ವಿಂಬಲ್ಡನ್ 2022 (Wimbledon 2022)ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯವಾಗಿದೆ. ಕಜಕಿಸ್ತಾನದ ಎಲೆನಾ ರೈಬಾಕಿನಾ (Elena Rybakina) ಫೈನಲ್‌ನಲ್ಲಿ ಓನ್ಸ್ ಜೆಬುರ್ (Ons Jebur) ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು. ಶನಿವಾರ ಜುಲೈ 9 ರಂದು, ಸೆಂಟರ್ ಕೋರ್ಟ್‌ನಲ್ಲಿ ಐತಿಹಾಸಿಕ ಫೈನಲ್ ಪಂದ್ಯವನ್ನು ಆಡಲಾಯಿತು, ಇದರಲ್ಲಿ ಈ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ರಷ್ಯಾ ಮೂಲದ ಕಝಕ್ ಆಟಗಾರ್ತಿ ರೈಬಾಕಿನಾ ತನ್ನ ದೇಶದ ಮೊದಲ ಮಹಿಳಾ ಆಟಗಾರ್ತಿಯಾಗಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದರೆ, ಮತ್ತೊಂದೆಡೆ, ಟುನೀಶಿಯಾದ ಓನ್ಸ್ ಅವರು ಆಫ್ರಿಕಾ ಮತ್ತು ಅರಬ್ ಪ್ರದೇಶದಾದ್ಯಂತ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಮಹಿಳಾ ಆಟಗಾರ್ತಿ ಕೂಡ ಆಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಯಾರೇ ಗೆದ್ದಿದ್ದರು ಅವರು ಇತಿಹಾಸ ನಿರ್ಮಿಸುತ್ತಿದ್ದರು. ಈಗ ಈ ಸಾಧನೆ ಎಲೆನಾ ಖಾತೆಗೆ ಬಂದಿದ್ದು, ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಅಮೋಘ ಕಮ್ ಬ್ಯಾಕ್ ಮಾಡಿ ಗೆಲುವು ಸಾಧಿಸಿದ್ದಾರೆ.
ಮೊದಲ ಸೆಟ್ ಸೋತ ನಂತರ ವಾಪಸ್
2017 ರಿಂದ ಸತತ ಐದನೇ ವರ್ಷ ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನ ಹೊಸ ಚಾಂಪಿಯನ್ ಆಗಿದ್ದಾರೆ. 2018 ರಿಂದ ಕಜಕಿಸ್ತಾನ್ ಪರ ಆಡುತ್ತಿರುವ ರೈಬಾಕಿನಾ ಆರಂಭದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಮೂರನೇ ಶ್ರೇಯಾಂಕದ ಓನ್ಸ್ ಮೊದಲ ಸೆಟ್‌ನಲ್ಲಿ ರೈಬಾಕಿನಾ ಅವರನ್ನು 6-3 ರಿಂದ ಸುಲಭವಾಗಿ ಹಿಂದಿಕ್ಕಿದರು. ಆದಾಗ್ಯೂ, ಈ ಸೆಟ್‌ನ ಸೋಲು ರೈಬಾಕಿನಾಗೆ ಹೊಸ ಹುರುಪು ನೀಡಿತು ಮತ್ತು 17 ನೇ ಶ್ರೇಯಾಂಕಿತ ಆಟಗಾರ್ತಿ ಮುಂದಿನ ಎರಡು ಸೆಟ್‌ಗಳಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ 3-6, 6-2, 6-2 ರಲ್ಲಿ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಗೆದ್ದರು.
ಮಾಸ್ಕೋದಲ್ಲಿ ಜನಿಸಿದ ರೈಬಾಕಿನಾ ಅವರು ತಮ್ಮ ಸರ್ವ್ ಮತ್ತು ಶಕ್ತಿಶಾಲಿ ಫೋರ್‌ಹ್ಯಾಂಡ್‌ಗಳನ್ನು ಚೆನ್ನಾಗಿ ಬಳಸಿಕೊಂಡರು. ಈ ಮೂಲಕ ಜಬರ್ ಅವರ ಸತತ 12 ಪಂದ್ಯಗಳ ಗೆಲುವಿನ ಸರಣಿಯನ್ನು ರೈಬಾಕಿನಾ ಮುರಿದರು.
ಅದ್ಭುತ ಆಟ
ಇದು 1962 ರ ನಂತರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಮೊದಲ ಮಹಿಳಾ ಪ್ರಶಸ್ತಿ ಪಂದ್ಯವಾಗಿದ್ದು, ಇದರಲ್ಲಿ ಇಬ್ಬರೂ ಆಟಗಾರ್ತಿಯರು ತಮ್ಮ ಮೊದಲ ಪ್ರಮುಖ ಫೈನಲ್ ತಲುಪಿದರು. ರೈಬಕಿನಾ ಅವರ ಶ್ರೇಯಾಂಕವು 23 ಆಗಿದೆ. 1975 ರಲ್ಲಿ WTA ಕಂಪ್ಯೂಟರ್ ಶ್ರೇಯಾಂಕಗಳನ್ನು ಪರಿಚಯಿಸಿದಾಗಿನಿಂದ, ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಏಕೈಕ ಮಹಿಳಾ ಆಟಗಾರ್ತಿ ರೈಬಾಕಿನಾಗಿಂತ ಕಡಿಮೆ ಶ್ರೇಯಾಂಕವನ್ನು ಹೊಂದಿದ್ದಾರೆ. ಅದರ ಕೀರ್ತಿ, 2007 ರಲ್ಲಿ 31 ನೇ ಸ್ಥಾನದಲ್ಲಿದ್ದು, ಈ ಪ್ರಶಸ್ತಿಯನ್ನು ಗೆದ್ದಿದ್ದ ವೀನಸ್ ವಿಲಿಯಮ್ಸ್ಗೆ ಸಲ್ಲುತ್ತದೆ.
Published On - 10:36 pm, Sat, 9 July 22