Rafael Nadal: ರಾಫೆಲ್ ನಡಾಲ್​ನಿಂದ ಶಾಕಿಂಗ್ ನಿರ್ಧಾರ: ವಿಂಬಲ್ಡನ್ ಸೆಮಿ ಫೈನಲ್​ನಿಂದ ಹಿಂದೆ ಸರಿದ ಸ್ಪ್ಯಾನಿಷ್ ಸ್ಟಾರ್

Wimbledon: ಕಿಬ್ಬೊಟ್ಟೆಯ ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿಯುವುದಾಗಿ ರಾಫೆಲ್ ನಡಾಲ್ ಗುರುವಾರ ಘೋಷಿಸಿದರು.

Rafael Nadal: ರಾಫೆಲ್ ನಡಾಲ್​ನಿಂದ ಶಾಕಿಂಗ್ ನಿರ್ಧಾರ: ವಿಂಬಲ್ಡನ್ ಸೆಮಿ ಫೈನಲ್​ನಿಂದ ಹಿಂದೆ ಸರಿದ ಸ್ಪ್ಯಾನಿಷ್ ಸ್ಟಾರ್
Rafael Nadal
Follow us
| Updated By: Vinay Bhat

Updated on:Jul 08, 2022 | 9:01 AM

22 ಬಾರಿ ಟೆನಿಸ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಸ್ಪ್ಯಾನಿಷ್ ಸ್ಟಾರ್ ಆಟಗಾರ ರಾಫೆಲ್ ನಡಾಲ್ (Rafael Nadal) ವಿಂಬಲ್ಡನ್ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ಇಂದು ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ (Nick Kyrgios) ಎದುರು ಅವರು ಸೆಮಿಫೈನಲ್ ಆಡಬೇಕಿತ್ತು. ಆದರೆ, ಕಿಬ್ಬೊಟ್ಟೆಯ ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿಯುವುದಾಗಿ ರಾಫೆಲ್ ನಡಾಲ್ ಗುರುವಾರ ಘೋಷಿಸಿದರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿ, ಶುಕ್ರವಾರದಂದು ತಮ್ಮ ಆಟ ಮುಂದುವರೆಸುವುದಾಗಿ ಹೇಳಿದ್ದರು. ಆದರೆ, ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ನಿಕ್ ಕರ್ಗಿಯೋಜ್ ಗೆ ವಾಕ್ ಓವರ್ ಲಭಿಸಿದ್ದು, ಸುಲಭವಾಗಿ ಫೈನಲ್ ತಲುಪಿದ್ದಾರೆ. ಇನ್ನೊಂದೆಡೆ, ವಿಂಬಲ್ಡನ್​​ನಿಂದ (Wimbledon) ನಿರ್ಗಮಿಸಿದ ನಡಾಲ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಸೋಲಿಸಿರುವ ನಡಾಲ್, ಈ ಮೂಲಕ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದರು. ಈ ಪಂದ್ಯದ ಸಂದರ್ಭದಲ್ಲಿ ಅವರಿಗೆ ಹೊಟ್ಟೆ ನೋವು ಬಾಧಿಸಿದೆ. ಆದರೂ ಛಲ ಬಿಡದೆ 4 ಗಂಟೆ 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 3-6, 7-5, 3-6, 7-5, 7-6 ಅಂತರದಲ್ಲಿ ಜಯ ದಾಖಲಿಸಿದ್ದರು.

Rohit Sharma: ಈವರೆಗೆ ಯಾವೋಬ್ಬ ಕ್ರಿಕೆಟಿಗ ಮಾಡಿಲ್ಲ: ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ
Image
IND vs ENG 1st T20 Playing 11: ಟಾಸ್ ಗೆದ್ದ ಭಾರತ ಬ್ಯಾಟಿಂಗ್; ಉಭಯ ತಂಡಗಳ ಪ್ಲೇಯಿಂಗ್ XI ಹೀಗಿದೆ
Image
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ; ಕೋಚ್ ದ್ರಾವಿಡ್‌ಗೆ ಹೆಚ್ಚಿದ ಆತಂಕ
Image
IND vs ENG: ಇಂಗ್ಲೆಂಡ ತಂಡವನ್ನು ಕಾಡುತ್ತಿವೆ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಗಳು..!
Image
IND vs SL: 3ನೇ ಏಕದಿನ ಪಂದ್ಯದಲ್ಲೂ ಲಂಕಾಗೆ ಸೋಲು; ಸರಣಿ​ ಕ್ಲೀನ್ ಸ್ವೀಪ್ ಮಾಡಿದ ಭಾರತ ವನಿತಾ ತಂಡ

