನ ಧಾಟಿಯನ್ನು ಇದ್ದಕ್ಕಿದ್ದಂತೆ ಬದಲಾಯಿಸಿದ್ದಾರೆ. ಆಡುವುದಕ್ಕಾಗಿ ಅಲ್ಲದಿದ್ದರೂ, ಟಿವಿಗಳಿಗಾಗಿ ಕೆಲಸ ಮಾಡಿ ದುಡ್ಡು ಸಂಪಾದಿಸಲು ಅವರಿಗೆ ಭಾರತ ಯೋಗ್ಯವಾದ ರಾಷ್ಟ್ರವೆನಿಸಿದೆ.’ ಎಂದು ಇಂಜಿನೀಯರ್ ಹೇಳಿದ್ದಾರೆ.

ಇದನ್ನೂ ಓದಿ:2011 Cricket World Cup: ಭಾರತ ವಿಶ್ವಕಪ್​ ಗೆದ್ದು ಇಂದಿಗೆ 10 ವರ್ಷ.. ಒಬ್ಬ ಕ್ಯಾನ್ಸರ್​ ಪೀಡಿತ, ಒಬ್ಬ ಶತಕ ವಂಚಿತ, ಒಬ್ಬ ಸಮರ್ಥ ನಾಯಕನ ಆಟವನ್ನು ನಾವ್ಯಾರು ಮರೆಯುವಂತಿಲ್ಲ! 

Published On - 5:02 pm, Wed, 9 June 21