ವಿಂಬಲ್ಡನ್ 2022: ಎಂಟನೇ ಬಾರಿ ಫೈನಲ್​ಗೇರಿದ ಜೊಕೊವಿಕ್: ನಿಕ್‌ ಕಿರ್ಗಿಯೋಸ್‌ ಎದುರಾಳಿ

Wimbledon 2022: ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ವಾಕ್‌ ಓವರ್‌ ಪಡೆದು ಫೈನಲ್‌ ಪ್ರವೇಶಿಸಿದರು. ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ನೊವಾಕ್‌ ಜೊಕೊವಿಕ್‌ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

ವಿಂಬಲ್ಡನ್ 2022: ಎಂಟನೇ ಬಾರಿ ಫೈನಲ್​ಗೇರಿದ ಜೊಕೊವಿಕ್: ನಿಕ್‌ ಕಿರ್ಗಿಯೋಸ್‌ ಎದುರಾಳಿ
Novak Djokovic and Nick Kyrgios
Follow us
TV9 Web
| Updated By: Vinay Bhat

Updated on:Jul 09, 2022 | 9:37 AM

22 ಬಾರಿ ಟೆನಿಸ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಸ್ಪ್ಯಾನಿಷ್ ಸ್ಟಾರ್ ಆಟಗಾರ ರಾಫೆಲ್ ನಡಾಲ್ (Rafael Nadal) ವಿಂಬಲ್ಡನ್ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇವರ ಎದುರಾಳಿ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ವಾಕ್‌ ಓವರ್‌ ಪಡೆದು ಫೈನಲ್‌ ಪ್ರವೇಶಿಸಿದರು. ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ನೊವಾಕ್‌ ಜೊಕೊವಿಕ್‌ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ. ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ (Novak Djokovic) ಅವರು ಎಂಟನೇ ಬಾರಿಗೆ ವಿಂಬಲ್ಡನ್ (Wimbledon 2022) ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಬ್ರಿಟನ್‍ನ ಕೆಮರೂನ್ ನೊರಿ ವಿರುದ್ಧ ಮೊದಲ ಸೆಟ್‍ನ ಆಘಾತದಿಂದ ಚೇತರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿ ಫೈನಲ್‍ನಲ್ಲಿ ನಿಕ್ ಕಿರ್ಗೋಸ್ ಅವರನ್ನು ಎದುರಿಸಲು ಅರ್ಹತೆ ಪಡೆದರು.

ಶುಕ್ರವಾರ ಸೆಂಟರ್‌ ಕೋರ್ಟ್‍ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸೆಟ್ ಅನ್ನು 2-6 ರಿಂದ ಕಳೆದುಕೊಂಡ ಜೊಕೊವಿಕ್ ಬಳಿಕ ಆಟದ ಲಯ ಕಂಡುಕೊಂಡು 6-3, 6-2, 6-4 ಅಂತರದಿಂದ ಪಂದ್ಯ ಗೆದ್ದರು. ಈ ಗೆಲುವಿನೊಂದಿಗೆ ಜೊಕೊವಿಕ್ ಅತಿಹೆಚ್ಚು ಗ್ರ್ಯಾಂಡ್‍ಸ್ಲಾಂ ಫೈನಲ್ (32) ತಲುಪಿದ ದಾಖಲೆಗೆ ಪಾತ್ರರಾದರು. ರೋಜರ್ ಫೆಡರರ್ 31 ಹಾಗೂ ರಫೇಲ್ ನಡಾಲ್ 30 ಬಾರಿ ಫೈನಲ್ ತಲುಪಿದ್ದಾರೆ. ಜೊಕೊವಿಕ್ ಸತತ ನಾಲ್ಕನೇ ವಿಂಬಲ್ಡನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇಲ್ಲಿ ಗೆದ್ದರೆ ದಾಖಲೆ ಏಳು ಬಾರಿ ವಿಂಬಲ್ಡನ್ ಕಿರೀಟ ಧರಿಸಿದಂತಾಗುತ್ತದೆ.