”ನನ್ನ ಪ್ರಕಾರ ಪಂದ್ಯದ ಮಧ್ಯದಲ್ಲಿ ಹಿಂದೆ ಸರಿಯುವುದು ತೀರಾ ಕಷ್ಟದ ಕೆಲಸ, ನಾನು ಟನಿಸ್ ವೃತ್ತಿಜೀವನದಲ್ಲಿ ಈಗಾಗಲೇ ಕೆಲವು ಬಾರಿ ಪಂದ್ಯಗಳ ನಡುವೆ ರಿಟೈರ್ ಆಗಿದ್ದೇನೆ ಹಾಗೂ ಅದು ನಾನು ಹೆಚ್ಚಾಗಿ ದ್ವೇಷಿಸುವ ವಿಷಯ ಕೂಡ ಹೌದು, ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯದೇ ಮುಂದುವರಿಸಿದೆ” ಎಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯದ ಸಮಸ್ಯೆ ನಡುವೆ ಗೆಲುವು ಸಾಧಿಸಿದ ಬಳಿಕ ನಡಾಲ್ ಹೇಳಿದ್ದರು.

ನಡಾಲ್ ಈ ಬಾರಿಯ ಟೂರ್ನಿಯಲ್ಲಿ3ನೇ ಗ್ರ್ಯಾಂಡ್ ಸ್ಲ್ಯಾಮ್ ಹಾಗೂ ಒಟ್ಟಾರೆ 23ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಉತ್ಸಾಹದಲ್ಲಿದ್ದರು. ನೆದರ್ಲೆಂಡ್ಸ್ ತಂಡದ ಆಟಗಾರ ಬೊಟಿಕ್ ಜಾಂಡ್ ಶುಪ್ ಅವರನ್ನು ಮಣಿಸಿ ಅಂತಿಮ ಎಂಟರ ಘಟ್ಟವನ್ನು ಕೂಡ ಪ್ರವೇಶಿಸಿದ್ದರು. ಎಂಟರ ಘಟ್ಟದಲ್ಲಿ 14ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಜುಲೈ 6ರಂದು ಎದುರಿಸಿದ ರಾಫೆಲ್ ನಡಾಲ್ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಗಾಯದ ಸಮಸ್ಯೆಯ ನಡುವೆಯೂ 24 ವರ್ಷದ ಟೇಲರ್ ಫ್ರಿಟ್ಜ್ ರನ್ನು 3-6, 7-5, 3-6, 7-5, 7-6(10-4) ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡರು.

4 ಗಂಟೆ 20 ನಿಮಿಷಗಳವರೆಗೆ ನಡೆದ ಈ ಹಣಾಹಣಿಯಲ್ಲಿ ಟೇಲರ್ ಫ್ರಿಟ್ಜ್ ವಿರುದ್ಧ 5 ಸೆಟ್‌ಗಳ ಅಂತರದಲ್ಲಿ ರಾಫೆಲ್ ನಡಾಲ್ ಗೆದ್ದರೂ ಸಾಕಷ್ಟು ಪ್ರಯಾಸ ಪಡಬೇಕಾಗಿತ್ತು. ಸೆಮಿಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯದ ಆಟಗಾರ ಮೇವರಿಕ್ ನಿಕ್ ಕರ್ಗಿಯೋಸ್ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಗಾಯದ ಸಮಸ್ಯೆ ಉಲ್ಬಣವಾಗಿದ್ದರಿಂದ ಪಂದ್ಯದಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.

IND vs ENG: ಹಾರ್ದಿಕ್ ಆಲ್ರೌಂಡ್ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್: ಭಾರತಕ್ಕೆ 50 ರನ್​ಗಳ ಅಮೋಘ ಜಯ

Published On - 9:01 am, Fri, 8 July 22

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್