ENG vs IND: ಭಾರತ-ಇಂಗ್ಲೆಂಡ್ 2ನೇ ಟಿ20ಗೆ ಇದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

ಇದನ್ನೂ ಓದಿ
Image
ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
Image
Ravindra Jadeja: ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ ಜಡೇಜಾ
Image
IND vs ENG: 5 ತಿಂಗಳ ನಂತರ ಶಾರ್ಟ್ ಫಾರ್ಮ್ಯಾಟ್‌ಗೆ ಕೊಹ್ಲಿ ರೀ ಎಂಟ್ರಿ; ವಿಫಲವಾದರೆ ಸ್ಥಾನಕ್ಕೆ ಕುತ್ತು!
Image
IND vs ENG: ಯುವರಾಜ್ ದಾಖಲೆ ಮುರಿದ ಹಾರ್ದಿಕ್; ಮೊದಲ ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಆಲ್ ರೌಂಡರ್

ಟೇಲರ್‌ ಫ್ರಿಟ್ಸ್‌ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ತೀವ್ರ ಕಿಬ್ಬೊಟ್ಟೆ ನೋವಿಗೆ ಸಿಲುಕಿದ ರಾಫೆಲ್‌ ನಡಾಲ್‌, ಆಗಲೇ ಸೆಮಿಫೈನಲ್‌ನಿಂದ ಹಿಂದೆ ಸರಿಯುವ ಕುರಿತು ಪ್ರಸ್ತಾವಿಸಿದ್ದರು. ಗುರುವಾರ ತಡರಾತ್ರಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. “ನನ್ನ ಪ್ರಕಾರ ಪಂದ್ಯದ ಮಧ್ಯದಲ್ಲಿ ಹಿಂದೆ ಸರಿಯುವುದು ತೀರಾ ಕಷ್ಟದ ಕೆಲಸ, ನಾನು ಟನಿಸ್ ವೃತ್ತಿಜೀವನದಲ್ಲಿ ಈಗಾಗಲೇ ಕೆಲವು ಬಾರಿ ಪಂದ್ಯಗಳ ನಡುವೆ ರಿಟೈರ್ ಆಗಿದ್ದೇನೆ ಹಾಗೂ ಅದು ನಾನು ಹೆಚ್ಚಾಗಿ ದ್ವೇಷಿಸುವ ವಿಷಯ ಕೂಡ ಹೌದು, ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯದೇ ಮುಂದುವರಿಸಿದೆ”, ಎಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯದ ಸಮಸ್ಯೆ ನಡುವೆ ಗೆಲುವು ಸಾಧಿಸಿದ ಬಳಿಕ ನಡಾಲ್ ಹೇಳಿದ್ದರು.

ಇತ್ತ ಅಮೆರಿಕನ್‌-ಬ್ರಿಟನ್‌ ಜೋಡಿಯಾದ ಡಿಸೈರ್‌ ಕ್ರಾಜಿಕ್‌-ನೀಲ್‌ ಸ್ಕಪ್‌ಸ್ಕಿ ವಿಂಬಲ್ಡನ್‌ ಮಿಶ್ರ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಫೈನಲ್‌ ಮುಖಾಮುಖಿಯಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆನ್‌-ಸಮಂತಾ ಸ್ಟೋಸರ್‌ ವಿರುದ್ಧ ಕ್ರಾಜಿಕ್‌-ಸ್ಕಪ್‌ಸ್ಕಿ 6-4, 6-3 ಅಂತರದ ಗೆಲುವು ಸಾಧಿಸಿದರು. 1997ರ ಬಳಿಕ ವಿಂಬಲ್ಡನ್‌ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಂಡ ಮೊದಲ ಜೋಡಿ ಎಂಬ ಹೆಗ್ಗಳಿಕೆ ಕ್ರಾಜಿಕ್‌-ಸ್ಕಪ್‌ಸ್ಕಿ ಅವರದಾಯಿತು. ಅಂದು ಜೆಕ್‌ ಸೋದರ-ಸೋದರಿಯರಾದ ಸಿರಿಲ್‌ ಸುಕ್‌-ಹೆಲೆನಾ ಸುಕೋವಾ ಈ ಸಾಧನೆಗೈದಿದ್ದರು.

ENG vs IND: ಇಂದು ದ್ವಿತೀಯ ಟಿ20: ಕಿಂಗ್ ಕೊಹ್ಲಿಗೆ ಜಾಗ ಕೊಡುವವರು ಯಾರು? ಪಂತ್, ಜಡ್ಡು ಕೂಡ ಕಮ್​ಬ್ಯಾಕ್

Published On - 9:37 am, Sat, 9 July 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